ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೪

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೩೩


ಅಸತ್ಯವಿಲ್ಲ ಎಂದು ಹೇಳಿದನು.
ಬೀರಬಲನು ಅವರ ಸಮಗ್ರ ವೃತ್ತಾಂತವನ್ನು ಕೇಳಿಕೊಂಡು ಮರುದಿನ ಬರುವಂತೆ ಆಜ್ಞಾಪಿಸಿದನು ಮತ್ತು ಹಣದಚೀಲವನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಂಡನು ಅವರೀರ್ವರು ಹೊರಟುಹೋದಮೇಲೆ ಆ ಚೀಲ ದೊಳಗಿಂದ ಕೆಲವು ರೂಪಾಯಿಗಳನ್ನೂ ಚಿಲ್ಲರೆ ಹಣವನ್ನೂ ತೆಗೆದು ನೀರಿನಲ್ಲಿ ತೊಳೆಯಿಸಿದೆನು ಕಿಂಚಿತ್ತಾದರೂ ತೈಲಾಂಶವು ಹೊರಡಲಿಲ್ಲ ಆದರೆ ದುರ್ಗಂಧವು ಹೊರಹೊರಟಿತು ಇದರಿಂದ ಈ ಹಣವು ಕಟುಕರವನದೇ ಎಂದು ನಿಶ್ಚಯಿಸಿಕೊಂಡನು.
ಮರುದಿವಸ ನಿಯತವಾದ ಸಮಯಕ್ಕೆ ವಾದಿಯೂ, ಪ್ರತಿವಾದಿಯೂ ಬಂದರು ಬೀರಬಲನು ಅವರಿಬ್ಬರ ಕೈಯಲ್ಲಿಯೂ, ಧರ್ಮಗ್ರಂಥವನ್ನು ಕೊಟ್ಟು ಶಪಥಮಾಡು ಎಂದು ಹೇಳಿದನು. ಇಬ್ಬರೂ ಶಪಥಮಾಡಿದರು ಬೀರಬಲನು ಕಟುಕನವಶಕ್ಕೆ ಯಾವತ್ತೂ ಹಣವನ್ನು ಕೊಟ್ಟು ತೈಲ ವಿಕ್ರಯಿಯಿಗೆ ಉಚಿತ ದಂಡನೆಯನ್ನು ವಿಧಿಸಿದನು.–
೧೭೬, ಮಣಿಪುರದ ದೊರೆಯು ಬೀರಬಲನ ನ್ಯಾಯ
ಚಾತುರ್ಯವನ್ನು ಪರೀಕ್ಷಿಸಿದ್ದು.
ಮಣಿಪುರದ ದೊರೆಯಾದ ಚಂದ್ರಕಾಂತನೆಂಬವನು, ಬೀರಬಲನ ಪ್ರಖ್ಯಾತಿಯನ್ನು ಕೇಳಿ, ಅವನ ಜಾಣತನವನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ಪ್ರಚ್ಛನ್ನ ವೇಷಧಾರಿಯಾಗಿ ದಿಲ್ಲಿಗೆ ಬಂದನು. ಆ ಪಟ್ಟಣದ ಬೀದಿಯಲ್ಲಿ ಕುಂಟನಾದ ಒಬ್ಬ ಬಿಕ್ಷುಕನು ಬೆಟ್ಟಿಯಾದನು ಅವನಿಗೆ, ಇವನು ಮಣಿಪುರದ ದೊರೆಯೆಂದು ಅವನಿಗೆ ಬೋಧೆಯಾಗಲಿಲ್ಲ ಅದರಿಂದ ಅವನು ಮಹಾರಾಜ ! ನಾನು ಒಂದು ಅತ್ಯವಶ್ಯಕವಾದ ಕಾರ್ಯಸಾಧನೆ ಗೋಸುಗ ಪಟ್ಟಣವನ್ನು ಶೀಘ್ರವಾಗಿ ಪ್ರವೇಶ ಮಾಡಬೇಕಾಗಿತ್ತು; ಆದರೆ ನನ್ನ ಪಾದಗಳಲ್ಲಿ ವಿಲಕ್ಷಣವಾದ ಒಂದು ಶೂಲಿಯು ಅಕಸ್ಮಾತ್ತಾಗಿ ಉತ್ಪನ್ನ ವಾದ್ದರಿಂದ ಹೋಗಲಸಮರ್ಥನಾಗಿ, ಇಲ್ಲಿ ಕುಳಿತುಕೊಂಡಿದ್ದೇನೆ ಅದರಿಂದ ಕೃಪಾಳುಗಳಾದ ತಾವು ನನ್ನನ್ನು ತಮ್ಮ ಬೆನ್ನಿನ ಹಿಂದೆ ಕೂಡ್ರಿಸಿಕೊಂಡು ಕರೆದುಕೊಂಡು ಹೋದರೆ, ಬಹಳೇ ಉಪಕಾರವಾಗುವದು, ಎಂದು ಬೇಡಿಕೊಂಡನು ಆಗ ಚಂದ್ರಕಾಂತನು ಅವನ ದುರ್ದಶೆಯನ್ನು ನೋಡಿ, ಕನಿಕರಪಟ್ಟು ಹಿಂದೆ ಕುಳ್ಳಿರಿಸಿಕೊಂಡು ಹೊರಟನು ಕುಂಟನು ತನ್ನ ಇಚ್ಛಿತಸ್ಥಾನವು ಪ್ರಾಪ್ತವಾದ ಕೂಡಲೆ, ರಾಜನಿಗೆ ಇಳಿಯಿರಿ ! ಎಂದು ಹೇಳಿದನು ಆಗ ಚಂದ್ರಕಾಂತನು - ಎಲೋ ನಾನು ನಿನ್ನನ್ನು ಕೂಡ್ರಿಸಿ