ಕೊಂಡು ಇಲ್ಲಿಯವರೆಗೆ ಬಂದದ್ದಕ್ಕೆ ಈ ಪ್ರಕಾರವಾಗಿ ಉಪಕಾರವನ್ನು ತೀರಿಸುವಿಯಾ? ಎಂದು ಕೇಳಿದನು ಈ ಮಾತಿಗೆ ಆ ಭಿಕ್ಷುವು - ಕುದುರೆಬಿಟ್ಟು ಇಳಿಯೆಂದು, ನನಗೆ ಅಪ್ಪಣೆ ಮಾಡುತ್ತೀಯಾ? ಇದು ನನ್ನ ಕುದುರೆಯು ಹೀಗಿದ್ದು ನನ್ನ ಮೇಲೆಯೇ ಅಪರಾಧವನ್ನು ಹೊರಿಸುತ್ತಾನೆ ನೋಡಿದಿರಾ ! ಎಂಥ ಧರ್ಮದ ದಿವಸಗಳು ಪ್ರಾಪ್ತವಾದವು ನೋಡಿರಿ, ಎಂದುಅನ್ನಹತ್ತಿದನು.
ಈ ಪ್ರಕಾರ ಉಭಯತರು ಪಟ್ಟಣದ ಮಧ್ಯಬೀದಿಯಲ್ಲಿ ವಾದ ವಿವಾದ ಮಾಡುತ್ತ ನಿಂತುಕೊಂಡರು, ನೆರೆಹೊರೆಯವರು ನೆರೆದರು ಈ ವ್ಯಾಜ್ಯದ ವರ್ತಮಾನವು ಬೀರಬಲನ ಕಿವಿಯವರೆಗೆ ಹೋಯಿತು ಆಗ ಅವನು
ಅವರಿಬ್ಬರನ್ನು ಕರೆಯಿಸಿಕೊಂಡು ಸತ್ಯವಾದ ಸಂಗತಿ ಯೇನೆಂದು ವಿಚಾರಿ
ಸಿದನು ಆಗ ಮಣಿಪುರದ ದೊರೆಯು ವ್ಯಾಜ್ಯದ ಆದ್ಯೋಪಾಂತ ಸಂಗತಿಯನ್ನು ವಿವರಿಸಿದನು ಆಮೇಲೆ ಬಿಕ್ಷುಕನು ಮುಂದೆಬಂದು - ಮಹಾರಾಜ!
ನಾನು ನನ್ನ ಕುದುರೆಯೆಮೇಲೆ ಕುಳಿತುಕೊಂಡು, ಈ ಪಟ್ಟಣಕ್ಕೆ ಬರಹತ್ತಿದೆನು ಮಾರ್ಗದಲ್ಲಿ ಇವನು ಬಂದು ಇದು ನನ್ನ ಕುದುರೆ; ಕೆಳಗೆ ಇಳಿ; ಎಂದು ನಿರ್ಭಂದಿಸ ಹತ್ತಿದ್ದಾನೆ ಸತ್ಯವಾದ ಸಂಗತಿಯನ್ನು ವಿಜ್ಞಾಪನೆ ಮಾಡಿಕೊಂಡಿದ್ದೆನೆ ಯೋಗ್ಯವಾದ ನಿರ್ಣಯದಿಂದ, ನನ್ನ ಕುದುರೆಯು ನನ್ನ ಕೈವಶವಾಗುವಹಾಗೆ ಮಾಡಿರಿ ಎಂದು ವಿಜ್ಞಾಪನೆ ಮಾಡಿಕೊಂಡನು ಅದಕ್ಕೆ
ಬೀರಬಲನು - ಈ ದಿವಸ ಈ ಕುದುರೆಯು ನನ್ನ ಹತ್ತಿರದಲ್ಲಿಯೇ ಇರಲಿ
ಪ್ರಾತಃಕಾಲದಲ್ಲಿ ಇದರ ನಿರ್ಣಯ ಮಾಡುವೆನು; ಎಂದು ಹೇಳಿ ಅವರಿಬ್ಬ
ರನ್ನೂ ಕಳುಹಿಸಿಕೊಟ್ಟನು.
ಮರುದಿವಸ ಮಣಿಪುರದ ದೊರೆಯೂ ಬಿಕ್ಷುಕನೂ ನಿಯತವಾದ ಸಮಯಕ್ಕೆ ನ್ಯಾಯಾಸ್ಥಾನಕ್ಕೆ ಬಂದರು ಉಭಯತರ ಕಡೆಯಿಂದಲೂ, ಪ್ರಮಾಣವನ್ನು ಮಾಡಿಸಿದನು. ಆಮೇಲೆ ಕುಂಟ ಬಿಕ್ಷುಕನನ್ನು ಕುರಿತು ನಿನ್ನ ಅಶ್ವವು , ಬಾದಶಹರ ಅಶ್ವಶಾಲೆಯಲ್ಲಿ ಅದೆ ಅದನ್ನು ತೆಗೆದುಕೊಂಡು
ಬಾ, ಎಂದು ಹೇಳಿದನು ಆ ಅಶ್ವಶಾಲೆಯಲ್ಲಿ ಅಸಂಖ್ಯಾತವಾದ ಅಶ್ವಗಳು
ಇದ್ದವು ಅದರಲ್ಲಿ ತನ್ನ ಅಶ್ವ ಯಾವದೆಂಬದು ತಿಳಿಯದೆ ಹೋಯಿತು. ಆ
ಮೇಲೆ ಚಂದ್ರಕಾಂತನನ್ನು ಕಳುಹಿ ಕೊಟ್ಟನು ಅವನು ಅಶ್ವಶಾಲೆಯಲ್ಲಿ
ಕಾಲಿಟ್ಟ ಕೂಡಲೆ ಅವು ತನ್ನ ಯಜಮಾನನನ್ನು ಗುರುತಿಸಿ ಹೇಷಾರವವನ್ನು ಮಾಡಿತು ಈ ಸಂಗತಿಯನ್ನು ಅಶ್ವ ಶಾಲೆಯ ಅಧ್ಯಕ್ಷನು ಬೀರಬಲನಿಗೆ ತಿಳಿಸಿದನು ಆಗ ಬೀರಬಲನು ಆ ತುರಗವನ್ನು ಚಂದ್ರಕಾಂತನಿಗೆಕೊ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೫
ಈ ಪುಟವನ್ನು ಪ್ರಕಟಿಸಲಾಗಿದೆ
೩೩೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.