ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೦೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೩೫


ಡಿಸಿ, ಭಿಕ್ಷುಕನಿಗೆ, ಐವತ್ತು ಪೆಟ್ಟುಗಳನ್ನು ಬಲವಾಗಿ ಹೊಡೆಯಿರಿ : ಎಂ ದು ಅಪ್ಪಣೆ ಮಾಡಿದನು.
ಆಮೇಲೆ ಚಂದ್ರಕಾಂತನು - ತಾವು ಈ ನ್ಯಾಯ ವಿಮರ್ಶೆಯನ್ನು ಯಾವ ಆಧಾರದಮೇಲಿಂದ ಮಾಡಿದಿರಿ? ಎಂದು ಕೇಳಿದನು ಅದಕ್ಕೆ ಬೀರ ಬಲನು - ಈ ಹೆಳವನು ಅಶ್ವಶಾಲೆಗೆ ಹೋಗಿನೋಡಲು, ಇವನಿಗೆ ಕುದುರೆ ಯ ಗುರುತವು ಸಹ ಹತ್ತಲಿಲ್ಲ ನೀವು ಹೋದಕೂಡಲೆ, ಕುದುರೆಯು ಆ ನಂದದಿಂದ ಹೇಷಾರವವನ್ನು ಮಾಡಹತ್ತಿತು ಇಷ್ಟೇ ಆಧಾರದ ಮೆಲಿಂದ ಇದು ನಿಮ್ಮ ಕುದುರೆಯೆಂದು ನಿರ್ಣಯಿಸಿ, ನಿಮ್ಮ ವಶಕ್ಕೆ ಕೊಡಿಸಿದೆನು, ಎಂ ದು ಹೇಳಿದನು ಆಗ ಚಂದ್ರಕಾಂತನು ತನ್ನ ನಿಜಸ್ಥಿತಿಯನ್ನು ಮರೆಮಾಚಿ ಕೊಂಡು, ತನ್ನ ದೇಶಕ್ಕೆ ಹೊಟುಹೋನು, ಆ ತನ್ನ ದೇಶದಲ್ಲಿ ಬೀರಬಲನ ಚಾತುರ್ಯವನ್ನು ಬಹುವರಿಯಾಗಿ ಹೊಗಳಿದನು.

೧೭೭. ಕಮ್ ಅಸಲಕಾ ಅಸಲ, ಅಸಲಕಾ ಕಮ್ ಅಸಲ, ಗದ್ದೀಕಾ ಗಧಾ , ಔರಬಾಜಾರಕಾ ಕುತ್ತಾ

ಮಲಿಯಾಳ ದೇಶದಧಿಪತಿಯಾದ ರೋಹಸೇನನು " ಕಮ್ ಅಸಲ ಕಾ ಅಸಲ, ಅಸಲಕಾ ಕಮ್ ಅಸಲ, ಗದ್ದೀಕಾ ಗಧಾ ಔರ ಬಾಜಾರ ಕಾಕು ತಾ ” ಈ ನಾಲ್ಕು ವಸ್ತುಗಳನ್ನು ಶೀಘ್ರವಾಗಿ ಕಳಿಸಿ ಕೊಡಿರಿ ; ಇಲ್ಲವಾ ದರೆ ಯುದ್ಧಸಿದ್ಧತೆಯನ್ನು ಮಾದಿರಿ ! ಎಂಬ ಅಭಿಪ್ರಾಯ ಗರ್ಭಿತವಾದ ಒಂದು ಲೇಖನವನ್ನು ಬರೆದು, ದೂತ, ಮುಖಾಂತರವಾಗಿ ಅಕಬರ ಬಾದ ಶಹನಿಗೆ ಕಳುಹಿಸಿ ಕೊಟ್ಟನು ಬಾದಶಹನು ಆ ಪತ್ರಿಕೆಯನ್ನೊದಿಕೊಂಡ ಕೂಡಲೆ ಮ್ಲಾನವದನನಾಗಿ ಕುಳಿತುಕೊಂಡನು. ಅಷ್ಟರಲ್ಲಿ ಬೀರಬಲನು ಬಂದು ಮುಖವು ಮ್ಲಾನವಾದ ಕಾರಣವೇನೆಂದು ಕೇಳಿದನು. ಬಾದಶಹನು ಆ ಲೇಖನವನ್ನು ಬೀರಬಲನ ಕೈಯಲ್ಲಿತ್ತು ಇದರಲ್ಲಿ ಲೇಸಿರುವ ಪದಾ ರ್ಥಗಳು ದೊರೆಯುವದು ಅಸಂಭವವು ವ್ಯರ್ಥವಾಗಿ ಪ್ರಾಣಹಾನಿ ಯಾಗು ವದಲ್ಲಾ ! ! ಎಂದು ಚಿಂತಿಸುತ್ತೇನೆ ” ಎಂದು ಹೇಳಿದನು. ಆಗ ಬೀರಬಲ ನು " ಈ ಪದಾರ್ಥಗಳು ದೊರೆಯುವದು ಅಸಂಭವವಲ್ಲ ಸ್ವಲ್ಪ ಶ್ರಮಸಾ ಧ್ಯದಿಂದ ದೊರೆಯುವವು ಅದಕ್ಕೋಸುಗ ಮಲೆಯಾಳದಧಿವನಿಗೆ ಒಂದು ವರುಷದವಧಿ ಯೊಳಗಾಗಿ ಕಳುಹಿಸಿಕೊಡುತ್ತೇನೆ ” ಎಂಬದಾಗಿ ಪ್ರತ್ಯು ತರವನ್ನು ಬರೆದು ಕಳುಹಿಸಿರಿ ನಾನು ಈ ಪದಾರ್ಥಗಳನ್ನು ಒದಗಿಸಿಕೊ ಡುತ್ತೇನೆ ಎಂದು ಹೇಳಿದನು. ಬೀರಬಲನ ಸಮ್ಮತಿಯಿಂದ ಬಾದಶಹನು, ಮಲಿಯಾಳದ ಅರಸನಿಗೆ ಪ್ರತ್ಯುತ್ತರವನ್ನು ಬರೆದು ಕಳುಹಿಸಿದನು ಬೀರಬ