" ಬಾಜಾರಕಾಕುತ್ತಾ ” ಎಂಬದು, ಈ ಕೊತವಾಲನು ಹ್ಯಾಗಂದರೆ, “ ಯಜಮಾನನು ತನಗೆ ಆಹಾರವನ್ನು ಹಾಕುತ್ತ ಜೋಪಾಸನೆ ಮಾಡುತ್ತಿರು
ವಾಗ ಮಾತ್ರ ಶುನಕವು ಒಡೆಯನ ಸುತ ಮುತ್ತು ಚಲ್ಲಾಟವಾಡಿ ಅವನ
ಮಾನಾನಂದವನ್ನು ಮಾಡುತ್ತಿರುವಂತೆ ಈ ಕೊತವಾಲನು ನನ್ನೊಡನೆ ಕೆ
ಲವು ದಿವಸ ಸ್ನೇಹಿತನಂತೆ ನಟಿಸಿ, ಈ ನನ್ನ ಹೆಂಡತಿಯು ರಾಜಪುತ್ರನ
ಕೊಲೆಯ ಸಂಗತಿಯನ್ನು ತಿಳಿಸಿದಕೂಡಲೆ, ಹಿಂದಿನ ಉಪಕಾರವನ್ನೆಲ್ಲ ಮ
ರೆತು ಬಿಟ್ಟು, ಅವಳು ಹೇಳಿದ ಸಂಗತಿಯು ಸತ್ಯವಾದದ್ದೋ, ಅಥವಾ ಮಿ
ಥ್ಯವಾದದ್ದೋ ಎಂಬದನ್ನು ಸಹಾ ವಿಚಾರಿಸದೆ, ನನ್ನನ್ನು ಚತುರ್ಭುಜನ
ನ್ನಾಗಿ ಮಾಡಿ, ತಮ್ಮ ಸನ್ನಿಧಿಗೆ ತಂದು ನಿಲ್ಲಿಸಿದನು. ಇನ್ನು ನಾಲ್ಕನೇ ವ
ಸ್ತುವಾದ " ಗದ್ದಿಕಾ ಗಧಾ ” ಎಂಬದು ಆವಸ್ತುವು ತಾವೇ ಆಗಿರುವಿರಿ !
ಯಾಕಂದರೆ, ಕೊತವಾಲನು ನನ್ನನ್ನು ತಮ್ಮ ಸನ್ನಿಧಿಯಲ್ಲಿ ತಂದು ನಿಲ್ಲಿಸಿ
ನಾನು ಮಾಡಿದ ಅಪರಾಧವನ್ನು ಅರುಹಲು, ತಾವು ಯಾವಸಂಗತೆಯ
ನ್ನೂ ಅನ್ವೇಷಣ ಮಾಡದೆ ನನ್ನ ತಲೆ ಹೊಡೆಯುವಂತೆ ಅಪ್ಪಣೆ ಮಾಡಿಬಿಟ್ಟ
ರಿ ! ಇಷ್ಟೇ ಅಲ್ಲ, ಈ ಕಾಲದ ವರೆಗೂ, ರಾಜ ಪುತ್ರನು ಜೀವದಿಂದ ಇರುವ
ನೋ, ಅಥವಾ ಮೃತನಾಗಿರುವನೋ ಎಂಬದರ ಕಡೆಗೆ ಲಕ್ಷ್ಯವನ್ನೇ ಕೊಡ
ಲಿಲ್ಲ. ಇನ್ನೂ ಆ ಕರಬೂಜಿ ಹಣ್ಣಿನ ತುಂಡುಕಳು ಹಾಗೇ ಪೆಟ್ಟಿಗೆಯಲ್ಲಿವೆ
ಬೇಕಾದರೆ ತರಿಸಿಕೊಂಡು ನೋಡಬೇಕು ನಿಮ್ಮ ನಾಲ್ಕು ವಸ್ತುಗಳು ನಿಮಗೆ
ಮುಟ್ಟಿದವು ಈ ಬಗ್ಗೆ ಪ್ರತ್ಯುತ್ತರವನ್ನು ದಯಪಾಲಿಸಬೇಕು” ಎಂದು ಬಿ
ನ್ನವಿಸಿದನು.
ಈ ಪ್ರಕಾರ ಬೀರಬಲನ ಕಥನವನ್ನು ಕೇಳಿ, ಮಲಿಯಾಳದರಸನು
ಬಹಳ ಸಂತೋಷಹೊಂದಿ, ಅವನ ಚಾತುರ್ಯವನ್ನು ಬಹು ಪರಿಯಾಗಿ
ಪ್ರಶಂಸ ಮಾಡಿದನು. ನಾಲ್ಕು ವಸ್ತುಗಳು ತಲುಪಿದವೆಂದು, ಪ್ರತಿ ಲೇಖವ
ನ್ನು ಕೊಟ್ಟು ವಸ್ತ್ರಾಭರಣಗಳಿಂದ ಸನ್ಮಾನಿಸಿ ಅಪ್ಪಣೆ ಕೊಟ್ಟನು ಬೀ
ರಬಲನು ತನ್ನ ಸತಿಯನ್ನೂ, ಆ ವೇಶೈಯನ್ನೂ ಕರೆದುಕೊಂಡು ದಿಲ್ಲಿಗೆ
ಹೊರಟು ಬಂದನು.
ಆಮೇಲೆ ಬಾದಶಹನಿಗೆ ಬೆಟ್ಟಯಾಗಿ ಯಾವತ್ತು ವೃತ್ತಾಂತವನ್ನು
ಕಥನಮಾಡಿದನು ಅದನ್ನು ಕೇಳಿಬಾದಶಹನು ಸಂತುಷ್ಟನಾಗಿ, ಬಹಳೇ ಸ
ನ್ಮಾನಿಸಿದನು.
...
೧೭೮. ಟೂಟ, ಘಾಟ, ಸಡೇಕೊ, ಕೈಸೇ ವಿಧಿ ಸರಾಹಿಯೇ! ”
ಒಂದುಸಾರೆ ಬಾದಶಹನು, ಈ ಮೇಲೆ ಹೇಳಿದ ಸಮಸ್ಯೆಯನ್ನು ಕೊ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೩
ಈ ಪುಟವನ್ನು ಪ್ರಕಟಿಸಲಾಗಿದೆ
೩೪೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.