ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೧೪

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೪೩


ಟ್ಟು ಪೂರ್ಣಮಾಡು ! ಎಂದು ಹೇಳಿದನು ಬೀರಬಲನು ಆ ಕೂಡಲೆ ಈ ಕೆ ಳಗಿನ ಪದ್ಯವನ್ನು ರಚಿಸಿ ಹೇಳಿದನು

"ಟೂಟೇಪರ ಈಖ ತಾಕಿ ಮಿಶ್ರೀ ಗುಡ ಕಂದಕರೀ
ತಾಕೋ ಲೈಪ್ರಸಾದ ದೇವ ದೇವಿನ ಚಢಾಯಿಯೇ |
ಘಟಕ ಕಪಾಸ ಪತ ರಾಖತ ಹೈ ಆ ಲಮಕಿ,
ತಾಕೇ ಹೊತ ವಸ್ತ್ರ ಕಹಾ ಕಹಾ ಲೌಗಿನಾಇಯೇ |
ಸಡೇಜ ಬಸನ ತಾಕೇಶ್ವೇತ ವರ್ಣ ಕಾಗಜ್ ಕರೀ :
ತಾವರ ಕುರಾನ ಔರ ಪುರಾನಹೂ ಲಿಖಾಇಯೇ|
ಕಹೈ ಬೀರಬಲ ಸುನೋಅಕಬರ ಬಾದಶಾಹ
ಟೂಟೆ ಘಾಟ ಸಡೇಕೋ ಐಸಿ ವಿಧಿ ಸರಾಹಿಯೇ |

ಇದರ ಅರ್ಥವು ಕೆಳಗೆ ಬರೆದಂತೆ ಅದೆ " ಟೂಟೇ " ಅಂದರೆ ಮುರಿ ದದ್ದು, ಯಾವದು? ಕಬ್ಬು ಅಂದರೆ ಇಕ್ಷುದಂಡವು ಕಬ್ಬನ್ನು ಮುರಿದುತಂ ದು, ಗಾಣಕ್ಕೆ ಹಾಕಿ, ರಸವನ್ನು ತೆಗೆದು, ಕೊಪ್ಪರಿಗೆಯಲ್ಲಿ ಸುರುವಿ, ಕಾ ಯಿಸಿ, ಬೆಲ್ಲ, ಸಕ್ಕೆರೆ, ಕಲ್ಲುಸಕ್ಕರೆ, ಮೊದಲಾದ ಪದಾರ್ಥಗಳನ್ನು ಸಿದ್ಧಪ ಡಿಸಿ, ಪರಮೇಶ್ವರನಿಗೆ ಅರ್ಪಿಸಬೇಕು.
"ಘಾಟೇ ” ಅಂದರೆ ಒಡೆದದ್ದು. ಅದು ಯಾವದೆಂದರೆ ಹತ್ತಿಯು ( ಕಾರ್ಪಸ ) ಹೊಲದಲ್ಲಿ ಬಿತ್ತಿದ ಹತ್ತಿಯು ಕಾಯಾಗಿ ಒಡೆದಮೇಲೆ ಅದನ್ನು ಬಿಡಿಸಿ ತಂದು, ರಾಟಿಗೆ ಹಾಕಿ ನೂಲು ಮಾಡಿ, ವಸstraಗಳನ್ನು ನೆಯಿದು, ಅನೇಕ ಪ್ರಕಾರದ ಬಟ್ಟೆಗಳನ್ನು ಮಾಡಿಕೊಳ್ಳಬೇಕು.
" ಸಡೇಸೋ” ಅಂದರೆ ಕೊಳೆತದ್ದು ಅದು ಯಾವದು? ಕಾಗದವು ಅನೇಕ ಪ್ರಕಾರದ ಹರಕು ಬಟ್ಟಿಗಳನ್ನು ತಂದು, ಕೊಳೆಹಾಕಿ, ಅವುಕೊ ಳೆತಮೇಲೆ ಅದರೊಳಗಿನ ಮಲವನ್ನೆಲ್ಲ ತೆಗೆದು ಸ್ವಚ್ಛಮಾಡಿ ಕಾಗದವನ್ನು ಸಿದ್ಧಪಡಿಸಬೇಕು. ಆಮೇಲೆ ಅದರಮೇಲೆ ಪುರಾಣ, ಇತಿಹಾಸ ಮೊದಲಾದ ಅನೇಕ ಧರ್ಮಗ್ರಂಥಗಳನ್ನು ಬರೆದು ಇಡಬೇಕು ಎಂದು ಸಮಸ್ಯೆಯನ್ನು ಪೂರ್ಣ ಮಾಡಿದನು. ಅದನ್ನು ಕೇಳಿ ಬಾದಶಹನು ಬಹಳಸಂತೋಷವನ್ನು ಹೊಂದಿದನು.
-(೧೭೯. ಕೇಹೀ ಕಾರಣ ಪ್ರಾತ ಬಾಫಾತ ಹೈ ಪಾನೀ)-
ಹಿಮಂತ ಋತುವು ಆರಂಭವಾಗಿತ್ತು ಒಂದು ದಿವಸ ಬಾದಶಹನು ತನ್ನ ಪ್ರಾಸಾದದ ಅಗ್ರಭಾಗದಲ್ಲಿ ಕುಳಿತುಕೊಂಡು ಬಿಸಿಲನ್ನು ಕಾಯಿಸಿ ಕೊಳ್ಳುತ್ತಿದ್ದನು. ಆಗ ಅವನ ದೃಷ್ಟಿಯು ಯಮುನಾಜಲದಲ್ಲಿ ಹೊರಡುವ