ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೫

ಈ ಪುಟವನ್ನು ಪ್ರಕಟಿಸಲಾಗಿದೆ
೩೫೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು,


-(೧೯೧. ಬೀರಬಲನು ಪರುಷಮಣಿಯಾಗಿದ್ದಾನೆ.)-


ಅಕಬರ ಬಾದಶಹನಿಗೂ, ಇರಾಣದ ಬಾದಶಹನಿಗೂ, ಒಂದುಸಾರೆ ಯಾವದೋ ಒಂದುಕಾರದನಿಮಿತ್ಯದಿಂದ ಸಮಾಗಮವಾಗಿತ್ತು ಆಗ ಇರಾ ಣದ ಬಾದಶಹನು ಅಕಬರನನ್ನು ಕುರಿತು ನಿಮ್ಮ ಸಂಗ್ರಹದಲ್ಲಿ ವರುಷ ಮಣಿಯುಂಟೋ ! ” ಎಂದು ಪ್ರಶ್ನೆ ಮಾಡಿದನು. ಆಗ ಅಕಬರನು ಬೀರಬ ಲನ ಕೈ ಹಿಡಿದು ಇವನೇ ನನ್ನ ಸಂಗ್ರಹದಲ್ಲಿದ್ದ ಪರುಷಮಣಿಯು, ಎಂದು ಹೇಳಿ ಈ ಕೆಳಗಿನ ಪದ್ಯವನ್ನು ಹೇಳಿದನು.
ಉದ್ಯಮನೆ ಲಕ್ಷ್ಮಿ, ಮಿಲ್ಲೈ ಮಿಲ್ಲೈದ್ರವ್ಯನೇ ಮಾನ : ದುರ್ಲಭ ವಾರಸ ಜಗತಮೆ, ಮಿಲನೋ ಮೀತಸುಜಾನ || ಅಂದರೆ ಉದ್ಯೋಗದಿಂದ ಲಕ್ಷ್ಮಿ ಪ್ರಾಪ್ತವು, ದ್ರವ್ಯದಿಂದ ಂದ ಮಾನವು ಸಿಗುತ್ತದೆ. ಸುಜನರು ಮಿತಿಯಿಂದ ದೊರೆಯುತ್ತಾರೆ. ಆದರೆ ಪರುಷಮಣಿ ಯು ದುರ್ಲಭವು, ಈಮಾತಿಗೆ ಇರಾಣದ ಬಾದಶಹನು ಒಪ್ಪಿಕೊಂಡನು.

-(೧೯೨. ದೌಲತ ಹಾಜೀರಹೈ.)-

ಒಂದುದಿವಸ ಅಕಬರ ಬಾದಶಹನು ತನ್ನ ದೌಲತ ಎಂಬ ಪರಿಚಾರ ಕನನ್ನು ಕೆಲಸದಿಂದ ದೂರಮಾಡಿದನು, ಇದಕ್ಕೆ ಏನು ಉಪಾಯ ಮಾಡ ಬೇಕೆಂದು ದೌಲತನು ಬೀರಬಲನಿಗೆ ಹೋಗಿ ಕೇಳಿದನು. ಆಗ ಬೀರಬಲನು ನೀನು ಒಂದುದಿವಸ ಅರಮನೆಯ ಮಹಾದ್ವಾರದ ಹತ್ತಿರಬಂದು ದೌಲತ ಹಾಜೀರಹೈ ಇರಬೇಕೆ ? ಹೋಗಬೇಕೋ, ಎಂದು ಗಟ್ಟಿಯಾಗಿ ಕೂ ಗು ಎಂದು ಹೇಳಿ ಕಳುಹಿಸಿದನು. ಅವನು ಬೀರಬಲನ ಹೇಳಿಕೆಯಂತೆ ಮಾ ಡಿದನು. ಆಗ ಬಾದಶಹನು ದೌಲತನನ್ನು ಹಿಂದಕ್ಕೆ ಕರಯಿಸಿ ಕೊಂಡು- " ದೌಲತ ಹಮಾರೆಯಹಾ ಸದಾ ಬನೀರಹೈ” ಅಂದರೆ ದೌಲತನು ನಮ್ಮಲ್ಲಿ ಯಾವಾಗಲೂ ಇರಲಿಕ್ಕೇ ಬೇಕು ಎಂದನು. ಇಂಥ ಭಾವಗರ್ಭಿತ ವಾಕ್ಯ ವನ್ನು ಕೇಳಿ ಸಭಾಸದರು ನಕ್ಕುನಕ್ಕು ಬಿದ್ದರು.

—( ೧೯೩, ನಜರಾಂಚೆ ರಹಿಮಾನ. )—


ಒಂದುದಿವಸ ಅಕಬರ ಬಾದಶಹನು ಮೃಗಯಾವಿಹಾರಕ್ಕೆ ಹೋಗಿ ದ್ದನು , ಎರಡುಪ್ರ ಹರ ಸಮಯವಾಯಿತು ಆಗ ಅವನು ನಮಾಜ ಅಂದರೆ ದೇವರಧ್ಯಾನಕ್ಕೆ ಕುಳಿತುಕೊಂಡನು. ಆಗ ವಿರಹಿಣಿಯು ತನ್ನ ಪ್ರಿಯನನ್ನು ಹುಡುಕುತ್ತ ಅಕಬರನು ಕುಳಿತಿದ್ದ ಸ್ಥಳಕ್ಕೆ ಬಂದು, ಬಾದಶಹನು ಕಳೆದು ಇಟ್ಟ ವಸ್ತ್ರಗಳನ್ನು ತುಳಿಯುತ್ತಹೋದಳು. ಆಗ ಅವನು ಎಲೈ ಸುಂದರಿ ಯೇ ! ನೀನುಬಹಳೇ ಅಸಾವಧಳೂ ಧಿಕ್ಕಳೂ ಇದ್ರಂತೆ ಕಾಣುತ್ತದೆ ನನ್ನ