ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೬

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೫೫



ಬಟ್ಟೆಗಳನ್ನು ನೀನುತುಳಿದಕಾರಣವೇನುಎಂದುಕೇಳಿದನು ಆಗಆ ಸ್ತ್ರೀಯು ನರರಾಚೀ ಸುಝ ನಹೀ ತುಮಕಸಲಖ್ಯೆ ಸುಜಾನ ಪಢ ಕುರಾನ ಚಾರೇಭಯೇ ನಹಿರಾಂಚೇ ರಹಿಮಾನ |
ಖಾವಂದ ? ನಾನಂತೂ ಬುದ್ಧಿಯಿಲ್ಲದವಳು, ಆದರೆ ನೀನು ಕುರಾನ ವನ್ನು ಓದಿದವನೂ, ಸದ್ಯಕ್ಕೆ ನಮಾಜ ಮಾಡುತ್ತ ಕುಳಿತ ಸುಜನನೂ, ಆಗಿದ್ದು ನನ್ನ ಮೇಲೆ ನಿನ್ನ ದೃಷ್ಟಿಯು ಯಾಕೆಬಿತ್ತು. ನೀನು ಮಾಡುತ್ತಿ ರುವ ಭಕ್ತಿಯು ಕೇವಲ ಬಹಿರಂಗವಾಗಿದ್ದಂತೆ ಕಾಣುತ್ತದೆ ಎಂದಳು. ಈ ಮಾತುಗಳನ್ನು ಕೇಳಿದಕೂಡಲೇ ಬಾದಶಹನು ಲಜ್ಜಿತನಾಗಿ ಆ ಸ್ತ್ರೀಯಳಿಗೆ ವಾರಿತೋಷಕವನ್ನು ಕೊಟ್ಟು ಕಳುಹಿಸಿದನು ಮತ್ತು ಅಂತಃ ಪುರಕ್ಕೆ ಬಂದು ಬೀರಬಲನನ್ನು ಕರೆಯಿಸಿ ಈ ಸಂಗತಿಯನ್ನು ತಿಳಿಸಿದನು ಬಿಬಲನು ಆ ಸ್ತ್ರೀಯಳನ್ನು ಪ್ರಶಂಸೆ ಮಾಡಿದನು.

-(೧೯೪, ಬದನೇಕಾಯಿ ಹಲ್ಲೆ.) -


ಒಂದುದಿನ ಬಾದಶಹನು ಬೀರಬಲನ ಮುಂದೆ ಬದನೇಕಾಯಿಯು ಬ ಹಳೇ ಉತ್ತಮ ಪದಾರ್ಥವೆಂದು ಪ್ರಶಂಸೆ ಮಾಡಹತ್ತಿದನು, ಆಗ ಬೀರಬ ಲನು " ಅಹುದು; ಮಹಾರಾಜ ! ಅಂತೇ ಜನರು ಅದನ್ನು ತಿನ್ನು ತಾರೆ, ಎಂದು ಹೇಳಿದನು. ಮುಂದೆ ಕೆಲವು ದಿವಸಗಳಾದಮೇಲೆ ಅಕಬರನು ಬದನೇ ಕಾಯಿಯನ್ನು ಬಹಳ ನಿಂದಿಸಿದನು. ಆಗ ಬೀರಬಲನು " ಖಾವಂದ ! ಇದ ರಿಂದ ರೋಗೋತ್ಪತ್ತಿಯಾಗುತ್ತದೆ, ಮತ್ತು ಬಹಳೇ ವಾತವಾಗುವದು; ?? ಎಂದನು. ಈ ಮಾತನ್ನು ಕೇಳಿದಕೂಡಲೇ ಬಾದಶಹನಿಗೆ ಕೋಪವುಂಟಾ ಯಿತು ಆಗ ಬೀರಬಲನನ್ನು ಕುರಿತು ಬೀರಬಲ್ಲ ! ನೀನು ಬಹಳೇ ಅಸತ್ಯ ವಾದವನ್ನು ಮಾಡುತ್ತಿರುವಿ, ಹ್ಯಾಗಂದರೆ ಬದನೇಕಾಯಿಯು ಶ್ರೇಷ್ಠವಾ ದದ್ದೆಂದು ಹೇಳಿದವನೂ ನೀನೇ. ಈಗ ಹಳಿಯುವವನೂ ನೀನೇ; ಹೀಗೇಕೆ ಎಂದು ಕೇಳಿದನು, ಆಗ ಬೀರಬಲನು ನಮ್ರತೆಯಿಂದ ಪೃಥ್ವಿನಾಥ ನಾನು ನಿಮ್ಮ ಆಧಾರಕನೋ, ಅಥವಾ ಬದನೇಕಾಯಿಯ ಆಜ್ಞಾಧಾರಕನೊ ಎಂದನು, ಈ ಮಾತನ್ನು ಕೇಳಿದಕೂಡಲೆ ಬಾದಶಹನಿಗೆ ನಗೆಯು ಬಂತು,

-( ೧೯೫ ಅಪ್ಸರೆಯ ಮತ್ತು ಡಾಕಿನಿಯೂ.) -

ಒಂದುದಿವಸ ಬಾದಶಹನು. "ಬೀರಬಲ್ಲ ! ನನಗೆ ಒಬ್ಬ ಅಪ್ಸರೆಯಂ ನೂ ಒಬ್ಬ ಡಾಕಿನಿಯನ್ನೂ ತೋರಿಸು ” ಎಂದು ಹೇಳಿದನು. ಮರುದಿವಸ ಬೀರಬಲನು ತನ್ನ ಪತ್ನಿಯನ್ನೂ, ಒಬ್ಬ ವೇಶ್ಯಾಂಗನೆಯನ್ನೂ ಕರೆತಂದು ಭೂವರ ! ಈ ನನ್ನ ಪತ್ನಿಯು ಅಪ್ಸರೆಯಕ್ಕಿಂತಲೂ ಶ್ರೇಷ್ಠಳಾಗಿರುವಳು,