ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ.


ಅತ್ಯಲ್ಪ ಕಾಲದೊಳಗಾಗಿ ತನ್ನ ಬುದ್ಧಿಸಾಮಥ್ಯದಿಂದಲೂ ಸಮಯೋಚಿತ ಮಾತು ಕಥೆಗಳಿಂದಲೂ ಬಾದಶಹನನ್ನು ಪ್ರಸನ್ನೀಕರಿಸಿಕೊಂಡನೆಂತಲೂ ಇವನ ಅಗಲುವಿಕೆಯಿಂದ ಬಾದಶಹನಿಗೆ ವ್ಯಸನವುಂಟಾಗುತ್ತಿತ್ತೆಂತಲೂ, ಉಲ್ಲೇಖಿಸಿದ್ದಾರೆ.
ಬೀರಬಲನ ವೃದ್ಧಿಯಾ, ಪ್ರತಿಷ್ಠಿತೆಯ ಮತ್ತು ವಿಶೇಷ ಇತಿಹಾಸಸಂಗತಿಯಾ,
ಬೀರಬಲನು ಕೇವಲ ಸಭಾಚತುರನೂ ಕೇಳಿದ ಪ್ರಶ್ನೆಗೆ ತಕ್ಷಣ ದಲ್ಲಿ ಸಮರ್ಪಕ ಉತ್ತರಕೊಡುವದರಲ್ಲಿ ಧುರೀಣನೂ ಇದ್ದದ್ದಲ್ಲದೆ ಅವನಲ್ಲಿ ಕವಿತಾಚಾತುರ್ಯವೂ ಇತ್ತೆಂಬಂತೆ ಕಂಡು ಬರುತ್ತದೆ ಅವನು ಸಮಯಾ ನುಸಾರವಾಗಿ ತನ್ನ ಸಣ್ಣ ಸಣ್ಣ ಮನೋಹರವಾದ ಕವಿತೆಗಳಿಂದ ಬಾದ ಶಹನನ್ನು ಪ್ರಸನ್ನನ್ನಾಗಿ ಮಾಡಿಬಿಡುತ್ತಿದ್ದನು ಅವನ ಕವಿತೆಗಳನ್ನು ಕೇಳಿ ಆಕಾಲದಲ್ಲಿದ್ದ ಕವಿಗಳೆಲ್ಲರೂ ತಲೆದೂಗೂತ್ತಿದ್ದರೂ ಬಾದಶಹನು ಇವನ ಕವಿತಾಚಾತುರ್ಯವನ್ನು ಕಂಡು ಮೊದಲು " ಕವಿರಾಯನೆಂದು ಪದ ವಿಯನ್ನು ಕೊಟ್ಟನು ಆಮೇಲೆ ಇವನ ನ್ಯಾಯವಿಮರ್ಶೆಯನ್ನು ಕಂಡು "ರಾಜ" ನೆಂಬ ಪದವಿಯನ್ನಿತ್ತು ತನ್ನ ಅಮಾತ್ಯಗಣದಲ್ಲಿ ಸೇರಿಸಿಕೊಂಡನು ಮತ್ತು ನಗರಕೋಟದ ಸುತ್ತ ಮುತ್ತಲಿನ ಪ್ರದೇಶವನ್ನು ಜಹಾಗೀರಾಗಿ ಕೊಟ್ಟು ಬಿಟ್ಟನು ಆ ಮೇಲೆ ಕೆಲವು ಕಾಳಗಗಳಲ್ಲಿ ಬೀರಬಲನು ತನ್ನ ಕೌ ರ್ಯವನ್ನು ಪ್ರಕಟಪಡಿಸಿದ್ದರಿಂದ ಬಾದಶಹನು “ ವೀರವರ ” ನೆಂಬ ಬಹು ಮಾನದ ಪದವಿಯನ್ನಿತ್ತನು.
ಆ ಸಮಯದಲ್ಲಿ ನಗರಕೋಟದಲ್ಲಿ ಕಟೋಚ' ಜಾತಿಯ ರಜಪೂತ ನಾದ ಜಯಚಂದನೆಂಬವನು ಆಳುತ್ತಿದ್ದನು ಅವನು ಪ್ರಾಯಶಃ ಬಾದಶಹ ನ ಅಂಕಿತನಾಗಿಯೇ ಇದ್ದನು ಸಂವತ್ ೧೬೨೯ ನೇದರಲ್ಲಿ ಬಾದಶಹನು ಯಾವದೋ ಒಂದು ಕಾರಣದಿಂದ ಕ್ರುದ್ದನಾಗಿ ಪಂಜಾಬದ ಸುಭೇದಾರ ನಾದ ಹುಸೇನ ಕುಲೀಖಾ ಎಂಬವನಿಗೆ ಒಂದು ಹುಕುಮನ್ನು ಬರೆದು ಕಳು ಹಿಸಿ “ ನಗರಕೋಟದ ರಾಜನನ್ನು ಬಂದಿಯನ್ನಾಗಿ ಮಾಡಿ, ಆರಾಜ್ಯವ ನ್ನು ಬೀರಬಲ್ಲನ ಸ್ವಾಧಿನ ಪಡಿಸಬೇಕೆಂದು ಅಪ್ಪಣಿಯನ್ನಿತ್ತನು.
ಆಗ ರಾಜಾ ಬೀರಬಲನು ಬಾದಶಹನ ಅನುಜ್ಞೆಯನ್ನು ಹೊಂದಿ ಲಾಹೋರಕ್ಕೆ ಹೋಗಿ ಹುಸೇನ ಕುಲೀಖಾನನಿಗೆ ಭೆಟ್ಟಿಯಾದನು ಆಗಖಾ ನನು ತನ್ನ ಸೈನ್ಯವನ್ನು ತೆಗೆದುಕೊಂಡು ಬೀರಬಲನ ಸಹಾಯಕ್ಕೆ ಹೊರ ಟನು. ಇವರಿಬ್ಬರೂ ಕೂಡಿಕೊಂಡು ಅರಣ್ಯವನ್ನು ಕಡಿಯುತ್ತಾ ರಜಪೂತ