ಬುಂದೇಲಖಂಡದವರು ಬೀರಬಲನು ತಮ್ಮ ದೇಶದವನೆಂದು ಹೇಳು
ತ್ತಾರೆ ಬೀರಬಲನು - ಟೆಹರಿ ” ಪಟ್ಟಣದ ನಿವಾಸಿಯೆಂದೂ ಚಿಕ್ಕಂದಿನಲ್ಲಿ
ಯೇ ಬಹುಬುದ್ದಿವಂತನಿದ್ದನೆಂದೂ ಹೇಳುತ್ತಾರೆ. ಬೀರಬಲನ ಸ್ಮರಣಶಕ್ತಿ
ಯು ಅಧಿಕವಾಗಿತ್ತು ಅವನು ಕಲಿತದ್ದನ್ನು ಎಂದೂ ಮರೆಯಲಿಲ್ಲ ಟಿಹರಿ
ಯಲ್ಲಿ ಕೆಲವು ದಿವಸ ವಿದ್ಯಾಭ್ಯಾಸಮಾಡಿ ಆಮೇಲೆ ಕಾಶೀಪಟ್ಟಣಕ್ಕೆ ಹೋ
ಗಿ ವಿದ್ಯೆಯನ್ನು ಕಲಿಯಹತ್ತಿದನು. ಇವನ ಬುದ್ಧಿಸಾಮರ್ಥ್ಯವನ್ನು ಕಂ
ಡು ಗುರುಗಳು ಅತ್ಯಾನಂದಿತರಾಗಿ ಕೆಲವು ವರುಷಗಳಲ್ಲಿಯೆ ಅದ್ವಿತೀಯ
ಪಂಡಿತನನ್ನಾಗಿ ಮಾಡಿಬಿಟ್ಟರು ಆಮೇಲೆ ಬೀರಬಲನು ದಿಲ್ಲಿಗೆ ಬಂದು ಅರ
ಬೀ ಪಾರಸಿ ವಿದ್ಯೆಯನ್ನು ಕಲಿತುಕೊಂಡನು ದಿಲ್ಲಿಯಲ್ಲಿ ಇರುವಕಾಲದಲ್ಲಿ
ಬೀರಬಲನ ದೇಹದಲ್ಲಿ ಯಾವದೋ ಒಂದು ಜಾಡ್ಯವು ಉತ್ಪನ್ನ ವಾಗಲು
ಅವನು ಒಬ್ಬ ವೈದ್ಯನ ಬಳಿಗೆ ಹೋದನು ಅವನು ಬೀರಬಲನಿಗೆ ಸರಿಯಾದ
ಔಷಧವನ್ನು ಕೊಟ್ಟು ರೋಗಮುಕ್ತನನ್ನಾಗಿಮಾಡಿ ರಾಜಾತೋಡರಮಲ್ಲನ
ಸಮೀಪಕ್ಕೆ ಕರದೊಯ್ದನು ತೊಡರಮಲ್ಲನು ಇವನ ಚತುರತನವನ್ನು ಪ
ರೀಕ್ಷಿಸಿ ಬಾದಶಹನಿಗೆ ಬೆಟ್ಟ ಮಾಡಿಸಿದನು ಬಾದಶಹನು ಇವನ ರಸಭರಿತ
ವಾದ ವಾಕ್ಚಾತುರ್ಯಕ್ಕೆ ಮೆಚ್ಚಿ ತನ್ನ ಹತ್ತಿರ ಇಟ್ಟುಕೊಂಡನು.
ಕೆಲಕೆಲವರ ಮತದಿಂದ ಬೀರಬಲನು ಕಾಶಿಯಲ್ಲಿ ಬ್ರಹ್ಮಘಾಟನಲ್ಲಿದ್ದ
ಬ್ರಾಹ್ಮಣನೆಂದೂ ಇವನು ವಿಕ್ರ ಮಾರ್ಕ ಸಂವತ್ ೧೬೧೭ ನೇದರಲ್ಲಿ ಜನ್ಮ
ತಾಳಿದನೆಂದ ಹೇಳುತ್ತಾರೆ .ಬೀರಬಲನು ಬರೆದ ಕೆಲವು ಗ್ರಂಥಗಳಲ್ಲಿ ತನ್ನ
ಉಪನಾಮವು ಈ ಬ್ರಹ್ಮಶಿಖಾ ” ಎಂದು ಉಲ್ಲೇಖಿಸಿದ್ದಾನೆ ಮೇಲೆಹೇಳಿದ
ಶಕದಲ್ಲಿ ಏನೋ ಹೆಚ್ಚುಕಡಿಮೆಯಿದ್ದಂತೆಕಂಡು ಬರುತ್ತದೆ ಯಾಕೆಂದರೆ
ಸಂವತ್ ೧೬೨೬ ನೇದರಲ್ಲಿ ಇವನು ಬಾದಶಹನ ದರಬಾರದಲ್ಲಿ ಪ್ರತಿಷ್ಟಿತ
ನಾಗಿದ್ದಂತೆಯೂ, ಅದೇ ವರುಷ ಅವನು ಅವನು ಮಲಬಾರದ ರಾಜನ ಮತ್ತು ಬಾದಶಹನ ನಡುವೆ ಇದ್ದ ನ್ಯಾಯವನ್ನು ತೀರಿಸಿದನೆಂತಲೂ ಕಂಡು
ಬರುತ್ತದೆ.
ದೇವೀಪ್ರಸಾದಜೀ ಮುನಸೀಫ ರಾಜಚೋಧಪುರ ಎಂಬವರು ತಮ್ಮ
ಗ್ರಂಥದಲ್ಲಿ ಹೀಗೆ ಉಲ್ಲೇಖಿಸಿರುವರಲ್ಲಾ “ ಬೀರಬಲನ ನಿಜವಾದ ಹೆಸರು
ಬ್ರಹ್ಮದಾಸನೆಂದೂ ಅದೇಜಾತಿಯ ಬ್ರಾಹ್ಮಣನೆಂದೂ ಬರೆದಿದ್ದಾರೆ ಇವನು
ಸಂಸ್ಕೃತ ಭಾಷೆಯಲ್ಲಿ ಅಸಾಧಾರಣ ಪಂಡಿತನಿದ್ದನೆಂತಲೂ ಪಾರಸಿ ಅರಬ್ಬಿ
ಭಾಷೆಗಳನ್ನು ಸಹಾ ಅರಿತಿದ್ದನೆಂತಲೂ ಹೇಳಿರುವರು ಯಾವಾಗ ಇ
ವನು ಅಕಬರ ಬಾದಶಹನ ಬಳಿಯಲ್ಲಿ ಬಂದು ನಿಂತುಕೊಂಡನೋ ಆಮೇಲೆ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨
ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ,
೭