ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೮

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ
೨೩

ಸಿದನು ಗೋವಧೆಯನ್ನು ನಿಲ್ಲಿಸಿದನು ಹಿಂದುಮುಸಲ್ಮಾನರಲ್ಲಿ ಇದ್ದ ದ್ವೇಷಬುದ್ಧಿಯನ್ನು ಕಡಿಮೆ ಮಾಡಿದನು ಇದರಿಂದ ಎರಡೂ ಪಕ್ಷದವರಲ್ಲಿಯ ವೈರಭಾವವು ನಿರ್ಮೂಲವಾಗಿ ಹೋಯಿತು. ಯಾವತ್ತೂ ಭಾರತ ವರ್ಷದಲ್ಲಿ ಶಾಂತತೆಯ ಸಾಮಾಜ್ಯವು ನೆಲೆಗೊಂಡಿತ್ತು.

ದಾ ತೃ ತ್ಯ

ಅಕಬರ ಬಾದಶಹನ ಕಾಲದಲ್ಲಿ ಬೀರಬಲನು ದಾತೃಗಳಲ್ಲಿ ಮೇಲಾದವನೆಂದು ಖ್ಯಾತಿಗೊಂಡಿದ್ದನು. ಹಿಂದುಗಳಲ್ಲಿಯಂತೂ ಅನೇಕ ಕವಿಗಳು ಇವನ ದಾತೃತ್ವವನ್ನು ವರ್ಣಿಸಿದ್ದಾರೆ ಇಷ್ಟೇ ಅಲ್ಲ; ಮುಸಲ್ಮಾನ ಕವಿಗಳು ರಚಿಸಿದ ಅನೇಕ ಗ್ರಂಥಗಳಲ್ಲಿ ಇನನ ದಾತೃತ್ವವು ವರ್ಣಿಸಲ್ಪಟ್ಟಿದೆ. "ಮಃಆಸಿರುಲ್ ಉಮರಾ" ಎಂಬ ಗ್ರಂಥದಲ್ಲಿ ಬರೆದಿರುವದೇನಂದರೆ;- "ರಾಜಾ ಬೀರಬಲನು ಆ ಕಾಲದಲ್ಲಿ ದಾನಿಗಳೆಂದು ಖ್ಯಾತಿಗೊಂಡವರಲ್ಲಿ ಮೊದಲನೆಯವನೆಂದೂ, ಪಾರಿತೋಷಕ, ಮತ್ತು ಉಪಹಾರಗಳನ್ನು ಕೊಡುವದರಲ್ಲಿ ಪ್ರಸಿದ್ಧನಾಗಿದ್ದನೆಂದೂ ವರ್ಣಿಸಿದ್ದಾರೆ” ಆಕಾಲದಲ್ಲಿದ್ದ ಕವಿಗಳು ಇವನ ಉದಾರತ್ವವನ್ನು ಅತ್ಯಧಿಕವಾಗಿ ಪ್ರಶಂಸೆ ಮಾಡಿದ್ದಾರೆ ಗಂಗಕವಿಯೆಂಬವನು ಈಪ್ರಕಾರ ವರ್ಣಿಸಿದ್ದಾನೆ.

ಶ್ಲೋಕ|| ದಿಲ್ಲಿಸೇನ ತಖ್ತ ತಖ್ತ ಬಖ್ತ ಮುಗಲನಸೆ ಹೋಯೇಹೈ | ಹೋ
ಯೇಹೈ ನಗರ ನಕರೂ ಆಗದೆ ನಗರಸೆ ಖಾನನವೆ ಖಾನ
ಖಾನಾ ರಾಜನಮೆ ರಾಜಾ ಮಾನ, ಹೌಹೈನ ಬಜೀರ ಕಹೂ
ಟನಡನ ಟೋಡರಸೆ ! ಕವಿಗಂಗಸೆ ಗುನೀ ನತಾನಸೇನ ತಾ
ನಧಾರೀ, ಬೂಚನಸೆ ನಕಾನುಗೊ ನದಾತಾ ಬೀರಬರಸೆ
ಸಾತದ್ಯೀಪಕೆ ಮಝೂರ ಸಾತವೂ ಸಮಂದ್ರವಾರ ಹೌಹೈ
ನಜಲಾಲ ದೀನ ಗಾಜೀ ಅಕಬರಸೆ ||

ಕೇಶವದಾಸನೆಂಬ ಕವಿಯು ಉರ್ಚ್ಛಾ ಪಟ್ಟಣದ ಅರಸನಾದ ಇಂದ್ರಜಿತನೆಂಬವನ ಓಲಗದಲ್ಲಿದ್ದನು ಅವನು ಯಾವದೋ ಒಂದು ಕಾರ್ಯದ ನಿಮಿತ್ತವಾಗಿ ಅಕಬರ ಬಾದಶಹನ ಓಲಗಕ್ಕೆ ಬಂದಿದ್ದನು. ಆಗ ಕೇಶವದಾಸನಿಗೆ ದ್ರವ್ಯದ ಅನಾನುಕೂಲತೆಯುಂಟಾಯಿತು. ಆಗ ಅವನು ಬೀರಬಲನ ಹತ್ತರ ಕೇಳಬೇಕೆಂದು ಬಂದನು. ಆಗ ಬೀರಬಲನು ತನ್ನ ಗೃಹದ ಹಿಂಭಾಗದಲ್ಲಿ ಕುಳಿತುಕೊಂಡಿದ್ದನು. ಆಗ ಕೇಶವದಾಸನಿಗೆ ಹೇಳಿ ಕಳುಹಿಸಿದ್ದೇನಂದರೆ; "ತಿರುಗಿ ಬರಬೇಕು, ಯಾಕಂದರೆ ನನಗೆ ಈಗ ಅಜೀರ್ಣವಾಗ ಹತ್ತಿದೆ, ಆದ್ದರಿಂದ ಹೊರಗೆ ಬರುವದಕ್ಕೆ ಅನುಕೂಲ್ಯವಿಲ್ಲ, ಕೇಶವ ದಾಸನು