ಈ ಮಾತನ್ನು ಕೇಳಿ ಈ ಕೆಳಗೆ ಬರೆದ "ದೋಹಾ" ಹೇಳಿದನು.
"ಯಕಜಾರ್‌ಯೋ ಸಬ ಜಗತ್, ಭಯೋ ಆಜೀರನ
ತೋಯ, ಅವಯಶಕೀ ಗೋಲೀ ದೇಊ ತತಕಾಲಹಿ ಶುಧ
ಹೋಯ ||೧||
ಈ ಮೇಲೆ ಬರೆದ ಕವಿತ್ವವನ್ನು ಓದಿಕೊಂಡ ಕೂಡಲೆ ಬೀರಬಲನು ಹೊರಗೆ ಬಂದನು ಕೇಶವದಾಸನು ಅವನನ್ನು ನೋಡಿದ ಕೂಡಲೆ ಈ ಸವಾಯಿಯನ್ನು ಹೇಳಿದನು. ಚ್ಯಿ
"ಭೂ ರವಿ ಪಚ್ಯಿಬಸೂ ನದನಾಗೆ ನವೀನದ ಲೋಕರಚೆ ದಶ
ಚಾರೀ | ಕೇಶವ ದೇವ ಅದೇವರಚೆ ನರದೇವರಚೆ ರಚನಾನಿ
ವಾರಿ ರಚಿಕೆ ನೃಪನಾಥ ಬಲೀ ಬಲಬೀರ ಭಯೋಕೃತಕೃತ್ಯ
ಮಹಾ ವೃತಧಾರಿ| ದೈಕರತಾರವನೋ ಕರತೋಹಿದ ಈ ಕ
ರತಾರದುಹೂಕರತಾರೀ||
ಈ ಪ್ರಕಾರ ಕೇಶವದಾಸನ ಕವಿತ್ವವನ್ನು ಕೇಳಿ ರಾಜಾ ಬೀರಬಲನು ಪ್ರಸನ್ನನಾಗಿ ತನ್ನ ಹತ್ತರ ಬರೆದು ಇಟ್ಟುಕೊಂಡಿದ್ದ ಆರುಕ್ರೋಡದಾಮ (ಹನ್ನೆರಡುವರಿಲಕ್ಷ ರೂಪಾಯಿಯ) ಹುಂಡೀ ಕಾಗದವನ್ನು ಆ ಕವೀಶ್ವರನಿಗೆ ಕೊಟ್ಟು ಬಿಟ್ಟನು. ಆಗ ಆ ಕವಿಯು ಎರಡನೇ ಸವಾಯಿಯನ್ನು ಹೇಳಿದನು.
"ಕೇಶವದಾಸಕೆ ಭಾಲ ಲಿಖ್ಯೋವಿಧಿ, ರಂಕಕೊ ಅಂಕಬನಾ
ಯ ಸವಾರ್‌ಯೊ| ದೊಯೆಧುಪ್ಯೊ ನಹಿಛೋಡೆ ವುಟ್ಯೋ
ಬಹುತೀರಥಕೆ ಜಲಜಾಯ ಪಖಾರ್ಯೋ| ಹ್ವೈಗಯೋ ರಂ
ಕಕೊ ರಾವ ತಬೈಜಬ ಬೀರಬಲೀ ನೃಪನಾಥನಿಹಾಹ್ಯೋ|
ಭೂಲಿಗೆಯೋ ಜಗಕೀ ರಚನಾ, ಚತುರಾನನ ಘಾರಿ ರಹ್ಯೋ
ಮುಖಚಾರ್‌ಯೋ || ೧ ||
ರಾಜಾ ಬೀರಬಲನು ದಿವಂಗತನಾಗಲು, ಆಕಾಲದಲ್ಲಿ ದುಃಖಿತರಾದ ಕೆಲವು ಕವಿಗಳು, ಕೆಲವು "ಮರ್ಸಿ" ಎಂಬ ಕವಿತೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಸಹಾ ಬೀರಬಲನ ದಾತೃತ್ವವನ್ನು ವರ್ಣಿಸಿದ್ದಾರೆ. ಸ್ವತಃ ಅಕಬರ ಬಾದಶಹನು ರಚಿಸಿದ "ಮರ್ಸಿ"ಗಳಲ್ಲಿ ಪ್ರಥಮ ದೋಹಾದಲ್ಲಿ ಈಪ್ರಕಾರ ವರ್ಣವು ಬಂದಿರುವದು ಕವಿಕೇಶವದಾಸನು ಸ್ಪಷ್ಟವಾಗಿ ತನ್ನ ಕವಿತ್ವದಲ್ಲಿ ಹೇಳಿದ್ದಾನೆ. ಬೀರಬಲನ ಮರಣದಿಂದ ದರಿದ್ರರಾದವರ ಗೃಹದಲ್ಲಿ ಸಹಾ ಶೋಕವು ಕೇಳಿ ಬರಹತ್ತಿತು ಆಶೋಕೋಕ್ತಿಗಳು ಈ ಪ್ರಕಾರವಿರುವವು.