ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೧

ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.



ಅವನು ಮಿಥ್ಯಾವಾದಿಯಾಗಿದ್ದಿಲ್ಲ ಆಗ ಅವನು ಹೇಳಿದ್ದೇನಂದರೆ, ಪೃಥ್ವಿನಾಥ, ನಾನು ನನ್ನ ಪತ್ನಿಯ ಹಸ್ತಸ್ಪರ್ಶವನ್ನು ದಿವಸಕ್ಕೆ ಒಂದೆರಡು ಸಾರೆಮಾತ್ರ ಮಾಡುತ್ತಿರುವೆನು ಆದರೆ ತಮ್ಮ ಕೈಗಳು ನೂರಾರು ಸರತಿಗಡ್ಡವನ್ನು ಹಿಡಿದುಕೊಳ್ಳುತ್ತವೆ, ಹೀಗಾದಮೇಲೆ ತಮ್ಮ ಗಡ್ಡದಲ್ಲಿರುವ ಕೂದಲುಗಳ ಸಂಖ್ಯೆಯು ತಮಗೆ ವಿದಿತವಾಗಿರಬಹು. ಆದರಿಂದ ಆಕೂದಲುಗಳ ಸಂಖ್ಯೆಯು ಎಷ್ಟಿರುವದೆಂಬುದನ್ನು ದಯಮಾಡಿ ಹೇಳಬೇಕು.
ಬೀರಬಲನ ಈ ಪ್ರಶ್ನೆಯಿಂದ ಬಾದಶಹನು ಕೆಲವು ಹೊತ್ತು ಸ್ತಬ್ಧನಾಗಿ ಕುಳಿತುಕೊಂಡು ಆಮೇಲೆ ಪುನಃ ನುಡಿದದ್ದೇನಂದರೆ, ಗಡ್ಡದೊಳಗಿನ ಕೂದಲುಗಳನ್ನು ಎಣಿಸಲು ಯಾರಿಗೂ ಸಾಧ್ಯವಲ್ಲ, ಆದರೆ ಕಂಕಣಗಳನ್ನು ನೀನು ಸಹಜವಾಗಿ ಲೆಕ್ಕ ಮಾಡಿರಬಹುದು ” ಬೀರಬಲನು ಅನ್ನು ತ್ತಾನೆ; “ ಮಹಾರಾಜ ಸ್ತ್ರೀಯರ ಮನಸ್ಸು ಚಂಚಲವಾದದ್ದು ಒಂದೊಂದುಸಾರೆ ಅವರು ಹೆಚ್ಚು ಕಂಕಣಗಳನ್ನು ಇಟ್ಟು ಕೊಳ್ಳುತ್ತಾರೆ ಒಂದೊಂದು ಸಾರೆ ಕಡಿಮೆ ಇಟ್ಟುಕೊಳ್ಳುತ್ತಾರೆ. ಆದರೆ ನೀವು ದಿನಾಲು ಅಂತಪುರಕ್ಕೆ ಎಷ್ಟೋ ಸಾರೆ ಹೋಗಿಬರುತ್ತಿರುತ್ತೀರಿ; ಅದರಿಂದ ಅಂತಃಪುರಕ್ಕೆ ಹತ್ತಿ ಹೋಗುವ ಸ್ಥಳದಲ್ಲಿ ಪಾವಟಿಗೆ (ಮೆಟ್ಟು) ಗಳು ಎಷ್ಟಿರುತ್ತವೆಂಬದನ್ನು ಲೆಕ್ಕಮಾಡಿರಬಹುದು "
ಬಾದಶಹನು ಅನ್ನುತ್ತಾನೆ: . ಬೀರಬಲ ? ನಾನು ಆ ಪಾವಟಿಗೆಗೆ ಳನ್ನು ಎಂದೂ ಎಣಿಸಿ ನೋಡಿಲ್ಲ.
ಬೀರಬಲನು ಆ ಮಾತಿಗೆ ಅನ್ನುತ್ತಾನೆ: “ ನೀವು ಸ್ಥಿರವಾದ ಪಾವಟಿಗೆಗಳನ್ನೇ ಎಣಿಸಿದಿದ್ದ ಮೇಲೆ, ನಾನು ಅನಿಯಮಿತವಾಗಿರುವ ಕಂಕಣಗಳನ್ನು ಎಣಿಸಿರುವ ಸಂಭವವು ಹೇಗೆ "
ಬಾದಶಹನು ಬೀರಬಲನ ಚಾತುರ್ಯದಿಂದ ಆನಂದವುಳ್ಳವನಾದನು

-( ೧೭ ನೂತನ ದಿವಾನ. )-

ಒಂದು ದಿವಸ ಬಾದಶಹನೂ ಬೀರಬಲನೂ ವಿನೋದದ ಮಾತುಗಳ ನಾಡುತ್ತ ಕುಳಿತುಕೊಂಡಿರಲು, ಬೀರಬಲನು ಬಾದಶಹನ ಚೇಷ್ಟೆಮಾಡಿ ನಕ್ಕನು, ಆಗ ಬಾದಶಹನ ಮನಸ್ಸು ಬೇರೆಕಡೆಗೆ ಇದ್ದದರಿಂದ, ಇವನು ನಗುವ ಧ್ವನಿಯನ್ನು ಕೇಳಿ, ಕೋಪವು ಬಂತು ಕೂಡಲೆ ಬಾದಶಹನು ಬೀರಬಲನ ಮನಸಿಗೆ ಹತ್ತುವಂತೆ ಮಾತಾಡಿದನು ಮೊದಲು ಅದು ಪರಿಹಾಸ ವೆಂದೇ ಬೀರಬಲನು ತಿಳಿದುಕೊಂಡನು ಆದರೆ ಬಾದಶಹನ ನೇತ್ರಗಳು ಹೆ