ಚ್ಚು ಹೆಚ್ಚು ಆರಕ್ತ ವರ್ಣವುಳ್ಳವುಗಳಾಗುವದನ್ನು ನೋಡಿ ಸುಮ್ಮನೆ ಕುಳಿತುಕೊಂಡನು ಈಕಾರಣದಿಂದಂತೂ ಬಾದಶಹನ ಕೋಪವು ಮಿತಿಮಾರಿತು ಆಗ ಬಾದಶಹನು, “ ಬೀರಬಲ ! ನೀನು ನನ್ನೊಡನೆ ವಾದಮಾಡುತ್ತಿಯಲ್ಲವೆ ? ನೀನು ಈ ದಿವಸದಿಂದ ನನ್ನ ಓಲಗಕ್ಕೆ ಬರಬೇಡ ಹೊರಟು
ಹೋಗು ? ” ಎಂದು ಹೇಳಿದನು. ಆಗ ಬೀರಬಲನು; ಬಾದಶಹನಿಗೆ ಅತಿಶಯಕೋಪವುಂಟಾಗಿರುವದರಿಂದ ಏನೂ ಮಾತಾಡದೆ ಸುಮ್ಮನೆ ಹೊರಟು
ಹೋದನು.
ಒಂದುತಿಂಗಳು ಕಳೆದು ಹೋಯಿತು ಬಾದಶಹನು ಬೀರಬಲನ ಹೆಸರನ್ನೇ
ಎತ್ತಲಿಲ್ಲ ದಿವಾನ ಪದವಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟನು.
ಬೀರಬಲನು ತನ್ನ ಕೆಲಸದಿಂದ ದೂರವಾದ ಮೇಲೆ ಒಂದು ತಿಂಗಳ
ವರೆಗೆ ಗೃಹದಲ್ಲಿಯೇ ವಾಸಮಾಡಿಕೊಂಡಿದ್ದನು. ಆ ಮೇಲೆ ಎಲ್ಲಿಯೋ
ಹೊರಟು ಹೋದನು. ಈ ಸಂಗತಿಯು ಅವನ ಮನೆಯವರಿಗೆ ಸಹಾ ತಿಳಿಯದೆ
ಹೋಯಿತು ಅವರು ಸ್ವಸ್ಥವಾಗಿ ದಿಲ್ಲಿಯಲ್ಲಿಯೆ ಇದ್ದು ಬಿಟ್ಟರು. ಈ ಪ್ರಕಾರ
ಮೂರು ತಿಂಗಳುಗಳು ಕಳೆದು ಹೋದವು.
ನೂತನವಾಗಿ ಬಂದ ದಿವಾನನ ಮೇಲೆ ಬಾದಶಹನ ನಂಬಿಗೆಯು
ಪೂರ್ಣವಾಗಿಲ್ಲ, ಅದರಿಂದ ಮತ್ತೊಬ್ಬ ದಿವಾನನ್ನು ನಿಯಮಿಸಿಕೊಳ್ಳ
ಬೇಕೆಂದು ಯೋಚಿಸಿ; “ ಯಾವ ಮನುಷ್ಯನು, ದಿಲ್ಲಿಯ ಓಲಗದಲ್ಲಿ ಕೇಳಲ್ಪ
ಡುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಗಳನ್ನು ಹೇಳುವನೋ ಅವನಿಗೆ ದಿವಾನಗಿರಿಯನ್ನು ಕೊಡುತ್ತೇನೆ, ಯಾವನಿಂದ ಎಲ್ಲ ಪ್ರಶ್ನೆಗಳ ಉತ್ತರವನ್ನು ಹೇಳಲಿಕ್ಕೆ ಆಗುವದಿಲ್ಲವೋ ಅಂಥವನನ್ನು ನಾವು ಸ್ಪೀಕರಿನ
ಲಾರೆವು ” ಎಂದು ಬರೆದು ಜಾಹೀರ ಪತ್ರಿಕೆಗಳನ್ನು ದೇಶದೇಶಗಳಿಗೆ ಕಳು
ಹಿಕೊಟ್ಟನು ಮುಂದೆ ಒಂದು ತಿಂಗಳಾದರೂ ಯಾರೂ ಬರಲಿಲ್ಲ ಆಗ ಬಾದ
ಶಹನು ಪುನಃ “ ಈಗ ನನ್ನ ದರಬಾರದಲ್ಲಿರುವವರು ಯಾರಾದರೂ ಕೇಳಿದ
ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಕೊಟ್ಟರೆ; ಅವರಿಗೆ ಸಹಾ ದಿವಾ
ನಗಿರಿಯ ಉಚ್ಚ ಪದವಿಯನ್ನು ಕೊಡುತ್ತೇನೆಂಬದಾಗಿ ” ಹೇಳಿದನು ಆದ
ರೂ ಯಾರೂ ಮುಂದೊರೆಯಲಿಲ್ಲ.
ಈ ಪ್ರಕಾರ ಷಣ್ಮಾಸಗಳು ಕಳೆದು ಹೋದವು ಆ ಮೇಲೆ ನಾಲ್ಕಾರು ಜನರು ದಿವಾನಗಿರಿಯನ್ನು ಹೊಂದಬೇಕೆಂಬ ಆಸೆಯಿಂದ ಬಂದು ಬಾದ
ಶಹನಿಗೆ ಬೆಟ್ಟಿಯಾದರು ಕೂಡಲೆ ಒಂದು ಮಹಾಸಭೆಯು ನೆರಸಲ್ಪಟ್ಟಿತು.
ಆಸಭೆಗೆ ದರಬಾರೀ ಜನರ ಹೊರತು ಬೇರೆಯವರಿಗೆ ಬರುವದಕ್ಕೆ ಪ್ರತಿಬಂ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೨
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೪೭