ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೭

ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,

ಕುರಿತು ಬಾದಶಹನು ಅನ್ನುತ್ತಾನೆ;-ನೀವು ಇಷ್ಟು ವಿಚಾರಮಗ್ನರಾದದ್ದು ಯಾಕೆ ! ಇದರ ಹೆಸರನ್ನು ಹೇಳುವಿರೋ ಇಲ್ಲವೋ ? ಎಂದು ಕೇಳಿದನು. ಅಷ್ಟರಲ್ಲಿ ಒಬ್ಬ ವರ್ತಕನು ಮುಂದೆಬಂದು ಸ್ವಲ್ಪ ಉದ್ದಿನಕಾಳುಗಳನ್ನು ಕೈಯಲ್ಲಿ ತೆಗೆದುಕೊಂಡು ಹೇಳಿದ್ದೇನಂದರೆ ಈ ಕಾಳುಗಳು ಬಹಳಮಾಡಿ ಜೋಳವಾಗಿರಬಹುದು ” ಎಂದನು. ಮತ್ತೊಬ್ಬನು. “ ಛೇ ಅಲ್ಲ ಮೆಣಸಿನ ಕಾಳುಗಳು” ಎಂದು ಹೇಳಿದನು. ಮೂರನೆಯವನು. ( ಸುಳ್ಳು ಇವುಕಡಲೆಯ ಕಾಳಿಗಿಂತ ಸಣ್ಣವಾಗಿವೆ; ಇವುಗಳ ಹೆಸರು ನೆನಪಿಗೆ ಬರಲೊಲ್ಲದು? ಎಂದು ಅನ್ನ ಹತ್ತಿದನು. ಇವರ ಮಾತುಗಳನ್ನು ಕೇಳಿ ಬಾದಶಹನು “ ನೀ ಎಲ್ಲರೂ ಭ್ರಾಂತರಾದಂತೆ ಕಾಣುತ್ತದೆ, ಇವು ಉಪ್ಪಿನಕಾಳುಗಳಲ್ಲವೇ ? ಎಂದನು. ಆಗ ವರ್ತಕನೊಬ್ಬನು ಅನ್ನುತ್ತಾನೆ ( ಹಾ ಹಾ ? ಖಾವಿಂದ ಅದೇ ಅದೇ, ಬಾದಕಹನು ( ಅದೇ ?” ಎಂದರೇನು ! ಹೆಸರು ಹೇಳಬಾರದೆ ಎಂದನು, ಅದಕ್ಕೆ ವರ್ತಕನು ಶ್ರೀನಾಥ ! ಇದೇ ಈಗನೀವು ಹೇಳದಿರಲ್ಲಾ; ಅದೇ ” ಅದಕ್ಕೆ ಬಾದಶಹನು ಪುನಃ ನಾನು ಈಗ ಯಾವಹೆಸರನ್ನು ಹೇಳಿದೆನು ? ವರ್ತಕನು ಖಾನಿಂದ ಆ ಹೆಸರು ಮರೆತುಹೋಯಿತು, ಬಾದಶಹನು “ ಏನು ? ಉದ್ದು ” ವರ್ತಕರು ಜಹಾಪನಾ ದೇ ? ಎಂದನು. ಇಷ್ಟಾದರೂ ಆ ವರ್ತಕರು " ಉದ್ದು ” ಎಂಬ ಹೆಸರನ್ನು ಹೇಳಲಿಲ್ಲ, ಇದನ್ನು ಕಂಡು ಬಾದಶಹನು ಸಂತುಷ್ಟನಾದನು.

-( ೧೯. ವಿಜ್ಞಾನವು ಅಧಿಕವೋ ! ದೇವರು ಅಧಿಕವೋ ? ) - -

ಒಂದು ಸಾರೆ ಅಕಬರ ಬಾದಶಹನ ಓಲಗದಲ್ಲಿ ಅನೇಕದೇಶದ ರಾಯಭಾರಿಗಳು ಕಪ್ಪವನ್ನು ಕೊಡಲೋಸುಗ ಮಿಲಿತರಾಗಿದ್ದರು. ಎಲ್ಲ ದರಬಾರದ ಜನರು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿ ಕುಳಿತುಕೊಂಡಿದ್ದರು,ಬಾದಶಹನ ಸಮ್ಮುಖದಲ್ಲಿ ವಾರಾಂಗನೆಯರ ನೃತ್ಯಗಾಯನಾದಿಗಳು ನಡೆದಿದ್ದವು ಪರದೇಶದ ರಾಯಭಾರಿಗಳು ಅನೇಕ ದುರ್ಮಿಳವಾದ ಪದಾರ್ಥಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಿದ್ದರು. ಆ ದಿವಸ ಬಾದಶಹನು ಸಾವಿರಾರುಜನ ಫಕ್ಕೀರರಿಗೂ, ಮುಲ್ಲಾ ಮೌಲವಿಗಳಿಗೂ ದಾನವನ್ನು ಕೊಟ್ಟನು. ಅಷ್ಯರಲ್ಲಿ ಬಾದಶಹನ ಮುಖ್ಯಗುರುವು ಬಂದನು, ಅವನಿಗೆ ಅನರ್ಘ್ಯವಾದ ಅನೇಕ ವಸ್ತುಗಳನ್ನು ಕಾಣಿಕೆಯಾಗಿ ಸಮರ್ಪಿಸಿದನು ಎಲ್ಲ ಜನರು ಆಶೀರ್ವಾದಮಾಡಿ ತಮ್ಮ ತಮ್ಮ ಸ್ಥಳಗಳನ್ನು ಕುರಿತು ಹೊರಟುಹೋದರು ಇದನ್ನೆಲ್ಲ ನೋಡಿ ಬೀರಬಲನಿಗೆ ಸ್ವಲ್ಪನಗೆಯು ಬಂತು, ಎಲ್ಲ ಕಾರ್ಯವು