ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೮

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೫೩


ಸಮಾಪ್ತಿಯಾದ ಮೇಲೆ ಬಾದಶಹನು- "ಬೀರಬಲ ದೇವರು ಅಧಿಕವೋ? ಅಥವಾ ವಿಶ್ವಾಸವು ಅಧಿಕವಾದದ್ದೋ" ಎಂದು ಪ್ರಶ್ನೆ ಮಾಡಿದನು. ಬೀರಬಲನು ಆಕ್ಷಣಕ್ಕೆ ಎದ್ದು ನಿಂತುಕೊಂಡು: "ಸ್ವಾಮಿಯೇ, ವಿಶ್ವಾಸವು ಅಧಿಕವಾದದ್ದು" ಎಂದು ಉತ್ತರಕೊಟ್ಟನು. ಬಾದಶಹ-- ವಿಶ್ವಾಸವು ಎಂದೂ ಅಧಿಕವಾಗಲಾರದು, ದೇವರಿದ್ದರೆ ವಿಶ್ವಾಸವುಂಟಾಗುವದು. ಬೀರಬಲ--ಹಾಗಲ್ಲ; ವಿಶ್ವಾಸದಿಂದಲೇ ದೇವರಲ್ಲಿ ಮಹತ್ವವುಂಟಾಗಿದೆ. ಬಾದಶಹ--(ಸ್ವಲ್ಪ ಕೃದ್ಧನಾಗಿ) ಬೀರಬಲ್ಲ ! ನೀನು ಹೇಳುವದು ಅಸಂಭಾವ್ಯವು, ದೇವರನ್ನು ಭಜನೆ ಮಾಡಿದರೆ ಅವನು ಪ್ರಸನ್ನನಾಗುವದಿಲ್ಲವೆ?

ಬೀರಬಲ-- ಅಹುದು, ನಿಜ; ನಾವು ದೇವರನ್ನು ವಿಶ್ವಾಸದಿಂದ ಭಜನೆ ಮಾಡಿದರೇ ಅವನು ಪ್ರಸನ್ನನಾಗುವನು. ಹಿಂದುಗಳಾದ ನಾವು ಮೂರ್ತಿ ಪೂಜಕರಾಗಿದ್ದೇವೆ, ಆದರೆ ಆ ಮೂರ್ತಿಗಳು ನಮಗೆ ಇಷ್ಟಾರ್ಥವನ್ನು ಕೊಡುವದಿಲ್ಲ. ನಾವು ಅವುಗಳಲ್ಲಿ ವಿಶ್ವಾಸವನ್ನಿಟ್ಟು ಪೂಜೆಮಾಡಿದರೇ ನಮ್ಮ ಮನೋಬಯಕೆಗಳು ಪೂರ್ಣವಾಗುವವು, ಇಲ್ಲದಿದ್ದರೆ ಇಲ್ಲಾ ?

ಈ ಮಾತಿಗೆ ಬಾರಹನು ಸಮ್ಮತಿಸದೇ. "ನೀನು ದೇವರಕಿಂತಲೂ ವಿಶ್ವಾಸವು ಅಧಿಕವಾದದ್ದೆಂದು ಪ್ರತ್ಯಕ್ಷ ಪ್ರಮಾಣದಿಂದ ತೋರಿಸುವಿಯಾ? ಎಂದು ಕೇಳಿದನು.

ಅದಕ್ಕೆ ಬೀರಬಲನು ಸ್ವಾಮೀ, ಈ ಕೆಲಸವು ಒಂದೆರಡು ದಿವಸಗಳಲ್ಲಿ ಸಾಧಿಸತಕ್ಕದ್ದಲ್ಲ.

ಬಾದಶಹ--ನಿನಗೆ ನಾನು ಒಂದು ತಿಂಗಳ ಅವಧಿಯನ್ನು ಕೊಡುತ್ತೇನೆ.
ಅಷ್ಟರಲ್ಲಿ ನೀನು ನಿನ್ನ ಮಾತನ್ನು ಸಿದ್ಧಮಾಡಿ ತೋರಿಸದಿದ್ದರೆ ನಿನ್ನ ಶಿರವು ನಿನ್ನ ದೇಹದಮೇಲೆ ನಿಲ್ಲಲಾರದು ಎಂಬ ಮಾತನ್ನು ಲಕ್ಷ್ಯದಲ್ಲಿ ಇಟ್ಟುಕೋ.

ಬೀರಬಲ-ಒಳ್ಳೇದು; ಹಾಗೇ ಆಗಲಿ.

ಈ ಸಂಗತಿಯು ನಡೆದು ನಾಲ್ಕಾರು ದಿವಸಗಳಾದಮೇಲೆ ಬೀರಬಲನು ಬಾದಶಹನ ಅಂತಃಪುರಕ್ಕೆ ಹೋಗಿ ಅವನದೊಂದು ಪಾದರಕ್ಷೆಯನ್ನು ಕದ್ದುಕೊಂಡು ಬಂದು, ಅದನ್ನು ಒಂದು ಉತ್ತಮವಾದ ರೇಶಿಮೆವಸ್ತ್ರದಲ್ಲಿ ಸುತ್ತಿ ನಗರದ ಬಹಿರ್ಭಾಗದಲ್ಲಿ ಗುಪ್ತರೀತಿಯಿಂದ ಒಂದು ಕಬರ(ಗೋರಿ)ವನ್ನು