ಸಿದ್ಧಪಡಿಸಿ ಅದರಲ್ಲಿ ಆ ಪಾದರಕ್ಷೆಯ ಗಂಟನ್ನು ಯಿಟ್ಟು ಅದರಮೇಲೆ ಒಂದುಹಾಸುಗಲ್ಲನ್ನು ಭದ್ರವಾಗಿ ಕೂಡಿಸಿ ಅದರಮೇಲೆ ಒಬ್ಬ ಮುಸಲ್ಮಾನನನ್ನು ನಿಯಮಿಸಿ ಅವನಿಗೆ ಈ ಗೋರಿಯು ಯಾರದು ? ಎಂದು ಯಾರಾದರೂ ಪ್ರಶ್ನೆ ಮಾಡಿದರೆ ನೀನು ಇದು " ಯಕೀನ ಶಾಹಪೀರ ” ಎಂಬ ಸಾಧುಪುರುಷನ ಗೋರಿಯೆಂದು ಹೇಳು, ಮತ್ತು ನಿನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಜನರವಿಶ್ವಾಸವು ಇದರಮೇಲೆ ಉಂಟಾಗುವಂತೆ ಪ್ರಯತ್ನ ಮಾಡು ಎಂದು ಅಪ್ಪಣೆಯಿತ್ತನು.
ಅವನು ಬೀರಬಲನ ತೀಕ್ಷಾನು ಸಾರವಾಗಿ " ಜನರೊಳಗೆ ಅದರಪ್ರ
ಶಂಸೆಯನ್ನು ಮಾಡಹತ್ತಿದನು ಅದರಿಂದ ಮುಂದೆ ನಾಲ್ಕಾರು ದಿವಸಗಳಾಗುವದರೊಳಗೆ ಜನ ಸಮುದಾಯವು ಆ ಗೋರಿಯದರ್ಶನಕ್ಕೆ ಹೋಗಿ ಬರ ಹತ್ತಿದರು. ಯಂತ್ರ, ಮಂತ್ರ, ತಂತ್ರಗಳನ್ನು ಮಾಡಹತ್ತಿದನು ದಿನಒಂದಕ್ಕೆ ಅಲ್ಲಿ ಜನಸಮುದಾಯವು ಹೆಚ್ಚು ಹೆಚ್ಚು ಕೂಡ ಹತ್ತಿತು ನನಗೆ ಯಂತ್ರ ಮಾಡಿ ಕೊಡಿರಿ, ನನಗೆ ದಾರವನ್ನು ಮಂತ್ರಿಸಿ ಕೊಡಿರಿ, ನನ್ನ ಮ
ಗಳಿಗೆ ಭೂತಬಾಧೆಯಾಗಿದೆ, ಅದನ್ನು ಪರಿಹಾರ ಮಾಡಿಕೊಡಿರಿ ” ಎಂಬ ಜನರು ನಾಮುಂದೆ, ಮುಂದೆ, ಎಂದು ಹಾತೊರೆಯ ಹತ್ತಿದರು ಸ್ವಲ್ಪದಿವಸಗಳೊಳಗೆ ಯಕೀನಶಾಹಪೀರನ ವರ್ತಮಾನವು ದರಬಾರದವರೆಗೆ ಬಂದು ಮುಟ್ಟಿತು, ದರಬಾರಿ ಜನರೆಲ್ಲರೂ ಚಾದರ ಹಸ ಮುಂದೆ ಆ ನೀರನನ್ನು ಸ್ತೋತ್ರ ಮಾಡಹತ್ತಿದರು ಅವರಲ್ಲಿ ಒಬ್ಬನಂತೂ,"ಜಹಪನಾ ! ಹೂಮಾಯೂನ ಬಾದಶಹದವರು ಈ ಯಕೀನ ಶಹಾಪೀರನನ್ನು ಭಕ್ತಿಯಿಂದ ಪೂಜಿಸಿದ್ದರಿಂದಲೇ ಪುನಃ ಅವರಿಗೆ ರಾಜ್ಯ ಪ್ರಾಪ್ತವಾಯಿತು, ” ಎಂದು ಹೊಗಳಿದನು ಈ ಪ್ರಕಾರ ಪಟ್ಟಣದ ಜನರೆಲ್ಲರೂ ಆ ವೀರನನ್ನು ಹೊಗಳ ಹತ್ತಲು, ಬಾದಶಹನ ಮನಸ್ಸಿನಲ್ಲಿ ದರ್ಶನ ತೆಗೆದುಕೊಂಡು ಬರಬೇಕೆಂಬ ಇಚ್ಛೆಯು ಪ್ರಬಲವಾಯಿತು.
ಮರುದಿವಸ ಬಾದಶಹನು ತನ್ನ ಮಂತ್ರಿ ಮಂಡಲದವರನ್ನೂ ಮುತ್ಸ ದಿಗಳನ್ನೂ, ಸರದಾರರನ್ನೂ ಕರೆದುಕೊಂಡು ಪಾದಚಾರಿಯಾಗಿ ವೀರನ ದರ್ಶನಕ್ಕೆ ಹೋದನು. ಅಲ್ಲಿ ಜನಸಮುದಾಯವು ಬಹಳಕೂಡಿತ್ತು ಆನೇಕ
ಪ್ರಕಾರದ ವಸ್ತುಗಳ ಕ್ರಯವಿಕ್ರಯವು ಭರದಿಂದ ನಡೆಯ ಹತ್ತಿತ್ತು ಬಾದಶಹನು ಅದನ್ನೆಲ್ಲ ನೋಡಿ ಸಂತೋಷಪಟ್ಟನು. ಹಿಂದೂ ಮತ್ತು ಮುಸಲ್ಮಾನ ಮುತ್ಸದ್ಧಿಗಳ ಸಹಿತವಾಗಿ ಗೋರಿಯಸಮೀಪಕ್ಕೆ ಹೋಗಿ ಪ್ರಾಣಾಮ ಮಾಡಿದನು ಆ ಜನರಲ್ಲಿ ಬೀರಬಲನೂ ಇದ್ದನು ಬಾಧಶಹನು ವೀರನ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೯
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.