ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೮೩

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು
೬೮

"ಬಾದಶಹನೇ, ನೀನು ನನಗೆ ಮನುಷ್ಯನ ಹಾಗೆ ಕಾಣಿಸುವಿ. ಆದರೇ ಕೆಲವರು ನಿನಗೆ ಕುದುರೆಯೆಂದೂ, ಕೆಲವರು ಕತ್ತೆಯೆಂದೂ ಅನ್ನುತ್ತಾರೆ. ಆದರೆ ಹೀಗೆ ಯಾಕೆ ಅನ್ನುತ್ತಿರುವರೆಂಬದನ್ನು ನೀನೇ ವಿಚಾರಮಾಡಿ ತಿಳಿದುಕೊ” ಎಂದು ಕೂಗಿ, ಅಲ್ಲಿಂದ ಶೀಘ್ರವಾಗಿ ಪಲಾಯನ ಮಾಡಹತ್ತಿದನು. ಆಗ ಬಾದಶಹನು- “ ಎಲೈ ಅಲ್ಲಿ ಯಾರಿದ್ದೀರಿ ? ಆ ಓಡಿಹೋಗುವನ ಮನುಷ್ಯನನ್ನು ಹಿಡಿದು ಬಂಧಿಸಿ ಯಮಸದನಕ್ಕೆ ಕಳುಹಿಸಿರಿ ? ಎಂದು ಅಪ್ಪಣೆಮಾಡಿದನು. ಆದರೆ ಬಾದಶಹನಿಗೆ ಕೂಗಿದವನ ಸ್ವರವು ಗಂಗಕವಿಯ ಸ್ವರದ ಹಾಗೆ ಕೇಳಿಸಿತು; ಗುರುತುಮಾತ್ರ ಹತ್ತಲಿಲ್ಲ, ಕೂಗಿದವನ ಆಶಯವೂ ತಿಳಿಯಬಂತು, ಯಾವ ಅಂತಪುರದಲ್ಲಿ ಪಶುಪಕ್ಷಿಗಳಿಗೆ ಬರುವದಕ್ಕೆ ಅಸಾಧ್ಯವೋ ಅಂಥ ಸ್ಥಳದಲ್ಲಿ ಪರ ಮನುಷ್ಯನುಬರುವದೆಂದರೆ ಎಂಥಾ ಆಶ್ಚರ್ಯದ ಮಾತು ! ಗಂಗಕವಿಯಂತೂ ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಪಲಾಯನಮಾಡ ಹತ್ತಿದನು, ಆದರೆ ಉದ್ಯಾನವನ್ನು ದಾಟಿ ಹೋಗಲು ಸಮರ್ಥನಾಗಲಿಲ್ಲ. ಹಿಂದಿನಿಂದ ಕಾವಲುಗಾರರುಬಂದು ಹಿಡಿದುಕೊಂಡುಬಿಟ್ಟರು. ಅವನು ಧರಿಸಿಕೊಂಡಿದ್ದ ಉಡುಪುಗಳನ್ನೆಲ್ಲ ಕಿತ್ತು ಹಾಕಿದರು. ಗಂಗಕವಿ ಎಂದು ತಿಳಿಯಬಂತು, ಕೂಡಲೆ ಅವನ ಕೈಕಾಲುಗಳನ್ನು ಕಟ್ಟಿದರು, ಬಾದಶಹನ ಅಪ್ಪಣೆಯಂತೆ ಕೊಲ್ಲಲಿಲ್ಲ. ಬಾದಶಹನು ಕೃದ್ಧನಾಗಿ ಅಂತಃಪುರದಿಂದ ಹೊರಬಿದ್ದನು. ಬೇಗಮ್ಮ ಜನರೆಲ್ಲರೂ ಬಾದಶಹನು ಹೊರಗೆ ಹೋಗದ ಹಾಗೆ ಅನೇಕ ಪ್ರಯತ್ನಗಳನ್ನು ಮಾಡಿದರು ಆದರೆ ಅವು ಸಾಧ್ಯವಾಗಲಿಲ್ಲ. ಬಾದಶಹನಿಗೆ "ಕತ್ತೆ, ಕುದುರೆ” ಎಂದ ಮನುಷ್ಯನ ಆಶಯವೂ ಸ್ಪಷ್ಟವಾಗಿ ತಿಳಿಯಿತು. ಬೇಗಮ್ಮ ಜನರು ಸಭಾಸದರಿಗೆಲ್ಲ ಅನೇಕ ಶಾಪಗಳನ್ನು ಕೊಟ್ಟರು. ಈಶಾಪಗಳಿಂದ ಬಾದಶಹನಿಗೆ ಏನೂ ತೊಂದರೆಯುಂಟಾಗಲಿಲ್ಲ. ಬಾದಶಹನು ಕೃದ್ಧನಾಗಿ ಆ ಮನುಷ್ಯನಿಗೆ ಪ್ರಾಣದಂಡನೆಯನ್ನು ಮಾಡದೆ ಬಿಡಲಿಕ್ಕಿಲ್ಲ, ಆ ಮನುಷ್ಯನಿಗುಂಟಾದ ದುರವಸ್ಥೆಯನ್ನು ಕಂಡು ಇತರರಾರೂ ಇಂಥ ಕೆಲಸಕ್ಕೆ ಮುಂದೆಯಾದರೂ ಪ್ರವೃತ್ತರಾಗಲಾರರು, ಎಂದು ಬೇಗಮ್ಮ ಜನರೆಲ್ಲರೂ ತಮ್ಮ ತಮ್ಮೊಳಗೆ ಸಂತೋಷಪಡಹತ್ತಿದರು.

ಬಾದಶಹನು ಪ್ರಕಟನಾದ ವರ್ತಮಾನವು ಪ್ರಾತಃಕಾಲದೊಳಗಾಗಿ ಪಟ್ಟಣದ ಎಲ್ಲೆಡೆಯಲ್ಲಿಯೂ ಪಸರಿಸಿತು ರಾಜನಿಷ್ಟರಾದ ಪ್ರಜೆಗಳಿಗೆ ಅತ್ಯಾನಂದವೂ, ಅತ್ಯಾಚಾರಿಗಳಾದವರಿಗೆ ಭಯವೂ ಉಂಟಾದವು. ಅಪರಾಹ್ನಕಾಲದಲ್ಲಿ ಸಭೆಯು ಕೂಡಿತು. ಕ್ರೋಧಯುಕ್ತವಾದ ಮುಖದಿಂದ ಬಾದಶಹನು ಬಂದು ಸಿಂಹಾಸನಾರೂಢನಾದನು. ಸರದಾರರೂ ಮುತ್ಸದ್ಧಿಗ