ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೯೦

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೭೫

ದುಕೊಳ್ಳುವಷ್ಟು ಶಕ್ತಿಯುಳ್ಳವಳಾಗಿರುವಿ? ನಿನ್ನನ್ನು ಮರೆಮಾಜಿಸುವಷ್ಟು ಶಕ್ತಿಯು ಅಲ್ಪನಾದ ನನ್ನಲ್ಲಿ ಇರುವದಿಲ್ಲ. ಆದರೆ ನೀವು ಅತ್ಯಾಗ್ರಹಮಾಡಿದ್ದರಿಂದ ಹೇಳುತ್ತೇನೆ ಕ್ಷಮಿಸಬೇಕು, “ ನನಗೆ ಎರಡುಕೈಗಳೂ, ಒಂದು ನಾಸಿಕವೂ ಇರುವದು. ನನಗೆ ಯಾವಾಗಾದರೊಮ್ಮೆ ಸೀತಬಾಧೆಯಾಗಲು ನಾಸಿಕವನ್ನು ಸ್ವಚ್ಛ ಮಾಡಿಕೊಳ್ಳಬೇಕಾದರೆ ಬೇಸತ್ತು ಹೋಗುವೆನು. ಆದರೇ ನಿಮಗೆ ಒಂದುಸಹಸ್ರ ನಾಸಿಕಗಳು ಇರುವವು ಹಸ್ತಗಳಾದರೆ ಎರಡೇ ಇರುವವು, ನಿಮಗೆ ನನ್ನಂತೆ ಸೀತಬಾಧೆಯಾದರೆ ಹ್ಯಾಗೆ ಸಹಿಸಿಕೊಳ್ಳುವಿರೋ ? ” ಎಂಬ ಚಿಂತೆಯುತ್ಪನ್ನವಾದ್ದರಿಂದ ಉದಾಸೀನನಾಗಿ ಕುಳಿತು ಕೊಂಡೆನು ಇಷ್ಟೇಸರಿ ಎಂದು ಉತ್ತರಕೊಟ್ಟನು. ಅದನ್ನು ಕೇಳಿ ಜಗಜ್ಜನನಿಯು ಬೀರಬಲನ ಬುದ್ಧಿ ಚಾತುರ್ಯಕ್ಕೆ ಹರುಷಿತಳಾಗಿ ಆಶೀರ್ವದಿಸಿ ಅದ್ಭಶ್ಯಳಾಗಿ ಹೊರಟುಹೋದಳು.

-(೨೬. ಸುವರ್ಣಕಾರರ ಚತುರತೆ.)-

ಒಂದು ಸಾರೆ ಬಾದಶಹನು ಬೀರಬಲನಿಗೆ ಕೇಳುತ್ತಾನೆ:- "ಕಸಬುದಾರರು ತಮ್ಮ ಕಡೆಗೆ ಮಾಡಲಿಕ್ಕೆ ಹಾಕಿದ ಪದಾರ್ಥಗಳಲ್ಲಿ ಅಲ್ಪಸ್ವಲ್ಪಾದರೂ ಕಳ್ಳತನಮಾಡಿ ಉಳಿಸಿಕೊಳ್ಳುತ್ತಾರೆ " ಎಂದು ಲೋಕದಲ್ಲಿ ವಾಡಿಕೆಯಿರುವದು, ಈಮಾತು ಸತ್ಯವಾದದ್ದೇ ಹ್ಯಾಗೆ !
ಬೀರಬಲ-ಪೃಥ್ವೀನಾಥ ? ಪ್ರತಿಯೊಬ್ಬ ಕಸಬುದಾರನು ತನ್ನ ತನ್ನ ಕಸಬಿನಲ್ಲಿ ಅಲ್ಪಸ್ವಲ್ಪಾದರೂ ಚತುರತೆಯನ್ನು ತೋರಿಸುತ್ತಿರುವದು ನಿಜವು.
ಬಾದಶಹ - ಸಿಂಪಿಗರು, ಅಕ್ಕಸಾಲಿಗರು ಸಹ ತಮ್ಮ ತಮ್ಮ ಕೆಲಸಗಳಲ್ಲಿ ಕಳ್ಳತನ ಮಾಡುತ್ತಿರುವರೇ !
ಬೀರಬಲ- ಎಲ್ಲರೂ ಕಳ್ಳತನ ಮಾಡುತ್ತಿರುವರೆಂದು ನಾನು ಹೇಳುವದಿಲ್ಲ, ಸುವರ್ಣಕಾರರ ವಿಷಯದಲ್ಲಿ ಮಾತ್ರ ಜನರಲ್ಲಿ ಈಪ್ರಕಾರ ಪ್ರಸಿದ್ಧಿ ಇರುವದು. ಏನಂದರೆ- ವಸ್ತುಗಳನ್ನು ಮಾಡಲಿಕ್ಕೆ ಹಾಕಿದವನು ಅವನಮುಂದೆ ಕುಳಿತು, ಕಣ್ಣೊಳಗೆ ಕಣ್ಣಿಟ್ಟು ನೋಡುತ್ತಿದ್ದರೂ ಸಹಸ್ವಲ್ಪಾದರೂ ಬಂಗಾರವನ್ನು ಕದ್ದು ಕೊಳ್ಳದೆ ಬಿಡಲಾರನು, ಅವನ ಚಾತುರ್ಯವು ಕಣ್ಣೊಳಗಿನ ಕಾಡಿಗೆಯನ್ನು ಕದ್ದುಕೊಳ್ಳುವಷ್ಟು ಚಾತುರ್ಯಕ್ಕೆ ಸರಿಯಾದದ್ದೆಂತಲೂ ಅವರು ತಮ್ಮ ಅಕ್ಕತಂಗಿಯರ ಬಂಗಾರದಲ್ಲಿ ಸಹ ಕದ್ದುಕೊಳ್ಳದೆ ಬೆಡಲಾರರು; ಈ ವಿಷಯದಲ್ಲಿ ನನಗೆ