ರ್ಣಯವಾಗಿ ನನ್ನ ಸ್ವಾಧೀನಕ್ಕೆ ಗಿಡಗಳು ಬಂದರೆ ಹಣ್ಣುಗಳು ಸಿಗುತ್ತವೆ. ಇಲ್ಲವಾದರೆ ಇಲ್ಲ; ಇದರಲ್ಲಿ ನನಗೆ ಹಾನಿಯು ತಪ್ಪುವಂತೆಯಿಲ್ಲ. ಅಂಧಕಾರಮಯವಾದ ರಾತ್ರಿಯಲ್ಲಿ ಯಾರು ಅಲ್ಲಿಗೆ ಕಾಯಲಿಕ್ಕೆ ಹೋಗಬೇಕು" ಎಂದು ಸುಮ್ಮನೆ ಕುಳಿತುಕೊಂಡನು. ಹೊರಗೆ ಕುಳಿತುಕೊಂಡಿದ್ದ ಸಿಪಾಯಿಯು ಅವನ ಮಾತುಗಳನ್ನೆಲ್ಲ ಕೇಳಿಕೊಂಡು ಸುಮ್ಮನೇ ಬೀರಬಲನ ಮನೆಗೆ ಬಂದನು.
ಪ್ರೇಮಳದಾಸನು ಮನೆಗೆ ಬಂದಕೂಡಲೆ ಅವನ ಸ್ತ್ರೀಯು ಕಾವಲುಗಾರನು ಹೇಳಿದ ಸಮಾಚಾರವನ್ನೆಲ್ಲ ತಿಳಿಸಿದಳು. ಆಗ ಪ್ರೇಮಳದಾಸನು ಆಯುಧವಾಣಿಯಾಗಿ ಹೊರಟನು, ಅವನ ಸ್ತ್ರೀಯು, "ಊಟಮಾಡಿಕೊಂಡು ಹೋಗಬೇಕು” ಎಂದು ಹೇಳಿದಳು. ಆಗ ಪ್ರೇಮಳದಾಸನು- "ಊಟ ಮಾಡುತ್ತ ಕುಳಿತುಕೊಂಡರೆ ಮಾವಿನ ಹಣ್ಣುಗಳೆಲ್ಲವನ್ನು ಕೊಯಿದುಕೊಂಡು ಹೋದಾರು ! ಅದರಿಂದ ಮೊದಲು ತೋಟಕ್ಕೆ ಹೋಗಿ ಅಲ್ಲಿಯ ಸಮಾಚಾರವನ್ನೆಲ್ಲ ತಿಳಿದುಕೊಂಡು ಬಂದಮೇಲೆ ಊಟಮಾಡಬಹುದು. ಸತತ ಏಳುವರುಷಗಳವರೆಗೆ ಜೋಪಾನಮಾಡಿದ ಶ್ರಮವು ಸ್ವಲ್ಪದರಲ್ಲಿ ನಿಷ್ಫಲವಾಗಿ ಹೋಗಬಹುದು." ಎಂದು ಹೇಳಿ ಅರ್ಧ ರಾತ್ರಿಯಲ್ಲಿಯೇ ಮಾವಿನತೋಪಿನ ಕಡೆಗೆ ಹೋದನು. ಅವನು ಹೊರಟುಹೋದಮೇಲೆ ಅಲ್ಲಿ ಕುಳಿತುಕೊಂಡಿದ್ದ ಸಿವಾಯಿಯೂ ಹಿಂದಿರುಗಿ ಬೀರಬಲನ ಬಳಿಗೆ ಬಂದನು. ಮರುದಿವಸ ಕೇಶವದಾಸನೂ ಪ್ರೇಮಳದಾಸನೂ ಓಲಗಕ್ಕೆ ಬಂದರು ಆಗ ಬೀರಬಲನು ಅವರಿಬ್ಬರನ್ನೂ ಕುರಿತು ಹೇಳಿದ್ದೇನಂದರೆ- “ನಾನು ನಿಮ್ಮ ನಿಮ್ಮ ಹೇಳಿಕೆಯಂತೆ ಎಲ್ಲ ಸಂಗತಿಗಳನ್ನು ಪೂರ್ಣವಾಗಿ ವಿಚಾರಮಾಡಿ ನೋಡಲಾಗಿ ಆ ವೃಕ್ಷಗಳಲ್ಲಿ ಆಗಿರುವ ಫಲಗಳಿಗೆ ನೀವಿಬ್ಬರೂ ಸಮಭಾಗಿಗಳಾಗಿರುವಿರಿ. ಆದ್ದರಿಂದ ಈಗಿಂದೀಗ ಆ ಫಲಗಳನ್ನೆಲ್ಲ ಕೊಯಿದು ಸರಿಯಾಗಿ ಹಂಚಿಕೊಳ್ಳಿರಿ" ಎಂದು ಆಜ್ಞಾಪಿಸಿದನು.
ಈ ನಿರ್ಣಯವನ್ನು ಕೇಳಿ ಕೇಶವದಾಸನಿಗೆ ಬಹಳ ಸಂತೋಷವಾಯಿತು, ಆದರೆ ಪ್ರೇಮಳದಾಸನಿಗೆ ಬಹಳದುಃಖವಾಯಿತು. ಆಗ ಅವನು ಕೈಮುಗಿದು ಪ್ರಾರ್ಥಿಸಿಕೊಂಡದ್ದೇನಂದರೆ- "ಸ್ವಾಮಿ ! ಮಾವಿನಕಾಯಿಗಳು ಇನ್ನೂ ಬಲಿಯದೇ ಇದ್ದದರಿಂದ ಯಾವ ಕೆಲಸಕ್ಕೂ ಉಪಯೋಗವಾಗುವಂತೆ ಇಲ್ಲ, ಅವುಗಳನ್ನು ಈಗಲೇ ಕೊಯ್ಯುವದರಿಂದ ಪ್ರಯೋಜನವೇನು. ತಮ್ಮ ಇಚ್ಛೆಯಿದ್ದರೆ ಅವುಗಳನ್ನು ಕೇಶವದಾಸನಿಗೆ ಕೊಟ್ಟುಬಿಡಿರಿ. ನನ್ನಿಂದಂತೂ ಅವುಗಳನ್ನು ಕೊಯ್ಯುವದಕ್ಕೆ ಆಗಲಾರದು” ಎಂದು ಹೇಳಿ