ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೯೭

ಈ ಪುಟವನ್ನು ಪ್ರಕಟಿಸಲಾಗಿದೆ
೮೨
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು


ಸುಮ್ಮನಾದನು. ಆಗ ಬೀರಬಲನಿಗೆ ಗಿಡಗಳು ಪ್ರೇಮಳದಾಸನವೇ ಎಂದು ಗೊತ್ತಾಯಿತು, ಕೂಡಲೆ ಕೇಶವದಾಸನನ್ನು ಒಳಿತಾಗಿ ತಳಿಸಿರಿ ಎಂದು ಕರ್ಮಚಾರಿಗಳಿಗೆ ಹೇಳಿದನು. ಆಗ ಕೇಶವದಾಸನು ಬೀರಬಲನ ಪಾದಗಳ ಮೇಲೆ ಅಡ್ಡಬಿದ್ದು, ಮಹಾರಾಜ, ನನ್ನನ್ನು ಹೊಡೆಸಬೇಡಿರಿ ಮಾವಿನಗಿಡಗಳು ಪ್ರೇಮಳದಾಸನವೇ ಅಹುದು ಎಂದು ಹೇಳಿದನು. ಆಗ ಬೀರಬಲನು ಆ ಗಿಡಗಳನ್ನು ಪ್ರೇಮಳದಾಸನ ವಶಕ್ಕೆ ಕೊಡಿಸಿ, ಕೇಶವದಾಸನಿಗೆ ದಂಡನೆಯನ್ನು ವಿಧಿಸಿದನು.

-(೨೯. ಪ್ರಾರಬ್ಧವು ಹೆಚ್ಚೋ, ಅಥವಾ ಉದ್ಯೋಗವೋ ? )-


ಒಂದುದಿವಸ ಬಾದಶಹನು ತನ್ನ ದರಬಾರದ ಈ "ಮುತ್ಸದ್ದಿಗಳಿಗೆ ಪ್ರಾರಬ್ಧವು ಅಧಿಕವಾದದ್ದೋ ! ಅಥವಾ ಉದ್ಯೋಗವು ಶ್ರೇಷ್ಠವಾದದ್ದೋ" ಎಂದು ಪ್ರಶ್ನೆ ಮಾಡಿದನು. ಆಗ ಅವರೆಲ್ಲರೂ ಒಂದೇಸ್ವರದಿಂದ "ಉದ್ಯೋಗವು ಶ್ರೇಷ್ಠವಾದದ್ದು" ಎಂದುತ್ತರಕೊಟ್ಟರು. ಆಗ ಬೀರಬಲನಿಗೆ ಪುನಃ ಇದೇ ಪ್ರಶ್ನೆಯನ್ನು ಮಾಡಿದನು. ಆಗ ಬೀರಬಲನು "ಮಹಾರಾಜ ! ಉದ್ಯೋಗಕ್ಕಿಂತ ಪ್ರಾರಬ್ಧವು ಬಲವಾದದ್ದು" ಎಂದು ಹೇಳಿದನು.

ಬಾದಶಹ-ಯಾವ ಮನುಷ್ಯನು ಪ್ರಾರಬ್ಧವನ್ನು ನಂಬಿ ಏನೂ ಉದ್ಯೋಗ ಮಾಡದೆ ಕುಳಿತುಕೊಂಡರೆ ಅವನಿಗೆ ಉದರಂಭರಣೆಯು ಹ್ಯಾಗಾಗುವದು ?

ಬೀರಬಲ-ಪ್ರಭುಗಳೇ ? ಮನುಷ್ಯನು ಬೇಕಾದ ಉದ್ಯೋಗವನ್ನು ಮಾಡಲಿ, ಅದು ಅವನ ಪ್ರಾರಬ್ಧದಲ್ಲಿ ಲಭಿಸುವದೇ ಇಲ್ಲದಿದ್ದರೆ ಏನೂಫಲ ದೊರೆಯಲಾರದು; ಆದ್ದರಿಂದ ಪ್ರಾರಬ್ಧವೇ ಶ್ರೇಷ್ಠವಾದದ್ದು.

ಉಳಿದ ಸಭಾಸದರು-ಪೃಧ್ವೀನಾಥ ? ಬೀರಬಲನು ಪ್ರಾರಬ್ಧವೇ ಶ್ರೇಷ್ಠವಾದದ್ದೆಂದು ಹೇಳುತ್ತಿರುವನಷ್ಟೇ! ಈಮಾತಿಗೆ ತಕ್ಕ ಪ್ರಮಾಣಗಳಾದರೂ ಅವನ ಬಳಿಯಲ್ಲಿರಬಹುದು.

ಬೀರಬಲ-ಇಂಥ ಪ್ರಮಾಣಗಳನ್ನು ಯಾರೂ ಸಂಗಡಕಟ್ಟಿಕೊಂಡು ಬಂದಿರಲಾರರು, ಸ್ವಲ್ಪಾವಕಾಶವನ್ನು ಕೊಟ್ಟರೆ ಪ್ರಮಾಣವನ್ನು ತೋರಿಸಿಕೊಡುವೆನು.

ಈಪ್ರಕಾರ ಮಾತು ಕಥೆಗಳಾದಮೇಲೆ ಸಭೆಯು ವಿಸರ್ಜನವಾಯಿತು. ಆಮೇಲೆ ಮುಂದೆ ಕೆಲವು ದಿವಸಗಳು ಗತಿಸಿಹೋದಮೇಲೆ ಬಾದಶಹನು ತನ್ನ ಮುಖ್ಯಮುಖ್ಯ ಮಂತ್ರಿಗಳನ್ನು ಸಂಗಡ ಕರೆದುಕೊಂಡು ಯಮುನಾತೀ