೧೦೧ ಬ & ೪ ೧ ಈ ೧ ಅದುಕಾರಂ ಮುಕಿ ಪದವನೆಳಸುವರಲ್ಲ 1 ರಿದನ ಗುರುಮುಖದೆ Vಲಿರೋದಿಕ೪ ತಿ೪ವುದುಬಳಲದನ್ಯಮತದಲ್ಲಿ | 8 ದಿನಪನುದಯಂ ತನುವನೆನಿತು ಬೇಗಂತವಿರು | ದನಿತು ಶೀಘು ದೊಳೆ ಸಕಲಸಂದೇಹಂಗ ಳನು ಕಳೆವುವಿದರೋಳಸವರ್ಥ! ೫ ರನ್ನಗನ್ನಡಿಯಲ್ಲಿ ತನ್ನ ಮೊಗದಂದಮುಂ | ಚೆನ್ನಾಗಿ ಕಾಣ ತೆರನಂತೆ ನಿಜವಿದರೊ ಳಂನಾಡೆ ತೋರ್ಪುದಖಿಳರ್ಗ್ಗೆ! ಬೇರೆಬೇರೂದಿ ಬಾಯಾರದಿದನೊಮ್ಮೆ ನಲ| ವೇರಿಕೇಳವರು ಪರ ಮಶಿವಪದವನುರ ಸೂರೆಗೊಂಡಿಹರುಸುಖದಲ್ಲಿ || ೬ ವೀತರಾಗರ್ಗ್ಗೆ ವಿಖ್ಯಾತರ್ಗ್ಗೆ ತಿಳಿವಸಂ ಪ್ರೀತಿಯುಳ್ಳರ್ಗ್ಗೆ ಹೇಳು - ದಜ್ಜರ್ಗೆ ಮನ ಮೋತುಸಿರಲಾಗದಿದನೊಮ್ಮೆ ಇದನೆಬರೆದೆದಿ ಕೇಳಿದವರರ್ಥಂಗಳ೦ | ಮುದದಿಂದೆ ಹೇಳಿದವ ರುಮಾವರಶಂಭು ಪದವೆ ತಾವಾಗಿಸುಖಮಿರ್ಕ್ಕು೦|| ಆದಕಾರಣದಿಂದ ಮೋಕ್ಷಸ್ಥಾನವನ್ನು ಅಪೇಕ್ಷಿಸುವವರೆಲ್ಲರೂ ಇತರ ಮತಗಳಲ್ಲಿ ಆಯಾಸಪಡದೆ, ಈ ಗ್ರಂಧವನ್ನೇ ಗುರುಗಳ ಮುಖದಿಂದ ಕೇಳಿ ಅಗ್ಗವನ್ನು ತಿಳಿದು ಕೊಳ್ಳಬೇಕು. ೪ ಈ ಗ್ರಂಥದಲ್ಲಿರುವ ಅಲ್ಲವು, ಸೂರೊದಯವು ಎಷ್ಟು ಶೀಘ್ರದಲ್ಲಿ ಕತ್ತಲೆಯ ನ್ನು ಪರಿಹರಿಸುವರೋ ಅಷ್ಟು ಬೇಗ, ಸಮಸ್ತ ಸಂಶಯಗಳನ್ನೂ ಪರಿಹರಿಸುವದು. ೫ ರತ್ನದ ಕನ್ನಡಿಯಲ್ಲಿ ತನ್ನ ಮುಖದ ಸ್ವರೂಪವು ಚನ್ನಾಗಿ ಕಾಣಿಸಿಕೊಳ್ಳುವ ಹಾಗೆ ಈ ಗ್ರಂಥದಲ್ಲಿ ಸಮಸ್ತ ಜನಗಳಿಗೂ ಸತ್ಯಾರ್ಥವು ಚನ್ನಾಗಿ ಕಾಣಿಸಿಕೊ ಳ್ಳುತ್ತದೆ. ಬೇರೆ ಬೇರೆ ಗ್ರಂಥಗಳನ್ನು ಓದಿ ಬಾಯೊಣಗಿಸಿಕೊಳ್ಳದೆ ಒಂದು ವೇಳೆ ಈ ಗ್ರಂಥ ವನ್ನು ಸಂತೋಷದಿಂದ ಕೇಳುವವರು ಅನಾಯಾಸದಿಂದ ಬ್ರಹ್ಮಸಾಕ್ಷಾತ್ಕಾರವೆಂಬ ಮೋಕ್ಷವನ್ನು ಸೂರೆಯಾಗಿ ಹೊಂದಿರುವರು. - ವಿಷಯಾಭಿಲಾಷೆಯಿಲ್ಲದವರಿಗೂ ಪ್ರಸಿದ್ಧರಾದವರಿಗೂ ತಿಳಿಯಬೇಕೆಂಬ ಪ್ರೀತಿ ಯುಳ್ಳವರಿಗೂ ಹೇಳಬೇಕು, ಮೂಢರಿಗೆ ಅಪೇಕ್ಷೆ ಪಟ್ಟು ಒಂದು ವೇಳೆಯಾದರೂ ಹೇಳಕೂಡದು. ಈ ಗ್ರಂಥವನ್ನು ಬರೆದವರೂ ಓದಿದವರೂ ಅರ್ಥವನ್ನು ಕೇಳಿದವರೂ ಸಂತೋಷ ದಿಂದ ಅರ್ಥವನ್ನು ಹೇಳಿದವರೂ ಪಾರ್ವತೀ ಪತಿಯಾದ ಶಿವನೇ ತಾವಾಗಿ ಆನಂದ ದಲ್ಲಿರುವರು,
ಪುಟ:ಅನುಭವಸಾರವು.djvu/೧೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.