ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ತೋರಿಸುತ “ನೋಡಿರಪ್ಪಾ.. ಅಗೋ ಅಲ್ಲಿ.. ವಂದೊಂದು ಹೆಜ್ಜೆ ಗುರುತು ಯೇಟೊಂದು ಅಗಾಧ ಅದಾವ.. ಆಕಾಸದುದ್ದದ ಮಾನವ ಪಟ್ಟಣ ಪ್ರಯೇಸ ಮಾಡಿದಾಂಗಝರಪ್ಪಾ” ಯಂದರು.. ಜನ ಯಲ್ಲ ನೋಡೂತ ದಿಗ್ರಮೆ ಅನುಭವಿಸುತ್ತಿರಬೇಕಾದರಿವರು “ಯಿ ಮೂರಿನ ಸಾವಾಸವೇ ಬಾಡ.. ನೂರೊಳೀಕ್ಕೆ ಪರುವುತಗಾತುರದ ಯಕ್ತಿ ಹೋದಂಗಯ್ತಿ.. ಅದು ಯಾರನ್ನು ಯೇನು ಮಾಡುತಯೋ? ಯೇನು ಬಿಡುತಪ್ಪೋ? ಕಳುವು ತುಡುಗು ಮಾಡುವ ನಮಗಿಲ್ಲಿ ವುಳುಗಾಲಯಿಲ್ಲ” ಯಂದನಕಂತ ಅವರು ದೂರದಿಂದಲೇ ಪಾದ ಮುದ್ರೆಗಳಿಗೆ ಸಣುಮಾಡಿ ಕಾಲಿಗೆ ಬುದ್ದಿ ಹೇಳಿದರಂತೆ ಸಿವನೇ. ಹಾ... ಹಾ... ಅನಕಂತ ಮಂದಿ ಬೀದಿಗೆ ಬಂತು. ಹೋ ಹೋ ಅನಕಂತ ಕೋಟೆಗೋಡೆ, ಬತೇರಿ ಮಾಲೇರಿತು, ನೋಡು ನೋಡುತ ಅಯ್ಯಯ್ಯೋ 0ರಂದು ಅರಚಿಕೇತ ಯಿಳಿದು ಹರದಾಡಿತು. ಯಾರ ಆಕಾಸದೆತ್ತರದೋರು, ಯಾರೋ ಪರುವುತಗಾತುರದೋರು ಮೊರೊಕ್ಕೆ ಬಂದು ಯಲ್ಲದಾರ, ಅವರಲ್ಲಿ ಅವಿತಿರಬೌದೇ, ಅವರಿಲ್ಲಿ ಅವತರಬೌದೇ, ಯಂದನಕಂತ ಅನಕಂತ ಪಟ್ಟಣದ ಮೂಲೆ ಮೂಲೆ ಬೆದಕಾಡಿತು. ಗುಡಗುಡ್ಡ ಬೆದಕಾಡಿತು. ಗವಿಗವ್ವರ ಹೊಕ್ಕು ಹೊರ ಬಂದಿತು. ಅಂಥ ಯಾರೊಬ್ಬರ ಸುಳಿವಿಲ್ಲಾss ಸುಳಿವಿಲ್ಲಾss ಯಾರು ಬಂದಿರಬೌದಪ್ಪ ಸಿವನೇ? ಯದಕ ಬಂದಿರಬೌದೆಪ್ಪ ಸಿವನೆ? ಆದಿಕಾಲದ ಯೇಕಾಸುರಿ ಯೇನಾರ ಬಂದಿರಬೌದಾ? ಯಲ್ಲಂದರಲ್ಲಿ ಮಯ್ಯ ಚೆಲ್ಲಿತು ಮಂದಿ, ಕಮ್ಮ ಚೆಲ್ಲಿತು ಮಂದಿ, ಕಾಲ್ಪ ಚೆಲ್ಲಿತು ಮಂದಿ.. ತಮ ತಮ್ಮ ಸರೀರಗಳಿಂದ ಪಂಚೇಂದ್ರಿಯಂಗಳನು ವುದುರುಬಿಟ್ಟಿತು ಮಂದಿ, ಬಿಕುಬಿಕ್ಕಿ ಅಳಲಾಕ ಹತ್ತಿತು ಮಂದಿ.. ಹೊಲಬುಗೆಟ್ಟಿತು ಮಂದಿ, ತೆಲುಬುಗೆಟ್ಟಿತು ಮಂದಿ.. ಯಿಷ್ಟಗಲ ಅಷ್ಟುದದ ಪಾದಗಳು ಸಾಮಾನ್ಯದವರವಿದ್ದಂಗಿರಲಿಲ್ಲವಂತೆ.. ಬಲಿ ಚಕ್ಕರವರಿಯನ್ನು ಪಾತಾಳಕ್ಕದುಮಿದ ಪಾದಗಳಿದ್ದಂಗಿದ್ದವಂತೆ.. ಪಾದಮುದ್ರೆಗಳಿಗೆ ಪೂಜೆ ಪುನಸ್ಕಾರ ಸಲ್ಲಿಕೆ ಮಾಡಲಾರಂಭಿಸಿತಂತೆ ಮಂದಿ.. - ಅಗೋ ಅಲ್ಲಿ ಹೆಜ್ಜೆ ಗುರುತುಗಳು, ಯಗೋ ಯಲ್ಲಿ ತೊಂಬಲದ ವಾಸನೆಯು ಅದು ಯಿದು, ಯಿದು ಅದು, ತಾಳೆ ಹಾಕತಯ್ಕೆ.. ಯಿದೆಲ್ಲ ಹೆಣ್ಣಿಂದೆಂದು ತೀರುಮಾನ ಮಾಡಿಕೊಳ್ಳುತಯ್ಕೆ. ಯಿದೆಲ್ಲ ದೂರ ಹೊರಗಿನ ಕಥಿ ಕಣ ಸಿವನೇ.. ಯನ್ನು ದೂರವಳಾಗಿನ ಕಥಿಯು ಸಿವ ಸಿವಾ, ಮೂರ ವಳಾಗೆ ಮೋಬಯ್ಯನ ಸರೀರದ ಕಡೇಕ