ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕೆಕ್ಕರಿಸಿ ನೋಡಿದೋರು ಯಿದ್ದರಲ್ಲ... ನಗೆ ಚಾಟಿಕೆ ಹಾರಿಸಿದವರಿದ್ದರಲ್ಲಾ.. ಆ ಸರೀರಕ ತಕ್ಕ ಸಿಕ್ಷೆ ಆಗಬೇಕೆಂದು ಬಯಸಿದವ ರಿದ್ದರಲ್ಲಾ... ಅವರ ಸ್ಥಿತಿಯು ಘನ ಘೋರವಾಗಲಕ ತೊಡಗಿತಂತೆ ಸಿವ ಸಂಕರ ಮಾದೇವಾ.. ಅದು ಹೆಂಗಂದರ, ಅಂಥವರ ಪಂಚೇಂದ್ರಿಯಂಗಳು ತಮ್ಮ ತಮ್ಮ ಸರೀರಗಳ ಯಿರುದ್ಧಾನೇ ಬಂಡೆದ್ದಿದ್ದವಂತೆ, ಪಿತೂರಿ ನಡೆಸಿದ್ದವಂತೆ. ಕೇಳಾಕಿಲ್ಲ ಅನುತಲಿದ್ದವಂತೆ ಕಿವಿ, ನೋಡಾಕಿಲ್ಲ ಅನುತಲಿದ್ದವಂತೆ ಕಣ್ಣು, ಮೂಸಾಕಿಲ್ಲ ಅನುತಲಿದ್ದವಂತೆ ಮೂಗು, ರುಚಿ ನೋಡಾಕಿಲ್ಲ ಅನುತಲಿದ್ದವಂತೆ ನಾಲಗೆ, ಸ್ವರುಷಗ್ರಾನದಿಂದ ದೂರವುಳಕೊಂಡುಬಿಟ್ಟವಂತೆ ಚರುಮ.. ಯಪ್ಪೋ ನನಗ ಕಾಣುವಲ್ಲದು, ಕೇಳುವಲ್ಲದು, ಕಯ್ಯ ಯೇಳುತಾಯಿಲ್ಲ. ಕಾಲಲುಗಾಡುತಾಯಿಲ್ಲ. ಯೀ ಪ್ರಕಾರವಾಗಿ ಕಣ್ಣೀರನ್ನು ಕಪಾಳಕ್ಕೆ ತಂದುಕೊಂಡವರು ಹೇಳಹೇಳತಿರಲಕ್ಕ ಬಾಯಿ ಬಿದ್ದು ಮಗರಾಗಿ ಬಿಡುತಲಿ ದ ದ್ರುಸಾವಳಿ ಪ್ರಭಾವಳಿಯಾಗುತಿರಲ್ಲಕ್ಕss ಯಪ್ಪಾ ನೂರೊಳಗ ಹೊಕ್ಕವಳು ನೋಡುವ, ಕೇಳುವ, ಮೂಸುವ, ಮುಟ್ಟುವ ಸಗುತಿ ಗಳನ್ನು ಗುಳುಂ ಗುಳುಂ ಅಂತ ನುಂಗಲಕ ಹತ್ಯಾಳ.. ಕನ್ನ ಹಿಡಿದು ಬೇಡಿಕೊಳ್ಳಲಕಂದರ ಕಯ್ಕೆ ಸಿಕ್ಕಳು, ಕಾಲ್ಕ ಹಿಡಿದು ಬೇಡಿಕೊಳ್ಳಲಕಂದರ.. ಹಿಂಗ ವಂದೊಂದು ಮನಿ ವಳಗ ವಬ್ಬೊಬ್ಬರು ತಮತಮ ಕರುಳು ಬಳ್ಳಿನ ಬಾಯೊಳಗ ತಕ್ಕೊಂಡು.... ಅತ್ತ ಅಮಾತ್ಯನ ಮನೆಯೊಳಗಿನ ಪರಿಸ್ಥಿತೀನ ಯೇನಂತ ಹೇಳಲಿ ಸಿವನೇ, ರಾತಿಂ ಪಶ್ಯಂತರ ಗಪ್ಪಂತ ಮಲಕ್ಕೊಂಡಿದ್ದ ಗವುಡಿಕೆ ಸಣಸಿದ್ದಪ್ಪ ಬೆಳಗಾಗುತ್ತ ಕಣ್ಣು ಬಿಚ್ಚುತ್ತಾನೆ. ತನ್ನ ವಬ್ಬೊಬ್ಬ ಮಗನೂ ವಂದೊಂದು ರೀತಿ ಗೋಚರ ಮಾಡುತ್ತಿರುವುದು ಕಂಡು ಅಯ್ಯೋ... ಹಾಳಾಗ ಯಂದು ಕೂಗಾಡಲಕ ಹತ್ತಿದನು. ಅತ್ತ ಬಡಕಲರೋಣಿಯಲ್ಲಿ ಅಟ್ಟಹಾಸಯಂಬ ಹೆಸರಿನ ಸೇನಾಧಿಪತಿಯ ಮನೆಯ ಪರಿಸ್ಥಿತೀನ ಯೇನಂತ ಹೇಳಲಿ ಸಿವನೇ. ಸಭ್ಯಸ್ಥ ಮಂದಿ ಹೇಳಿಕೊಳ್ಳಲಕ ನಾಚುವಂಥ ಸುದ್ದಿ ಅದಾಗಿತ್ತು. ಗೋಯಿಂದಪ್ಪ ಯಲ್ಲಾರಂತೆ ಮಲಕ್ಕೊಂಡಿದ್ದ. ತನ್ನದೆಂಬ ಸ್ಥಿರಾಸ್ತಿಯೊಂದು ತನ್ನ ಸರೀರಕ್ಕಂಟಿರುತ್ತಿಲ್ಲ. ಯದೊಡನೆ ಸಾಂಪ್ರತು ಅದನು ಮುಟ್ಟಿಕೊಂಡು ಸ್ವರುಷದ್ವಾರಾ ಯಿಚಿತ್ರಾನುಭೂತಿ ಹೊಂದುವುದು, ಖಾತರಿ ಮಾಡಿಕೊಳ್ಳುವುದು ಮಾಮೂಲು.. ತನ್ನನ್ನು ತಾನು ಪುರುಷಸಿಮ್ಮ ಯಂದೂ,