ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೯೩ ಜಾಯಮಾನದ ಸನ್ಯಾಸಪ್ಪ ಆ ಹಿಂದಣ ರಾತಿರಿ ಸರುವರಂತೆ ಮಲಗಿ ಸರುವರಂತೆ ಯಚ್ಚರಗೊಂಡು ಅಂಗಯ್ಯ ನೋಡುತ ಕರಾಗ್ರೆವಸತೇ ಲಚುಮೀ ಯಂದು ಗೊಣಗಿ ಹಾಗೇ ಕಣ್ಣು ಮುಚ್ಚಿಕೊಂಡು ಯಂದಿನಂತೆ ತನ್ನ ಪ್ರತಿಬಿಂಬವ ನೋಡಿಕೊಳ್ಳುವ ಸಲುವಾಗಿ ತಡಕಾಡತೊಡಗಿದನು. (ಯಾತಕ್ಕೆಂದರೆ ಸಪ್ತಲೋಹದಿಂದ ಮಾಡಲ್ಪಟ್ಟಿದ್ದ ಕನ್ನೂಡಿ ಹಳ್ಳಿಗಾಗಿ, ಅದರಲ್ಲಿಣುಕಿ ನೋಡಿಕೊಂಡ ನಂತರವೇ ವಗಿ.. ವಗಿ... ಅದು ಹೇಗ ಸಿಕ್ಕಿತು, ಆಗ ಸಿಕ್ಕಿತು. ಅಂತೂ ಕೊನೀಕೂ ಸಿಕ್ಕೇಬಿಟ್ಟಿತು. ಅದನ್ನು ಕಯ್ದೆತ್ತಿಕೊಂಡು ಜಾಲಾಂದರದ ಸನೀಕ ವಯ್ದು ಅದರೊಳಗಿಣೂಕಿ ತನ್ನನ್ನು ತಾನು ನೋಡಿಕೊಂಡು ಮನುಸಾಗಲಿಕ್ಕೆ ಹತ್ತಿತು. ಅದೇ ಹೊತ್ತಿಗೆ ಹೆಂಡರೂ, ಮಕ್ಕಳೂ, ಸೊಸೆಯರೂ, ಮೊಮ್ಮಕ್ಕಳೂ ಬ್ಯೂನಾತಲೋ ಡ್ಯೂನಾತಲೋ ಯಂದನಕಂತ ಬಂದು ನೋಡುತ್ತಾರೆ.. ಸನ್ಯಾಸಪ್ಪ ಥೇಟ್... ಅತ್ತ ಅರಮನೆಯೊಳಗೆ.. ಸಿವನೇ.. ಸಿವನೇ.. ಅನುವಾದ ಸೀರಣಿಕೆಯನ್ನು ಸೂಳೆಯೋಪಾದಿಯಲ್ಲಿ ಸದಾ ಬಕ್ಕಣದಲ್ಲಿಟ್ಟುಕೊಂಡಿರು ತಲಿದ್ದ ಕಾಟನಾಯಕನಿಗೋ, ತನ್ನ ಸರೀರದ ಮ್ಯಾಲ ಯಲ್ಲಂದರಲ್ಲಿ ಪುಷ್ಕಳವಾಗಿ ಬೆಳೆದಿರುವ ರೋಮದ ಮ್ಯಾಲ ಯಣೆಯಿಲ್ಲದಷ್ಟು ಕಕ್ಕುಲಾತಿಯಿತ್ತು ಸಿವನೇ.. ತನ್ನ ರೋಮದಿಂದಾವ ರಿಸಿರುವ ಯದೆಯೋ, ಭುಜಕೀರಿಯೋಪಾದಿಯಲ್ಲಿ ರೋಮ ತುಳುಕುತ್ತಿರುವ ಹೆಗಲೋ, ಪೊದೆ ಮೊದೆ ಹುಬ್ಬುಗಳೋ, ತಲೆ ಹಿಂದುಗಡೆ ಟೆಮುಟ ಗಾತುರದ ತುರುಬೋ, ಅವಗುಂಟನ ರೋಮದಿಂದ ತುಂಬಿರುವ ಮೂಗೋ, ಬಂದಳಿಕೆ ಮೊದೆಯಂಥ ಮೀಸೆಯೋ.. ಯಿಂಥೆಲ್ಲ ಸಲ್ಲಕ್ಷಣಗಳು ತನ್ನ ಕೀರಿಸೇಷ ತಂದೆಗೂ ಯಿದ್ದವಂತೆ. ರೂವದೊಡಗೂಡಿ ತಾನು ಜೆನಿಸಿ ದ್ವಂತೆ.. ಜೋತಿಷಿಗಳು ಸಿಸುಪಾಯದಲ್ಲಿದ್ದಾಗ ಯೀತನು ಅರಿಭಯಂಕರನಾಗುವನೆಂದೂ, ಪುಪ್ಪುಲ ವಮುಸದ ಕೀರಿ ಪತಾಕೆಯನ್ನು ಚಿತ್ತರಕಲ್ಲುದುರುಗದ ಬುರುಜಿನ ಮ್ಯಾಲಕೂ ಹಾರಿಸುವನೆಂದೂ ನುಡಿದಿದ್ದರಂತೆ. ಆವತ್ತಿನಿಂದಿವತ್ತಿನತನಕ ಕಾಟನಾಯಕನು ರೋಮವೇ ಸಕಲ ಸರುವಸ್ಸುವಯಂದು ಭಾವಿಸಿ ಪೋಷಿಸಿಕೊಂಡು ಬಂದಿದ್ದನು. ರೋಮದ ಕಾರಣದಿಂದ ಪ್ರಜೆಗಳ ಬಾಯಿಯಿಂದ ಜಾಂಬುವಂತ ನಾಯಕನೆಂದೂ ಕರೆಯಿಸಿ ಕೊಳ್ಳುತಲಿದ್ದನು. ತನ್ನ ಯಿರಾಮದ ಯೇಳೆಯನ್ನು ಕೂದಲನ್ನು ವಪ್ಪ ಮೋರಣದಿಂದಿಡಲು ಯಿನಿಯೋಗಿಸುತಲಿದ್ದನು. ರೋಮಯಂದರೆ ಪರಾಕ್ರಮ, ಪರಾಕ್ರಮವೆಂದರೆ ರೋಮವು ಮಂದು