ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪ ಅರಮನೆ ಗುರುತರವಾಗಿ ನಂಬಿಕೊಂಡು ಬಂದಿದ್ದನು ಸೀವನೇss ಸದರಿ ದಿನದ ಬೆಳಗಾ ಮುಂಜಾನೆ ಬಲು ಯಿಸ್ತಾರವಾದ ಲಟಗೂ ಪುಟುಗೂ ಮಂಚದ ಮಾಲ ಯಂದಿನಂತೆ ತಾನು ಮಲಗಿಕೊಂಡಿದ್ದನಷ್ಟೆ. ಜಾವ ಆರಂಭಗೊಂಡಾಗ ತನ್ನ ಸರೀರ ದಾದ್ಯಂತ ಯೇನೋ ಬುಳು ಬುಳು ಹರದಾಡುತ್ತಿರುವಂತೆ ಭಾಸವಾಯಿತು. ಹಾಸಿಗೆ ವಳಾಗಿನಿಂದ ಹುಳುಪ್ಪಟೆಗಳೇನಾದರೂ ತನ್ನ ಸರೀರಕ್ಕಮರಿಕೊಂಡಿರಬೌದೇ ಯಂದು ಪರಪರಕೆರೆದುಕೊಂಡು ವಂದಕ ಹೋಗಿ ಬಂದು ಅಳಾರಾದನು. ಆದರೆ ಬುಳುಜುಳು ಹೆಚ್ಚಾಯಿತೇ ಹೊರತು ಕಡಿಮೆ ಆಗಲಿಲ್ಲ. ರಾಜರಾದೋರು ಸೂಯ್ಯೋದಯಕ್ಕೂ ಮೊದಲೇ ಯದಲ್ಲಿ ರಾಜ್ಯವು ಸುಭಿಕ್ಷವಾಗಿರತಯೆ ಯಂದು ಭಾವಿಸಿ ಮದ್ದು ಸೀರುಣಿಕೆಯನ್ನು ಕಯ್ದೆತ್ತಿಕೊಂಡು ತನ್ನ ಸರೀರದ ವಂದೊಂದು ಭಾಗವನ್ನು ಹೀರಿಕೊಳ್ಳಲಕ ಹತ್ತಿದನು. ಸೀರುಣಿಕೆ ಗುಂಟ ತುಪ್ಪಳ ಪೆಂಡೆ ಪೆಂಡೆಯಾಗಿ ವುದುರುತ್ತಿರುವುದ ಕಂಡು ಅಯ್ಯಯ್ಯೋ ಯಂದು ವುಲ್ಲಾರವ ಮಾಡುತ.. ತೊಡೆ ಮ್ಯಾಗಳ, ಮೊದ ಮ್ಯಾಗಳ.. ಯದೆ ಮ್ಯಾಗಳ, ತಲೆ ಮ್ಯಾಗಳ, ವುಂಗುಟ ಮ್ಯಾಗಳ ರೋಮವಳಿದೂ... ಅಳಿದು ಸರೀರವು ಬೋಳಾಯಿತು. ವಂದೊಂದು ಬೊಗಸೆಯಿಂದ ರೋಮವನ್ನೆತ್ತಿಕೊಂಡು “ನಿಮಗೆ ನಾನೇನಂಥಾ ಪ್ರೀತಿ ಮಾಡಿದ್ದೇ ಅಂತ ವುದುರಿ ಹೋದಿರಿ.. ನಿಮ್ಮನ್ನ ನಾನಾರನೇ ಹೆಂಡತೀಂತ ತಿಳಕೊಂಡು ಪಾಲನೆ ಪೋಸಣೆ ಮಾಡುತ್ತಿದ್ದೆನಲ್ಲಾ.. ಯಿನ್ನಾದರು ಅಂಟುಕೊಳ್ಳರಿ ಯಂದು ತೊಡೆ ಭಾಗದ ಕೂದಲನ್ನು ಮೂಗಿನಡಿಗೂ.. ಮೂಗಿನಡಿ ಕೂದಲನ್ನು ತಲೆಯ ಮ್ಯಾಲಕ್ಕೂ ಅಂಟಿಸುವ ಯಿಫಲ ಪ್ರಯತ್ನ ನಡೆಸಿದನು ಮತಿಗೆಟ್ಟವನಂತೆ. ಅಂಟಿಕೊಳ್ಳದೆ ಅವು ವುದುರುದುರಿ ಬಿದ್ದವು.. “ಅಯ್ಯೋ ನನಕೂದಲೂ.. ನನ ಕೂದಲೂ.. ರೋಮವಿಲ್ಲದ ನನ ಬೋಳು ಸರೀರವನ್ನು ಹೆಂಡರಿಗೆಂಗ ತೋರಿಸಲಿ.. ಪ್ರಜೆಗಳಿಗೆಂಗ ತೋರಿಸಲಿ. ಕುದುರೆಡವು ಸಾಮುರಾಜ್ಯ ಲಚ್ಚುಮಿಯು ನನ್ನನ್ನು ತಿರಸ್ಕಾರ ಮಾಡಿದರೇನು ಗತಿ..” ಯಂದವನು ಗಗ್ಗರಿಸಿ ಅಳುತಲಿದ್ದ ದೊನಿಯು ಲೋಬಾನದ ಹೊಗೆಯಂಗೆ ಅರಮನೆಯ ತುಂಬೆಲ್ಲ ಘಮ್ಮಂತ ಪಸರಿಸಿತು ಸಿವನೇ.. ರಾಜಮಾತೆ ವಳಗೊಳಗೆ ಸಂತೋಷಪಡುತ “ಒಂದಲ ಜಲುಮದ ಪಾಪ ಯೀ ಜಲುಮದೊಳಗ ಕಾಣಿಸಿದ್ದಂಗಯ್ಯ ರಾಜ ಕೊಮಾರ.. ಪುವಲ ರಾಜರಂದರ ಕೂದಲನು ಕರಡೀಗಳಿಗೆ ಕಡ ಕೊಡುತ್ತಿದ್ದಂಥೋರು ಕನಪ್ಪಾ..