ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

605 ಅರಮನೆ ತೋಳದ ಬೆನ್ನಮ್ಯಾಲ ಟಗರು ಸವಾರಿ ಮಾಡೋ ಕಾಲ ಬಂದೀತು ಭೋ ಪರಾಕ್” ಯಂದು ಕೂಗಿ ವುದುರಿಸಿದನು. ನರಸಿಂಗನ ಬಾಯಿಯ ಗವ್ವರದಿಂದ ಹೊರಗೆ ತುಳುಕಿದ ಕಾರಣಿಕ ಪಕ್ಷಿಯು ಕೇಳು ಕೇಳುತಿರಲಕ್ಕ ಯಿಡೀ ಪಟ್ಟಣವನ್ನು ಆವರಿಸಿದ್ದಾಗಲೀ, ಸಾವುರ ರೆಕ್ಕೆಗಳನ್ನು ಮುಡ ಕೊಂಡ ದ್ದಾಗಲೀ, ಹಾರುತಾರುತ ಹೋಗಿ ಅಂತರಾನಗೊಂಡದ್ದಾಗಲೇ ತಡಾಗಲಿಲ್ಲ. ಯೋಚಿಸ ತೋಚಿಸುತ್ತ ಮಂದಿ ಬೆಕ್ಕಸ ಬೆರಗಾಗಿ ಬಿಟ್ಟಿತು. ಕಾರಣಿಕದ ವಂದೊಂದು ಅಡ್ಡ ಪೋಣಿಸುತ್ತ ಗಡಗಡ ನಡುಗಲಾರಂಭಿಸಿತು. ಆಯ್ ಕಾಮ್ ಜಾಮ್‌ಕಾಯ್ ಬೆಂಕೀಲಿ ಬೆಂದಾಯ್ ಆಗಿಬಿಟ್ಟಿತು. ನೋಡುನೋಡುತಿರಲಿಕ್ಕೆ ವಳಿತದೊಳಗಿದ್ದ ನಾಕೂ ಗುಡ್ಡಗಳಿಗೆ ಅಂಟರು ಪುಳುಕೆಗಳಂತೆ ಅಂಟರಗಾಲು ಹಾಕಿಬಿಟ್ಟಿತು ಮಂದಿ, ಗುಡ್ಡದ ವಂದೊಂದು ಕೋಡುಗಲ್ಲನ್ನವುಚಿ ಕೊಂಡು ಮೋಬಯ್ಯಾ.. ಮೋಬಯ್ಯಾ.. ತಾಯಿ ಯಂದೂರಲಿತು ಮಂದಿ, ಮೊರಲೀ ಮೊರಲೀ ತಮ್ಮ ತಮ್ಮ ಗಂಟಲನ್ನು ಸವೆಸಿಕೊಂಡಿತು ಮಂದಿ. ಗಾವುದ ದೂರ ಹೋಗುವಂತೆ ವುಸುರು ಬಿಟ್ಟಿತು ಮಂದಿ, ಯೋಜನ ದೂರದವರೆಗೆ ನಾಲಗೆ ಚಾಚಿತು ಮಂದಿ.... ಆದವಾನಿ ವಳಿತದ ಮೂಲೆಯಲ್ಲಿದ್ದ ಕುರುಮಯ ಗೂಡೆಂಗೆ ಥಾಮಸು ಮನೋ ಸಾಹೇಬನು ಯಾಕೆ ಹೋಗಬೇಕಾಗಿ ಬಂದಿತೆಂದರೆ? ಸರಕಾರದ ಯಾದಿಯಲ್ಲಿ ಅದು ಯಿರಲಿಲ್ಲ. ಅಲ್ಲಿ ಜಮೀಂದಾರಿಕೆಯ ವುಪಟಳಯಿರಲಿಲ್ಲ. ಮ್ಯಾಲು ನೋಟಕ್ಕೆ ಅಲ್ಲಿ ಕೇವಲ ಯರಡು ಜಾತಿಗಳು. ಅವೆಂದರೆ ಬ್ಯಾಡರು ಮತ್ತು ಕುರುಬರು ಮಾತ್ರ, ವಂದೊಂದು ಜಾತಿಯೊಳಗೆ ಹತ್ತಾರು ವುಪಜಾತಿ ಪಂಗಡಗಳಿದ್ದವು. ವಂದೊಂದು ವುಪಜಾತಿಗೂ ವಬ್ಬೊಬ್ಬ ಮುಖಂಡನಿದ್ದನು. ಆತನು ತನ್ನ ಕೋಮನ್ನು ಹಿಂದು ಕೋಮಿನ ಯಿರುದ್ದ ಸದಾ ಯತ್ತಿಕಟ್ಟುತ ಲಿದ್ದನು. ಪರಸ್ಪರ ಕಣ್ಣು ಕೆಂಪಗೆ ಮಾಡಿಕೊಂಡು ನೋಡುವುದು, ಹಲ್ಲು ಮಸೆಯುವುದು ನಡೆದೇಯಿತ್ತು. ಕುಲ್ಲಕ ಕಾರಣಗಳಿಗಾಗಿ ವುಪ ಪಂಗಡಗಳ ನಡುವೆ ಜಗಳ, ಹೊಡೆದಾಟ ವರುಸೊಪ್ಪತ್ತಿನಲ್ಲಿ ಮೂರುನಾಕು ಸಲವಾದರೂ ನಡಯದೇ ಯಿರುತ್ತಿರಲಿಲ್ಲ... ರಾಮಾರಗುತ ಮಾಡಿಕೊಂಡವರು ಗ್ರಾಮದ ಗಡಿ ದಾಟಿ ರಕ್ಷಕ ಠಾಣೆಗೆ ಹೋಗಿ ದೂರು ಸಲ್ಲಿಸುತ್ತಿರಲಿಲ್ಲ... ಕುಂಪಣಿ ಸರಕಾರದ ಸಾಯದಿಂದ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಹಾಗೆ ಮಾಡುವುದರಿಂದ ತಮ್ಮ ಕೋಮಿನ ಕುಲದೇವತೆ ಮುನುಸಿಕೊಳ್ಳುತ್ತಾಳೆ ಯಂಬ ಅಚಲ