ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ನಂಬುಗೆಯಿಂದ, ದೂರುಕೊಟ್ಟಲ್ಲಿ ಕುಂಪಣಿ ಮಂದಿ ಕರಗಲ್ಲು ದಾಟುವುದರ ಮೂಲಕ ತಮ್ಮ ಗ್ರಾಮವನ್ನು ಮಯ್ಲಿಗೆ ಮಾಡುವರು ಯಂಬ ಯಿನ್ನೊಂದು ಕಾರಣವೂಯಿಲ್ಲದಿರಲಿಲ್ಲ. ಸಮುದ್ರದರುಸನ ಮಾಡಿದೋರನು, ಸಮುದ್ರದ ಗುಂಟೆ ಪ್ರಯಾಣ ಮಾಡೋರನು ತಮ್ಮ ಗ್ರಾಮಕ್ಕೆ ಹತ್ತಿರ ಸುಳಿಯಗೊಡುವುದಿಲ್ಲ ಆ ಗೂಡೇಮಿನವರು, ಕುಂಪಣಿ ಮಂದಿ ಅಂದರ ಸಮುದ್ರದಾಟಿ ಬಂದಿರೋರು ತಾನೆ? ಥಾಮಸು ಮನೋ ಸಾಹೇಬನ ಮಧ್ಯಸ್ಥಿಕೆಗೆ ಹಂಬಲಿಸಿದ ಘಟನೆ ಯಾವುದೆಂದರೆ... ಅದೆಯಾ..... ಯೀ ಪ್ರಕಾರವಾಗಿ ಚಾಣಾಕ್ಷ ಅಧಿಕಾರಿಯಾದ ಮನೋ ಸಾಹೇಬನು ಕೊಡಲಿ ಯಿಂದಾಗೋ ಕಾಲ್ಯವನ್ನು ವುಗುರಿನಿಂದಲೂ, ವುಗುರಿನಿಂದಾಗೋ ಕೆಲಸವನ್ನು ಕಣ್ಣನ್ನೆ ಯಿಂದಲೂ, ಕಣ್ಣನ್ನೆ ಯಿಂದಾಗೋ ಕೆಲಸವನ್ನು ಬಾಯಿಮಾತಿನಿಂದಲೂ ಮಾಡುತ, ಯಲ್ಲ ರಿಂದಲೂ ಸಯ್ಯನ್ನಿಸಿಕೊಳ್ಳುತ, ಜಾತಿ ಜಾತಿ ನಡುವೆ, ಕೋಮು ಕೋಮಿನ ನಡುವೆ ಸವುಹಾರ ವಾತಾವರಣವನ್ನುಂಟುಮಾಡುತ... ಅತ್ತ ಕೂಡ್ಲಿಗಿ ವಳಿತದೊಳಗಿದ್ದ ಪಾಳೆಪಟ್ಟುಗಳು ಅಡಚಣೆಗಳ ಆಕ್ರಮಣಕ್ಕೆ ತುತ್ತಾಗಿ ತತ್ತರಿಸ ತೊಡಗಿದ್ದವು. ಮದ್ಯಸೇವನೆ , ಜೂಜು ಲಂಪಟತನಗಳನ್ನಂಟಿಸಿಕೊಂಡೂ ಚಟಗಳ ದಾಸವರೇಣ್ಯರಾಗಿದ್ದ ಪಾಳೇಗಾರರು ತಮ್ಮ ಹಣದ ಅಡಚಣೆ ನಿವಾರಿಸಲೋಸುಗ ಪ್ರಜೆಗಳ ಮ್ಯಾಲ ಹೊಸ ಹೊಸ ತೆರಿಗೆಗಳನ್ನು ಹೇರಲಾರಂಭಿಸಿದ್ದರು. ಪಿಳ್ಳೆ ನೋಡಿದರಿಷ್ಟು ಮದುವೆ ಆದರಿಷ್ಟು ಸೋಬನ ಪ್ರಸ್ತವಾದರಿಷ್ಟು ಮಕ್ಕಳಾದರೆ ಯಿಷ್ಟು ಯಂಬಂಥ ತೆರಿಗೆಗಳನ್ನು ಲೆಕ್ಕ ಹಾಕುತ್ತ ಹೋದರೆ... ಹರಪನಹಳ್ಳಿ ಪ್ರಾಂತದ ಅರಸನಾಳು, ಕುಂಚೂರು, ತೆಲಿಗೆ, ದುಗ್ಗಾವತಿ ಗ್ರಾಮಗಳ ಪ್ರಜೆಗಳಂತೂ ತೆರಿಗೆ ಸಂದಾಯ ಮಾಡಲಾಗದೆ ಆಳುವವರ ಯಿರುದ್ಧ ತಿರುಗಿ ಬಿದ್ದಿದ್ದರು.. ತೆರಿಗೆ ವಸೂಲಿ ಮಾಡಲಕಂತ ಬಂದವರನ್ನು ವದ್ದೋಡಿಸಲಾರಂಭಿಸಿದ್ದರು. ಸಯೀಕರಿಗೂ, ಪ್ರಜೆಗಳಿಗೂ ನಡುವೆ ಗುಂಪು ಘರಣೆ ದಿನಂಪ್ರತಿ ನಡೆಯುತ್ತಲೇಯಿತ್ತು. ತೆರಿಗೆ ನಿರಾಕರಿಸುವವರನ್ನು, ರಾಜಾಗ್ನೆಗಳನ್ನು ದಿಕ್ಕರಿಸುವವರನ್ನು ದ್ರೋಹಿಗಳೆಂದು ಪರಿಗಣಿಸಿ ಅಂಥವರಿಗೆ ಮರಣದಂಡನೆಯನ್ನು ಮಿಧಿಸಲಾಗುತ್ತದೆ ಯಂದು ರಾಜರುಗಳು ಪ್ರಚಾರ ಮಾಡುತ್ತಿದ್ದುದು ಮಾಮೂಲು ಸಂಗತಿ ಆಗಿತ್ತು. ಅದರ ಬೆನ್ನ ಹಿಂದೆಯೇ ಕ್ರುಷಿ ಕಾರಿಕರ ಸಣ್ಣ ಹಿಡುವಳಿದಾರರ ಸಂಘಟನೆಗಳು ಚಕಚಕಾಂತ