ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೧೩ ಯಿಲ್ಲಾಂದರ ತಾವು ರವುರವ ನರಕಕ್ಕೆ ಭಾಜನರಾಗುತ್ತಿದ್ದೆವಲ್ಲಾ.. ಅದಕ ಹಿರೇರು ಯಿರಬೇಕಂತ ಹಿರೇರು ಹೇಳಿರೋದು... - ಅಯ್ಯಯ್ಯೋ... ಅಲಲಲಾss... ಮುಂದ ಮುಂದಕ ಹೋದಂಗ ಮಾಡೋದು.. ಹಂಗss... ಹಿಂದ ಹಿಂದಕ ತಿರುಗಿ ಅರಮನೇನ ಕಳ್ಕೊಳಗ ತುಂಬಿಕೊಳ್ಳೋದು.. ತಮ ತೆಪ್ಪ ಹೊಟ್ಟೇಲಿ ಹಾಕ್ಕೊಳ್ಳೆ ನಮ್ಮವ್ವಾ ಯಂದು ಸಣುಮಾಡೋದು ಮಾಡುತ ಮಂದಿ ಮತ ಮತ್ತ ಹೋಳ್ಕೊಳ್ಳಿ ಹೋಗಲಾರಂಭಿಸಿದ ಯಾಳ್ಮೆ ಯಾವುದಿತ್ತೆಂದರೆ ಅದೇ ಯಿತ್ತು. ಬಿಸಿಲುಗುದುರೆಗಳ ಖುರಪುಟದ ಸದ್ದು ಕಿವಿಗಡಚಿಕ್ಕುವಂಥ ಯಾಳ್ಳೆ ಅದಾಗಿತ್ತು. ಮುಗ ಜಲಧಾರೆಯಿಂದಾಗಿ ತೊಯ್ದು ತಪ್ಪಟೆಯಾಗಿದ್ದಂಥ ಯ್ಯಾಳೇವು ಅದಾಗಿತ್ತು. ಮಂದಿಯ ಕಣ್ಣುಗಳ ಮತ್ತು ಮೂಗುಗಳ ನಡುವೆ ಅಂಥ ಫರಕು ಯಿರಲಿಲ್ಲ.. ಅವೆರಡರ ಧಾರೆಯು ವಂದೇ ಆಗಿತ್ತು. ಅವರ ದುಕ್ಕವು ಲಂಗು ಲಗಾಮಿಲ್ಲದ ಯ್ಯಾಳ್ಳೆ ಅದಾಗಿತ್ತು. ಅದೇ ಯ್ಯಾಳೋಕ್ಕೆ ಸರಿಯಾಗಿ ಬಡೇಲಡುಕಿಗೆ ವಂದು ಗಾವುದ ದೂರದಲ್ಲಿದ್ದ ಬತ್ತಿ ಮರದಡೀಲಿ ಜಗಲೂರೆವ್ವ ಅದೇ ಯಿನ್ನು ತನ್ನ ಪತಿವುರೊತಾ ಸಿರಿ ಸಂಪತ್ತನ್ನು ನಾನಾ ನಮೂನಿ ಹಳಿದುಕೊಳ್ಳುತ್ತ ಮಂನ್ನು ಚೆಲ್ಲಿದ್ದಳು.. ವಂದು ಜೊಂಪು ಗಾಢ ನಿದ್ರೆಆವರಿಸಿತ್ತು.. ಅದರ ತರುವಾಯು ಬಿದ್ದ ಕಣಸೂಳಗ ಬಿರುಕು ಬಿಟ್ಟಿರುವ ನೆಲ.. ಯಿರುಕುಲುಗಳಲ್ಲಿ ಹೊಳೆ ಹಳ್ಳಗಳ ಕಳೇಬರಗಳು.. ಅವುಸಧಕ್ಕೆ ಬೇಕೆಂದರೂ ವಂಥಟಗಾದರು ಹಸಿರಿಲ್ಲದ.. ಹಸಿರ ವುಸುರಿಲ್ಲದ ನೆಲದ ದುಕ್ಕವನ್ನು ವರಣನಾತುಮವಾಗಿ ಆಕಾಸಕ್ಕೆ ಪ್ರವರ ಸಲ್ಲಿಸುತ್ತಿರುವ ಬೋಳು ಮರಗಳು ಅಲ್ಲೊಂದು ಯಿಲ್ಲೊಂದು... ರೆಕ್ಕೆ ಹರಕೊಂಡಿರುವ, ಕೊಕ್ಕು ಮುರಕೊಂಡಿರುವ ಪಕ್ಷಿಗಳು ಅಲ್ಲೊಂದು, ಯಿಲ್ಲೊಂದು.. ಆ ತುದಿಯಿಂದ ಯೀ ತುದಿ ಮುಟ ಮುಪ್ಪಾನು ಮುದುಕಿಯೊಂದು ತನ್ನತ್ತ ನಡಕೋತ ನಡಕೋತ ಬಂತು. ನೀನ್ಯಾರವ್ವಾ ಯಂದು ಜಗಲೂರೆವ್ವ ಕೇಳಿದ್ದಕ್ಕೆ ಅದು “ತಂಗೀ.. ನಾನು ಕಣವ್ವಾ.. ಪುವ್ವಲ ರಾಜವಮುಸದವರ ಕುದುರಡವರ ಮನೆಯವ್ವ' ಯಂದು ಖನ ಗುರುತು ಹೇಳಿಕೊಂಡಿತು.. ಆಗಿದ್ದು ಮೋಬಯ್ಯನ ಸತೀಮಣಿಯು “ಹೆಂಗಿದ್ದಾರೆ ಹೆಂಗಾಗಿಬಿಟೀಯಲ್ಲವ್ವಾ..” ಯಂದು ಪರಾಮರಿಸಿದ್ದಕ್ಕೆ ಅದು ಪಟ್ಟಣದ ಪ್ರತಿಯೊಂದು ಯಿದ್ಯಾಮಾನವನ್ನು ಕೂಲಂಕಷ ಯಿವರಿಸಿ ಹೇಳಿತು. ತನ್ನ ಮಕ್ಕಳು ತನ್ನ ಮ್ಯಾಲ ಮುಗಿಬಿದ್ದುದ್ದನ್ನೂ, ಜಡೇತಾತನು ಆಪದ್ಬಾಂಧವನಂತೆ ಬಂದು ತನ್ನನ್ನು ಕಾಪಾಡಿದ್ದನ್ನೂ ಹೇಳದೆಯಿರಲಿಲ್ಲ ಅದು.. ನೀನು