ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

009 ಅರಮನೆ ಕುಂತಳ ನಾಡಿನಾದ್ಯಂತ ಯಿಖ್ಯಾತನಾಗಿರುವನು. ಪ್ರಾಂತದ ಯಷ್ಟೋ ಪಾಳೆಪಟ್ಟುಗಳಿಗೆ ತೀರಾ ಅಗದಿ ಆಗಿರುವನು. ಅಪ್ಪಟ ಸಸ್ಯಾಹಾರಿಯಾಗಿರುವ ತಾನು ಕುರಿಕೋಳಿಗಳನ್ನು ಬಲಿಕೊಟ್ಟಿರುವುದು ಲೆಕ್ಕಯಿಲ್ಲ. ಹತ್ತಾರು ಕಡೇಕ ಬಸುರೆಣುಮಕ್ಕಳನ್ನೂ ಸಹ. ಮೂಲತಹ ಸೂದ್ರನೂ, ನಾಮತಹ ಬ್ರಾಹ್ಮಣನೂ ಆದಂಥ ಸಾಸ್ತಿರಿಂಯ ಅಂಜಣ ಯಿಂರು ತನ್ನ ಪೂರುವಿಕರಿಂದ ಬಂದಿರುವಂಥಾದ್ದು. ಆಯ್ದವಾರ ಅಮವಾಸ್ಯೆ ಬಂದಲ್ಲಿ ಯಿರುಳ ಪದ್ಯಂತ ಮಸಣದೊಳಗೆ ಹಬ್ಬ ಮಾಡುವ ಜಾಯಮಾನ ದವಯ್ಯನು ನಿಧಿಯ ಸುಳಿವನ್ನು ಯೋಗ ನೀಡುತ್ತಾನೆ, ಆಗ ನೀಡುತ್ತಾನೆ. ಕುರಿ ಬಗಸಿದಲ್ಲಿ ನೂರು ಕುರಿ ಜೋಡಿಸುವುದು ಕಷ್ಟವಾಗಲಾರದು. ಕೋಳಿ ಬಗಸಿದಲ್ಲಿ ಅಯೂರು ಕೋಳಿ ಜೋಡಿಸುವುದು ಕಷ್ಟವಾಗಲಾರದು ಬಸುರೆಣುಮಗಳನ್ನು ಬಗಸಿದಲ್ಲಿ!... ತನ್ನ ಘನ ಸೊಸ್ಕರ ಪಯ್ತಿ ಬಸುರು ಯಾರಾಗಿರುವರು? ಅದೂ ಕಾಟಯ್ಯನಿಂದ ಅಂಥ ಪತಿವುರೊತಾ ಸಿರೋಮಣಿ ತನ್ನ ಸೊಸ್ಕರ ಪಯ್ಕೆ ಯಾವಾಕೆ ವುಂಟು? ಅರಮನೆಯ ಯೇಳಿಗೆಗಾಗಿ ಅವರ ಪಯ್ಕೆ ಆತುಮಾಹುತಿಯಾಗೋರು ಯಾರುಂಟು? ಮಬ್ಬಿನ ಅವುಸಧ ಕುಡಿಸಿ ಬಲಿಕೊಟ್ಟಲ್ಲಿ ಯದುರಾಗುವ ಸಾಧಕ ಬಾದಕಗಳಾವುವು? ಭದ್ರವಾಂಬೆ ತೂಕಡಿಕೆಯನ್ನು ಬದಿಗೊತ್ತಿ ಯೋಚಿಸುತ್ತಿರುವಾಗ್ಗೆ ಸಾಸ್ತಿರಿಯು ವಂದು ನಿಟ್ಟುಸುರು ಬಿಟ್ಟು ತನ್ನ ಹೊತ್ತಿಗೆಗಳನ್ನು ತಲೆಬುರುಡೆಯೊಂದಿಗೆ ಗಂಟು ಕಟ್ಟಿದನು. ಯಾಕಪ್ಪಾ ನಿಟ್ಟುಸಿರು ಬಿಟ್ಟೆ ಯಂದು ರುದ್ದೆ ಬಾಯಿ ಬಿಟ್ಟು ಕೇಳಿದ್ದಕ್ಕಾವಯ್ಯನು “ತಾಯೇ.. ಯೇ ಅರಮನೆಯಲ್ಲಿ ಅಗೋ ಅಲ್ಲಿ, ಯಗೋ ಯಲ್ಲಿ ನಿಧಿ ಅಡಗಯ್ತಿ. ವಜ್ರವಯ್ಯರ ಮುತ್ತು ರತುನಗಳ ರೂಪದಲ್ಲವಳ ಲಚ್ಚುಮಿಯು, ಆಕೆಯೊಂದಿಗೆ ನಾನು ಮತ್ತು ಮಾತಾಡಿದೆನವ್ವಾ. ರಾಜಮಾತೆಯು ಗಂಡವುಳ್ಳಾಕೆಯಾ ಯಂದು ಪ್ರಶ್ನೆ ಹಾಕಿದಳು. ರಂಡ ಮುಂಡೆ ಯಂದು ಹೇಳಿದೆನು. ಅಯವತ್ತೊಂದು ಅಮವಾಸ್ಯೆ ಆಕೆ ಸುಡುಗಾಡಿಗೆ ಬಂದು ರೈತ ಮಾಡುತಾಳಾ ಯಂದು ಕೇಳಿದಳು. ಅದಕಿದ್ದು ನಾನು.. ಅದೆಂಗಾತತ ತಾಯೇ.. ಆಕೆ ಮುದೇಕಿ ಅದಾಳ.. ಮ್ಯಾಲಾಗಿ ರಾಜಮಾತೆ ಅದಾಳ ಯಂದು ವುತ್ತರಿಸಿದೆನು.. ಅಂದಮ್ಯಾಲ ನಾನಾಕೆಗೆ ವಲಿಯಾಕಿಲ್ಲ ಅಂದುಬಿಟ್ಟಳವ್ವಾ.. ಕಾಟಯ್ಯನಿಗೆ ವಲಿಯಾಕಿಲ್ಲ ಅಂದಳು. ಬಯಚಪ್ಪನ ಹೆಂಡತಿಗೆ ತಾನು ವಲಿಯುವ ಯೋಗ ವುಂಟೆಂದು ಹೇಳಿದಳು.. ಹಿಂಗಯ್ತಿ ನಿಧಿಯ ಪರಿಸ್ಥಿತಿ” ಯಂದನಕಂತ ಮತ್ತೊಂದು