ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೧೮೩ ನಿಟ್ಟುಸಿರುಬಿಟ್ಟನು. ಅದನ್ನು ಕೇಳಿ ರಾಜಮಾತೆಯು “ಪ್ಲಾ...ಹ್ಲಾ... ಸಾಸ್ತಿರಿಯೇ? ಯಂದಳು. ಬಯಚಪ್ಪ ಸಿಗುವುದು ಯಾವಾಗ? ಕೊಲೆಯಾಗಿರುವನೆಂಬ ವದಂತಿಗೆ ಭಾಜನನಾಗಿರೋ ಆ ತನ್ನ ಮುದ್ದು ಕುವರನು ಮದುವೆ ಯಾಗುವುದು ಯಾವಾಗ? ಸಾಂಬವಿಯ ವಲುಮೆಯಿಂದೇನಾದರೂ.. ತಾಯೇ ಸಾಂಬವೀ ಯಂದಾಕೆ ಕಯ್ಕೆಲ್ಲ ಮುಗಿತಾ ಭಕುತಿಯ ಮಂಪರಿನಲ್ಲಿದ್ದಾಗ ಸಾಸ್ತಿರಿಯು ದಕ್ಷಿಣೆಯನ್ನು ಬೊಕ್ಕಣಕ್ಕಿಳಿಬಿಟುಕೊಂಡು ಅಲ್ಲಿಂದ ಯಾವಾಗಲೋ ಹೊತಾ ಹೋಗಿಬಿಟ್ಟಿದ್ದ ನಂಬಲ್ಲಿಗೆ ಸಿವ ಸಂಕರ ಮಾದೇವಾss ಕಳೇಬರ ಯಂದು ಭಾವಿಸಿ ಮ್ಯಾಲೆಲ್ಲ ರಣಹದ್ದುಗಳು ಹಾರಾಡುತಲಿದ್ದ ಅರಮನೆಯಿಂದ ಹೊರ ಬೀಳುವ ಮೊದಲು ಭಮ್ರಮಾಂಬೆಯು ದೇವೀಕಥೀನ ಹಲಕುಂದಿ ಮೋಬುಳ ಸಾಬಾಯಿಯಿಂದ ಮೋದಿಸಿ ಸಾಂಬವಿಂಯ ಕ್ರುಪಾಕಟಾಕ್ಷಕ್ಕೆ ಪಾತ್ರಗಳಾಗಬೇಕೆಂಬ ಯಿಚ್ಚೆವುಳ್ಳ ವಳಾಗಿ ಅದಕ ತಕ್ಕ ಯೇರುಪಾಡು ಮಾಡದೆಯಿರಲಿಲ್ಲ. ಅರರೇ ಪಟ್ಟಣ ಸೋಮಿಗಳಾ.. ದಯವಸ್ತರಾ.. ಪಟ್ಟಣದ ಹಿರೀಕರಾss ಅಂತೂ ಅರಮನೆಯ ವುಪ್ಪಿಂಗೆ ದ್ರೋಹ ಬಗೆಯುತ್ತಿರುವಿರಲ್ಲಾ.. ಬರುತಲಿದ್ದೆನೋ.. ಬಿಡುತಲಿದ್ದೆನೋ.. ಎಂದು ಮಾತು ಕರೆಯದೆ ರಾಜಸತ್ತೆಯನ್ನು ವಂಚಿಸಿದಿರಲ್ಲಾ.. ಬೇಬಿಷ್ಟಿ ಮಾಡಿದಿರಲ್ಲಾ.. ತಾನು ಮಾಮೂಲು ಮನುಶೂಳು ಅಂದಕೊಂಡಂಗದೀರೀ... ತನ್ನೆಡತೋಳ ಮ್ಯಾಲಿರೋ ಪುವಲ ರಾಜ ಚಿನ್ನೆಗಾರಾ ಗವುರವ ಕೊಡಬೌದಿತ್ತಲ್ಲ.. ಯಿರಲಿ ಯಿರಲಿ. ಯಡಬಿಡಂಗಿ ಮೋಬಯ್ಯನ ಸರೀರದೊಳಗ ಸಾಂಬವಿ ಯೇಸು ದಿನ ಯಿದ್ದಾಳು.. ಚರಾಸ್ತಿ ಸ್ಥಿರಾಸ್ತೀನ ಅನುಭೋಸೋ ಹಕ್ಕೊಂದೆ ಮನೋ ಸಾಹೇಬ ಮುಂದೊಂದಿವಸ ಕೊಡದಂಗಿದ್ದಾನಾ... ಆಗ ತೋರಿಸುತ್ತೀನಿ.. ಯೇ ರಾಜಮಾತೆ ಯಂಥವಳೆಂಬುದನ.. ನಿಮ್ಮನ್ನು ನಿಮ್ಮ ನಿಮ್ಮ ಹುದ್ದೆಗಳಿಂದ ವಜಾ ಮಾಡಿ... ತನ್ನನ್ನು ಯಾರೊಬ್ಬರು ಗುರುತು ಹಿಡಿತಾಯಿಲ್ಲವಲ್ಲಾ.. ಪಲ್ಲಾಕಿ, ಡೋಲಿಯೊಳಗ ಬರಬೇಕಿದ್ದಾಕೆ ನಡಕೊಂಡೇ ಹೊಂಟಿಯಲ್ಲಿ ತಾಯಿ ಯಂದು oಾರೊಬ್ಬರು ಕೇಳುತಾಯಿಲ್ಲ ವಲ್ಲಾ.. ವರಾರ ಮುಜುರೆ ಸಲ್ಲಿಸುತಾಯಿಲ್ಲವಲ್ಲಾ.. ದಾರಿಬಿಟ್ಟು ಹೋಳಾಗುತಾ ಯಿಲ್ಲವಲ್ಲಾ ಯಂಬ ಸಂಕಟದ ಕಾವಲಿ ಮ್ಯಾಲ ಬೇಯೂತ ಬೇಯೂತ.. ಯಲ್ಲಿದ್ದೀತು ಆ ಸಿಡೇಗಲ್ಲಗಸೇ ಬಾಕಲು, ಯಲ್ಲಿದ್ದೀತು ಆ ಕರಗಲ್ಲು.... ತಾನು ನಡದಂಗೆಲ್ಲ