ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೨೧೫


ಮಾಡಲಕೆಂದು ಯೇಳೆಂಟು ಮಂದಿ ಕಿಲಾರಿಗಳು ಯಿಫಲ ಪ್ರಯತ್ನ ನಡೆಸಿದ್ದರು.
ಯ್ಯೋಯ್ ಯಜ್ಜಾ ರಾಸುಕುಲದ ಮ್ಯಾಲ ತಾಯಿ ರೋಸ
ಮಾಡಿಕಂಡಗಂಗಯ್ತೆ.. ಪರೀಕ್ಷೆ ಮಾಡುತಿದ್ದಂಗಯ್ತೆ.. ಬಲಗಯ್ಲಿ ಕೊಟ್ಟು
ಯಡಗಯ್ಲಿ ಕಸಗಳ್ಳೋ ಮಸಲತ್ತು ನಡದಂಗಯ್ತೆ.. ಯಂದು ಮುಂತಾಗಿ
ಪಾಪಯ್ಯ ಯಂಬ ಕಿಲಾರಿಯೂ, ಯಿವು ಹಿ೦ದಲ ಜಲುಮದೊಳಗ ದಯವಕ್ಕ
ಅಪಘಾತ ಮಾಡಿದ್ದವೋ... ಅದಕ ತಾಯಿ ಲೆಕ್ಕಾಚಾರ ಸುರುವು ಮಾಡ್ಯಾಳ
ತಂದೀSS... ಗವುರಸಂದರದೊಳಗ ತಾಯಿಗೆ ನೆಗಡಿ ಬಂದು ಅಕ್ಸಯ್ss
ಯಂದು ಸೀನಿರಬೌದು... ಆಕೆಯ ಸೀನಿನ ಲಕ್ಷಾಂತರ ಬಿಂದುಗಳು ಹುಳುಗಳಾಗಿ
ರಾಸುಗಳ ಮಯ್ಯೋಳಗ ಹೊಕ್ಕೊಂಡಂಗಯ್ತೆ ಕನಪ್ಪಾ.. ತೀಟೆ ತೀರಿಸ್ಕಂಡೇ
ಆ ಹುಳುಗಳು ಹೊರಕ್ಕೆ ಬರೋದು.. ಅಲ್ಲೀಗಂಟಾ ತಡಕಂಬಾಣು” ಯಂದು
ಮುಂತಾಗಿ ಪೂನಯ್ಯ ಯಂಬ ಕಿಲಾರಿಯೂ, 'ಅದೆಲ್ಲ ಹಳೇಕಾಲದ ಮಾತಾತು
ತೆಗೀ.. ಮೊನ್ನೇನಾತಮ್ತೀ.. ಅಯಿದರಾಲಿ ಖಾನ ಚಿತ್ತರ ಕಲ್ಲು ದುರುಗದ
ಕಿಮ್ಮತ್ತಿನ ಕ್ವಾಟೆ ಸುತ್ತಮುತ್ತ ನೂರಾರು ಪಿರಂಗಿಗಳ ತರುಬಿದ್ದು ಯಾರಿಗೆ
ಗೊತ್ತಿಲ್ಲಾಯ್ಯಾ.. ಪಿರಂಗಿಗಳ ಸಿಡುತ ಯಲ್ಲೀಮಟ ಕೇಳಿಬಂತೆಂಬುದು
ಹಿರೀಕರಿಗ್ಯಾರಿಗೆ ಗೊತ್ತಿಲ್ಲಾಯ್ಯಾ... ನೂರಾರು ಗಾವುದ ದೂರ ದೂರ ಯಿರೋ
ನರಮನುಸ್ರೇ ಮೀಟು ನೊಂದುಕೊಂಡವೆಂದ ಮ್ಯಾಲ ಗಿರಿದುರುಗದ
ಮ್ಯಾಲಿರೋ ಯೇಕನಾಥಮ್ಮ ಹಿಡಿಂಬೆಮ್ಮ ವುಚ್ಚೆಂಗಮ್ಮ ಭಯ್ರಾಮಮ್ಮ ಅವರೆಲ್ಲ
ಯೇಟು ನೊಂದು ಕೊಂಡಿದ್ದಾರು... ಎಂದು ನರ ವುಳಾನಾರ ಪಿರಂಗಿ ಬಾಯಿಗ
ಯದೆ ವಡ್ಡೋ ತಾಕತ್ನ ತೋರಿಸಿದ್ದುಂಟಾ?.. ತುರುಕರಾತ ಅಯ್ದರಾಲಿ ನಾಯಕರ
ಅವ್ವಂದಿರೇನ ರಮುಸೋ ಯತ್ನವ ಮಾಡಿದ್ದುಂಟಾ?.. ತಾಯಿಂದಿರೆಲ್ಲ ರೋಸಿ
ಗವುರಸಂದರಕ ಬಂದು ಮಾರೆಮ್ಮನೆದುರು ಯದೆ ಯದೇ ಬಡಕೊಂಡಿಲ್ಲ
ದ್ದುಂಟಾ?.. ಅದಕssನss ಅವೀಸು ಮಂದಿ ತಾಯಂದಿರು ರಾಸುಗಳ ಮ್ಯಾಲ
ಮುಗಿ ಬಿದ್ದಂಗಯಿತರಪ್ಪಾ.. ಅವರನು ಸಾಂತಿ ಮಾಡದ ಹೊರತುss...”
ಯಂದು ಮುಂತಾಗಿ ಜುಮ್ಮಯ್ಯ ಯಂಬ ಕಿಲಾರಿಯೂ, “ಮಾಮೋss ನಿನ
ಮಾತ್ಯಾಕೋss ನನಗ ಸಜ್ಜು ಕಾಂಬಲಿಲ್ಲ ನೋಡು.. ಯಲ್ಲಿ ಚಿತ್ತರಕಲ್ಲು
ದುರುಗss ಯಲ್ಲಿ ಮುರುಡೇsss.... ಯುದ್ಧ ಜರುಗಿ ಯೇಸು ಕಾಲಾತು
ಯೇನು ಕಥೀ... ಆ ಅಮ್ಮಂದಿರಿಗೆ ಅವರದವರಿಗೇ ಮಸ್ತಾಗಿರತಯ್ತಿ. ಅವರ್ಯಾಕ
ಬಂದು ಮಾರೆಮ್ಮನ ಸೇರಿಕೊಂಡಾರು. ಕಂಪಳರಾಯನ ಕಾಲದಾಗ ಅಮ್ಮೋರು