ಈ ಪುಟವನ್ನು ಪ್ರಕಟಿಸಲಾಗಿದೆ

೨೧೬

ಅರಮನೆ


ವಬ್ಬರಿಗೊಬ್ಬರು ಮುನುಸುಕೊಂಡಿದ್ದು ಯಾರಿಗ್ತಾನೆ ಗೊತ್ತಿಲ್ಲಮ್ಮಿ? ನಮ್ಮಂಥ
ನರಮನುಸ್ರುಯಿವತ್ತು ಗುದ್ದಾಡಿ ನಾಳೀಕೆ ರಾಜಿ ಆಗಿಬಿಡಬೌದು..
ಆದರವರಂಗಲ್ಲಪ್ಪಾ.. ಬಲು ರೋಸದೋವವು.. ಯಂದು ಮುಂತಾಗಿ ಪೀತಯ್ಯ
ಯಂಬ ಕಿಲಾರಿಯೂ... “ಹಿಂಗs ಮಾತಾಡ್ತಾ ಹೊತ್ತನ ತಿಮ್ತಿರ್ತೀರೋ.. ಮುಂದ
ಯೇನು ಮಾಡಬೇಕೆಂಬುದರ ಕಡೇಕ ದ್ರುಸ್ಟಿ ಹರವತೀರೋ.. ರ್ವಾಗ ರುಜಿಣsನೆಲ್ಲ
ತಾಯಂದಿರ ತಲೀಗ ಕಟ್ಟೋದ್ಯಾಕ.. ಮಾತ್ರುಸ್ಥಾನದಾಗಿರೋ ಅವರು ತಮ್
ಸಂತಾನಾsನ ತಾವೇ ತಿಂಬೋದುಂಟಾ?.” ಯಂದು ಮುಂತಾಗಿ ಗದ್ದರಿಸಿದ
ಕ್ಯಾತಲಯ್ಯ ಯಂಬ ಕಿಲಾರಿಯೂ, ಮುದೇತನ ಕಡೇಕ ಮುಖ ಮಾಡಿ
“ಯಜ್ಞಾss.. ನೀನು ಸತಮಾನವನs ವುಂಡವನದೀ.. ಅರಗಿಸಿ
ಕೊಂಡವನದೀss.. ಮ್ಯಾಲಾಗಿ ಮಾರಮ್ತಾಯಿಯ ಖಾಸಾ ಮಗನದೀ... ನೀನss
ಸರ್ಯಾದ್ದೊಂದು ಗಿಡಾನ ಗುರುತು ಮಾಡ ಬಾರ್ದೆನು?” ಯಂದಂದನೋ
ಯಿಲ್ಲಮೋ....
ತನ್ನನ್ನು ತಾನು ಬಡಕೊಂಬುದನು, ಯಿದೀನ ಹಳಿವುದನು,
ಹೋssಯಂದಳುವುದನು ಗಪ್ಪಂತ ನಿಲ್ಲಿಸಿದ ಹಂಪಜ್ಜನು ತನ್ನ ತಲೆಗೂದಲನ್ನು
ಕುಂಡಿ ಅಡೀ ಹಾಕ್ಕೊಂಡು ಗಂಭೀರತೆಯಿಂದ ಕೂಕಂಡನು. 'ಗಿಡ' ಅಂಬುವ
ಸಬುಧವು ಅವಯ್ಯನ ತಲೆಯೊಳಗ ಚಕ್‌ಚಕಾಂತ ಚಿಗಿಯತೊಡಿತು. ಲಗೂನ
ಅದರ ಖೂನ ಗುರುತs ಹಿಡೀಲಾಗಲಿಲ್ಲ.. ಅದು ಕಾಸಕ್ಕರವಾ.. ಪೀತರವಾ..
ತಂಬುತವs, ಚೀಕಲಾತವs.. ಗೊರೇಗೊರವs.. ತೀಂಬಳತವಾs..... ಅದು ಆ
ರೋಗಕ್ಕೆ ಬರುತದs, ಯಿದು ಯೀ ಜಡ್ಡಜಿಗಿ ಬರುತದs, ಯಿನ್ನೊಂದು ಆ
ರುಜಿಣಕ್ಕೆ ಬರುತದ, ಕಂಪಳರಾಯನ ಕಾಲದೋವು ಅವೆಲ್ಲ,
ಗಾದರಿಪಾಲನಾಯಕನ ಕಾಲದೋವು ಅವೆಲ್ಲ, ಅವರಿಬ್ಬರ ಪುಣ್ಯವೇ ಅವುಸಧ
ರೂಪದಲ್ಲಿ.. ಆ ಗಿಡಗಂಟೆಗಳೊಳಗ ನಿಂದs.. ಕಾತರಕಿ, ಜಂಪಾಲಯ್ಯನ ಮಲೆ,
ಕುಮತಿ ಹೂಡೇಮು ಕಡೇಲಿಂದ ಗಾದರಿಪಾಲದೇವರು ಸಾವುರಾರು ದನಗಳ
ಮೇಯಿಸೂತ, ಅಲ್ಲಲ್ಲಿ ದವಾರಿಸಿಕೊಳುತ ಗವುರಸಂದರದ ಮೂಲಕ ಆ
ಮಯ್ಮೆವಂತನು ಮುರುಡಿಗೆ ಆಗಮನ ಮಾಡಿರೋದುಂಟು,
ಚುಟುಕಲಕನಂದೆವ್ವನ ಹಳ್ಳದೊಳಗ ರಾಸುಗಳ ಮಯ್ಯ ತೊಳೆದಿರುವುದಂಟು,
ಕ್ಯಾತಯ್ಯ ಮಲೆಯ ಮ್ಯಾಲಿನ ಯಿಸ್ತಾರವಾದ ಗುಡ್ಡದ ಕಾಡೊಳಗ ತನ್ನ
ಸಾವುರಾರು ರಾಸುಗಳನ್ನು ತರುಬಿ ಮೇಯಿಸಿ ದಷ್ಟಪುಷ್ಟ ಮಾಡಿರುವುದುಂಟು,