ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೫೯ ತೇಲಾಡಿದನು. ಯುದ್ಧ ಸಂಬಂಧೀ ನೆನಪುಗಳ ವಸ್ತುಸಂಗ್ರಹಾಲಯದಂತಿದ್ದ ತನ್ನ ಸರೀರದ ವಳಗ ಆರಾಮು, ಹೊರಾಗ ಆರಾಮು ಆಗಿರುವಂತೆ ಭಾಸವಾಯಿತು. ಅಯ್ದು ಸಾಂಕ್ರಾಮಿಕಗೊಂಡಾತನು ಓಹ್.. ಮದರಿಂಡಿಯಾ ಯಂದುದ್ಧಾರ ತೆಗೆದೆನೆಂಬಲ್ಲಿಗೆ ಸಿವ ಸಂಕರ ಮಾದೇವಾss... ಊ ಸುದ್ದೀನ ಸುತ್ತನ್ನಾಕಡೆ ಹಾಡುಕಟ್ಟಿ ಬಿತ್ತುವಣಿಗೆ ಮಾಡಲಕಂತ ಹೂಜಾಡ್ಗರ ಮಾಯವ್ವ, ವಡರಳ್ಳಿ ಸಣ್ಣಕ್ಕ, ಹಿರಿಯವ್ವ ಯಿವರೆಲ್ಲ ಕಿರಿಯವ್ವನ ನೇತ್ರುತ್ವದಲ್ಲಿ ಬಾನೂರು, ಬಸನೂರು, ಕಡೇಕ್ಕೂ, ಜೀವವ್ವ, ಮಾಡೆವ್ವ ಕಂಫಿಬೋರವ್ವ, ಗೊಂಡೆಬೋಸವ್ವ ಯಿವರೆಲ್ಲ ಗರುಡವ್ವನ ನೇತ್ರುತ್ವದಲ್ಲಿ ಲಯಕ್ಕೆಗುಂದಿ, ವಳಗುಂದಿ, ಮುಕ್ಕುಂದಿ ಕಡೇಕೂ ಯತ್ತಪ್ಪ, ಆಕಳಪ್ಪ ಗೂಳೆಪ್ಪಯಿವರೆಲ್ಲ ಕರುವಪ್ಪನ ನೇತ್ರುತ್ವದಲ್ಲಿ ಗೋನಾಳು, ಜಾಲ್ಯಾಳು, ಬ್ಯಾಲಾಳು ಕಡೇಕೂ ಹೊಂಟಿರುವಾಗ್ಗೆ.... ಅಲಬರು ತನ್ನ ಮೇಲಧಿಕಾರಿ ಯಡ್ಡವರನ ಪಾದದ ಬುಡದಲ್ಲಿ ಮಂಡೆವೂರಿ ಕುದುರೆಡವು ಯಾಟಿಕಾನ್ ಪಟ್ಟಣ ಯಿದ್ದಂಗಯ್ಯೋ.. ಅರಮನೆ ಗೋಲ್ಗೊಥಾ ಬೆಟ್ಟ ಯಿದ್ದಂಗಯ್ತಿ. ಮೂಳೆಮೋಬಯ್ಯ ಸಾಕ್ಷಾತ್ ಜೀಸಸ್ ಯಿದ್ದಂಗವನೆ.. ಅಲ್ಲಿನ ಮುದುಕರೆಲ್ಲ ಬಯಬಲ್ಲಿನ ಹಾಳೆಯಿದ್ದಂಗವರೆ.. ಯಂದು ಮುಂತಾಗಿ ನಿವೇದಿಸಿಕೊಳ್ಳುತ್ತಿರುವಾಗ್ಗೆ.... ಜೆನ್ನಿಫರಮ್ಮ ರಚನೆ ಮಾಡಿದಂಥ ಕಲಾಕ್ರುತಿಯು ಚಿತ್ರಕಲಾ ಪ್ರದರನದಲ್ಲಿ ಭಾಗಿಯಾಗುವ ನಿಮಿತ್ತ ಜಾರು ಯಂಬ ಜಹಜಿನಲ್ಲಿ ಸಮುದ್ರದಗುಂಟ ಲಂಡನ್ನಿನತ್ತ ಪ್ರಯಾಣ ಕಯ್ಯೋಂಡಿರುವಾಗ್ಗೆ... ಯಿತ್ತ ಕುದುರೆಡವು ಪಟ್ಟಣದೊಳಗೆ ಯಲ್ಲಿ ನೋಡಿದರಲ್ಲಿ ಸಂಭರಮೋ ಸಂಭರವು, ಬೀದಿ ಗತ್ತತ್ತರಂತೆ ತಳಿರುತೋರಣಗಳು.. ಮುತ್ತಿನ ಚಪ್ಪರಗಳು.. ಮಂಟಪಗಳು.. ಸಾರಣೆ ಕಾರಣೆ ಮಾಡಿದ ನೆಲವು.. ಹೆಜ್ಜೆ ಹೆಜ್ಜೆಗೊಂದೊಂದರಂತಿದ್ದ ರಂಗವಲ್ಲಿಗಳು.. ಕಿವಿ ಚಾಚಿದರಲ್ಲೆಲ್ಲ ತಾಯಿಯ ಮಮ್ಮ ಕೊಂಡಾಡುವ ಹಾಡುಪಾಡುಗಳು.. ಕಣ್ಣು ಚಾಚಿದರಲ್ಲೆಲ್ಲ ತಾಯಿಯ ಪವಾಡ ಗಳಿಗೊಂದೊಂದು ರಾಸ ಕಟ್ಟಿ ಕುಣಿಯುತಲಿದ್ದ ಹಗಲು ಯಾಸಗಾರರ ತಂಡಗಳ ಆಟಗಳು.... ದುಕ್ಕತಪ್ತಾತನಂದಾವೇಸಭರಿತರಾದ ಜನರು ಯಜ್ಞಾಃs ಯಜ್ಞಾ ಅಂದಕಂತ