ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬೦ ಅರಮನೆ ಮುಂದಕ ಹಿಂದಕ ಸರಿದಾಡುತಲಿರುವಾಗ್ಗೆ.. ಯಜ್ಞಾ ನಿನ್ನ ಮುಖವನ್ನಾರ ತೋರು ಯಂದು ಮೊರೆಯಿಡುತಿರುವಾಗ್ಗೆ ಅರಮನೆ ವಳಗಡೆ ಹಂಪಜ್ಜನು ಸುಗ್ಗುಲ, ಸುಂಕುಲ, ಕುಂತಲ, ಸಾಮಂತಲ, ಅವಿಮಲ ಯಂಬ ಸದಾ ಮುತ್ತಯ್ಯರ ಕಯಿಂದ ಅಭ್ಯಂಜ ಸಾಣ ಮಾಡಿ ಮುಗಿಸಿ.. ಬರತಯ್ಯ, ಪಾಂಡಯ್ಯ ಕಿಷ್ಟಯ್ಯರು ತಂದುಡುಸಿದ ಹೊಸ ದೋತರ ವುಟಕಂಡು.. ಮುಕುಡಯ್ಯನ ಕಯ್ಯಂದ ಭಂಡಾರವನ್ನೂ.. ತಿಕ್ಕಡಯ್ಯನ ಕಮ್ಮಿಂದ ಕುಂಕುಮವನ್ನೂ, ಬಂಗಲಯ್ಯನ ಕಯ್ಯಂದ ಯಿಬನ್ನೂ ಮಯ್ಯಗೆಲ್ಲಾ ಹಚಕಂಡು ದ್ಯಾವರ ಖೋಲಿಯಿಂದ ನಡಕೋತ ನಡಕೋತ ಬಂದು ಕಾಲುಚಾಚಿ ಕೂಕಂಡಿದ್ದ ಮೊಬಯ್ಯನ ಪಾದರಾಯಿಂದಗಳಿಗೆ ಶ್ರದ್ದಾಭಕುತಿಮೂರುವಕವಾಗಿ ಪ್ರಣಾಮ ಸಲ್ಲಿಸಿ “ತಾಯೀ ಸಾಂಬವಿ, ಮುಂದಿನ ಮುನ್ನೂರು ಜಲುಮದಲ್ಲಿ ನಿನ್ನ ಸಿಸುಮಗನಾಗಿ ಹುಟ್ಟುತ್ತೀನಪ್ಪಾ. ನರಜಲುಮ ವತ್ತಿಗೆ ನಿನ ದಯೆಯಿಂದ ಪರುಸಮಾಪ್ತಿ ಆಗತಯೇ.. ಮೋಕ್ಷ ದೊರಕಲೆಂದು ಆಸೀರುವಾದ ಮಾಡು ತಾಯಿ” ಯಂದು ನುಡಿಯಲು ಅವಯ್ಯನು ತನ್ನ ಕರಕಮಲಗಳಿಂದ ಆತನ ತಲೆಯನ್ನು ನೇವರಿಸಿದನು. ಯಿದರಿಂದ ಸಂಪ್ರೀತಗೊಂಡಂಥ ಹಂಪಜ್ಜನು ಅರಮನೆಯ ತಲಬಾಕುಲಿಗೆ ಬಂದು ನಿಲ್ಲುತ್ತಲೆ ನೆರೆದಿದ್ದ ಸಾವುರಾರು ಭಕುತಾದಿ ಮಂದಿಯ ಕಣ್ಣುಗಳಿಂದ ವುದುಕವು ತಟ ತಟ ಹನಿದು ನೆಲ ವಜ್ಜಲೊಜ್ಜಲಾತು.. ಸಿವನಾಮ ಪಾರೊತೀ ಪತಿ ಹರಹರ ಮಾದೇವ ಯಂಬ ಘೋಷಣೆ ಮುಗುಲಿಗೆ ಮುಟ್ಟಿತು. ಅದಕ್ಕೂ ಯಲ್ಲು ದಿವಸದ ಹಿಂದೆಯೇ ತನ್ನ ಸೊಗ್ರಾಮವಾದ ಮುರುಡಿಯ ಪ್ರತಿ ವಬ್ಬರ ಕಣಸಿನಲ್ಲಿ ಹಂಪಜ್ಜನು ಕಾಣಿಸಿಕೊಂಡು ಛೇಮಲಾಭ ಯಿಚಾರಿಸಿ ತಾನು ಫಲಾನು ದಿವಸ ಪಲಾನ ಕಡೆ ಸಜೀವ ಸಮಾಧಿ ಹೊಂದುವುದಾಗಿ ಹೇಳಿದಂಗಾಗಲು ಆತನ ಅಂತಿಮ ದರುಶನ ಪಡೆಯಲೆಂದೇ ಅಬಡಾ ದಬಡಾ ಮುರುಡಿಯಿಂದ ಹೊರಟು ಬಂದಿದ್ದ ನೂರಾರು ಮಂದಿ ಯಜ್ಞಾss ಯಜ್ಞಾss.. ಯಂದು ಕಯ್ಯನೆತ್ತಿ ಕೂಗಿಕೊಂಡರು. ಅವರೆಲ್ಲರೊಳಗೆ ಮುರುಡಿಯ ಗ್ರಾಮದೇವರಾದ ಆಂಜನೇಯ ಸ್ವಾಮಿಯೂ.... ಯಾವತ್ತೂ ಮಂದಿಯು ಹಂಪಜ್ಜನನ್ನು ಹುಬ್ಬಿನಿಂದಲಂಕ್ರುತ ಜೋಡೆತ್ತಿನ ಬಂಡಿಯೊಳಗೆ ಕುಂಢಿಸಿತು. ಯಮಧರುಮರಾಜನಿಗೆ ಸೆಡೊಡೆದು ಬದುಕಿದ ಆ ಮಾನುಭಾವನನ್ನು ದಿಬ್ಬದೇರಿಯಿಂದ ಕುದುರೆಡವು ಪಟ್ಟಣದ ಬೀದಿ ಬೀದಿಗಳ