ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೮ ಅರಮನೆ ಹಿಂಜಿದ ಅಳ್ಳೆ ಗಾಳಿವಳಗ ಹಾರಾಡುತ್ತಿರೋ ಹಂಗ ಆಡಕೋತ ಯಿರುವ ಮಕ್ಕಳನ, ತಮ್ಮ ತಮ್ಮ ಮೊಲೆಗುಂಡಿಗಳನ ಹಸುಗಂದಮ್ಮಗಳ ಬಾಯೊಳಗಿರಿಸೋ ತಾಯಂದಿರನ ಯಿಸಿ ಮಾಡಿ ಬಂದ ತಮ್ಮ ತಮ್ಮ ಮಕ್ಕಳ ಕುಂಡಿಗಳನ ತೊಳೆಯುತಲಿರುವ ತಾಯಂದಿರನ, ರೊಟ್ಟೆ ತೆಗೆದ ತಮ ತಮ್ಮ ಕಂದಮ್ಮಗಳನ ಸುಮ್ಮನಿರಿಸಲೋಸುಗ ತರಾವರಿ ಪದಗಳನ ಹಾಡುತಲಿರೋ ತಾಯಂದಿರನ, ವುಯ್ಯಾಲೆಗಳನ ತೊನೆ ತೊನೆದು ತಮ್ಮ ತಮ್ಮ ರಟ್ಟೆ ನಿಲು ಬೀಳೋ ಹಂಗ ತೂಗುತಲಿರೋ ತಾಯಂದಿರನ ಸಾಂಬವಿ ನೋಡಿದಳಂತೆ.. ತಾನೂ ಹಿಂದೆಂದಾದರೂ ತಾಯಿಯಾಗಿದ್ದುಂಟಾ? ಯಾವ ತಾಯಿಗಾದರೂ ತಾನು ಮಗುವಾಗಿದ್ದುದುಂಟಾ? ಅಯ್ಯೋ ನೆಪ್ಪಿಗೆ ಬರುತಾಯಿಲ್ಲವಲ್ಲಾ ಯಂದು ಮಿಡು ಮಿಡನೆ ಮಿಡುಕಾಡಿದಳಂತೆ. ತನ್ನ ಬಗ್ಗೆ ತಾನೆ ಯಸನ ಮಾಡುತ ವುಪ್ಪರಿಗೆ ಮ್ಯಾಲಿಂದ ಸರಸರನೆ ಕೆಳಗಿಳಿದು ಬಂದಳಂತೆ.. ತಾನೂ ತಾಯ್ತನದ ಪದವಿಯನ ಅನುಭವಿಸಬೇಕು.. ಅನುಭವಿಕೆ ಮಾಡಲಕಂದರ ತನಗೀಗೊಂದು ಕೂಸು ಬೇಕಲ್ಲ.. ಯಲ್ಲಯೇ ತಾನು ಯತ್ತಿ ಆಡಿಸಬೇಕೆಂದಿರುವ ಕೂಸು ಯಂದನಕಂತ, ನಿಮ್ಮ ಕೂಸುಗಳ ಪಯ್ಕೆ ನನಗೊಂದು ಭಿಕ್ಷೆನ ಹಾಕಿರವ್ವಾ ಯಂದು ತಾಯಂದಿರನು ಕೇಳುತ, ಭಿಕ್ಷೆ ಹಾಕೆಂದರೆ ಜೀವನಾದರ ಹಾಗೇವು ಆದರ ಕೂಸನು ಭಿಕ್ಷೆ ಹಾಕಿರೆಂದು ಕೇಳಬ್ಯಾಡವ್ವಾ ಯಂದು ತಾಯಂದಿರಿಂದ ಅನ್ನಿಸಿಕೊಳ್ಳುತ, ನೀನು ನನಗೆ ಕೂಸು ಆಗುವಿರಾ ರಂದು ಸಮಾಧಿಯೊಳಗಿದ್ದ ಹಂಪಜ್ಜ ಸೇರಿದಂತೆ ಮೊದಲಾದ ಮುದೇರನು ಕೇಳೂತ.. ಅವರ ಬಾಯಿಯಿಂದ ನಾವು ಕೂಸಾಗುವುದು ಬ್ಯಾಡ ತಾಯಿ, ನಿನ ಕಯ್ಯಂದ ಯತ್ತಾಡಿಸಿಕೊಂಡು ನಾವು ರವುರವ ನರಕಕ್ಕೆ ಹೋಗುವುದು ಬ್ಯಾಡತಾಯಿ ಯಂಬ ಜವಾಬುಗಳನ ಪಡಕೋತ.. ತನ್ನ ನಯನೇಂದ್ರಿಯಂಗಳ ತಮಣಿ ಮಾಡಲಕೆಂದು ಮತ್ತೆ ಬೀದಿಗಿಳಿದಳಂತೆ ತಾಯಿ.... ಅಲ್ಲಲ್ಲಿ..... ತಾಯಿ ಅಂಗಳದಾಗ ಕಾಲ ಬಿಕ್ಕಳಿಸಿ ಕೂಕಂಡು ತನ್ನ ಮಗುವಿಂದ ಯಿ ಸ್ಪಿ ವಾಡಿಸುತವಳೆ.. “ಯಿದರ ಮುಕುಳಾಗ ವು೦ಚೆ ಬೊಟಿಟೂವಂಚೂರಾರ ಯಿಸಿ ಹೊರ ಹೊಂಡುತಾ ಯಿಲ್ಲಲ್ಲಾ” ಯಂದು ಆ ಪುಣ್ಯಾತಿ ಗೊಣಗಾಡುತ್ತಿರುವುದನ್ನು ಕೇಳಿಸಿಕೊಂಡಳಂತೆ.... ಅಗೋ ಅಲ್ಲಿ...