ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ ೪೬೯ ಹಗಲು ಹೊತ್ತಿನಾಗ ಸೂಯ್ಯಾಮನತ್ತ ಬೊಟ್ಟು ಮಾಡಿ 'ಅಗೋ ಅಲ್ಲಿ ನೋಡು ಚಂದಪ್ಪ ಮಾಮ.. ಹಿಂಗ ನೀನತ್ತು ರಂಪಾಟ ಮಾಡುವುದನ್ನೋಡಿ ತನ್ನ ಮಾರೀನ ಹೆಂಗ ಸೊಟ್ಟ ಮಾಡಿಕೊಂಡ್ಯಾನ ನೋಡು.. ಅಳಬ್ಯಾಡಪ್ಪಾ ಅಳಬ್ಯಾಡ.. ನೀನು ದೊಡೇ ನಾಗಬೇಕೋ ಬ್ಯಾಡೋ.. ಜಾಣಲ್ಲ ನನ್ನಪ್ಪಾ... ಪ್ಲಾ.. ಅಂತ ಬಾಯಿ ತೆಗೆ” ಯಂದು ಆಡುತಿರುವ ತಾಯಿ ಯೋಲ್ವಳನ್ನೂ, ಬುರುಬುರನೆ ಮೊದಿ ಬಾಯಿ ತೆಗೆವ ಆಕೆಯ ಮಗುವನ್ನೂ.. ನೋಡುತ ನಿಡುಸುಯ್ದಳಂತೆ.. ಹಂಗ… ಆಕೆ ಮುಂದು ಮುಂದಕೆ ಹೋಗಿ.. ತಮ್ಮ ಕೂಸು ಕಂದಮ್ಮಗಳಿಗೆ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಮಾವ, ಅತ್ತೆ ಯಂಬಿವೇ ಮೊದಲಾದ ಸಂಬಂಧವಾಚಕ ನಾಮಪದಗಳನ ಕಲಿಸುತಲಿರುವ ತಾಯಂದಿರನ ತಮ್ಮ ಕೂಸುಗಳಿಗೆ ನಡೆಯುವುದನ ಕಲಿಸುತಲಿರುವ ತಾಯಂದಿರನ.. ತಮ್ಮ ಮಕ್ಕಳಿಗೆ ವದವುದನ.. ಬಡಿವುದನ ಕಲಿಸುತಲಿರುವ ತಾಯಂದಿರನ... ತಮ್ಮ ಮಕ್ಕಳಿಗೆ ತಗುಲಿರಬಹುದಾದ ಕಣ್ಣಾಸರೆಯನ್ನು ಕಳೆಯುವ ನಿಮಿತ್ತ ನೀವಳಿಸುತಲಿರುವ ತಾಯಂದಿರನ.... ಅಂತರ ಕಟ್ಟುತಲಿರುವ ತಾಯಂದಿರನ, ಲಟ್ಟಿಗೆ ತೆಗೆಯುತಲಿರುವ ತಾಯಂದಿರನ, ಕೂಸುಗಳಿಗೆ ಕುದುರೆಯಾಗಿರುವ ತಾಯಂದಿರನ ನೋಡುತ.. ಅಂಬಾ, ದಾಶ್ರೀ, ಜನನೀ, ವೀರಸೂ, ಶಕ್ತಿಮಾತಾ ಯಂಬಿವೇ ಬಿರುದು ಬಾವಲಿಗಳನ ನೆನೆಸಿಕೊಂಡು ನಿಡುಸುಯ್ಯುತ ಅರಮನೆಗೆ ಮರಳಿದಳಂತೆ ತಾಯಿ.. ಯಾಕಪ್ಪಾ ಮಾರೀನ ದಿಮ್ಮಗ ಮಾಡಿಕೊಂಡದೀ ಯಂದು ಮೋಬಯ್ಯ ಕೇಳಿದನಂತ.. ನನಗ ತಾಯ್ತನದ ಜರೂರತ್ತಯ್ಕೆ ಕನಪ್ಪಾ.. ಯಾರೊಬ್ಬರೂ ನನಗ ಕೂಸನ ಕೊಡುವಲ್ಲರು.. ನನಗ ಕೂಸಾಗವಲ್ಲರಯ್ಯಾ ಯಂದಳಂತೆ, ಅದಕಿದ್ದು ಮೋಬಯ್ಯನು ಅವರಿವರನ ಯಾಕ ಬಗಸುಶೀ ಯವ್ವಾ.. ನನ್ನನ್ನೇ ನೀನು ಹೊಟೇಲಿ ಹುಟ್ಟಿದ ಖಂದಯ್ಯ ಯಂದು ತಿಳಕಳ್ಳವ್ವಾ ಯಂದು ಪರವಾನಿಗಿ ನೀಡಿದನಂತೆ.. ಅರೆ ಅವುದಲ್ಲಾ.. ಕಂಕುಳೊಳಗ ಕೂಸಿಟ್ಟುಕೊಂಡು ಮೂರೆಲ್ಲ