ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಯವನ ಯಾಮಿನೀ ವಿನೋದ, ಎಂಬ ನೋಡಿ, ಆನಂದವನ್ನು ಹೊಂದುತ್ತಿದ್ದನು. ಆದರೆ ಆತನು ಆ ಮನೆಯ ಕ್ಲಿ ಯಾರೂ ಗಂಡಸರಿಲ್ಲದಿರುವುದನ್ನು ನೋಡಿ, ಮಿಠಾಯಿ, ಮಧ್ಯದ ಲಾದ ದುರಿಗೆ ಬೇಕಾಗುವ ಪದಾರ್ಥಗಳನ್ನು ಇವರುತಂದುಕೊಂಡು, ಏನುಮಡುತ್ತಾರೋ ನೋಡಬೇಕೆಂಬ, ಕುತೂಹಲ ಯುಕ್ತನಾದನು. ಜೋಬದಿಯು, ಆ ಕೂಲಿಯವನು, ತನ್ನ ಬಳಲಿಕೆಯನ್ನು ಹೋಗಲಾಡಿ ಸಿಕೊಳ್ಳುವುದಕ್ಕಾಗಿ ನಿಂತಿರುವನೆಂದುಕೊಂಡಳು. ಆದರೆ ಅವನು ಬಹಳ ಹೊತ್ತು ಅಲೆ ನಿಂತಿರುವುದನ್ನು ನೋಡಿ, ಏತಕ್ಕಾಗಿ ನೀನು ಹೀಗೆನಿಂತಿ ರುವೆ ಎಂದು ಹೇಳಿ, ಅವಿನಿಯನ್ನು ಕುರಿತು ಈತನಿಗೆ ಇನ್ನೂ ಏನಾದ ರೂಕೊಡು. ಇವನುಸಂತಸವಾಗಿಹೋಗಲಿ, ಎಂದುಹೇಳಿದಳು. ಅಮ್ಮ ನಾನು ಅದಕ್ಕೋಸ್ಕರವಾಗಿ ನಿಲ್ಲಲಿಲ್ಲ, ನನಗೆ ಕೊಡಬೇಕಾದುದಕ್ಕಿಂತಲೂ ಹೆಚ್ಚಾಗಿಯೇ ದುಡ್ಡು ಕೊಟ್ಟಿರುವರು. ಆದರೆ ನಾನು ಇರುವುದು, ಮರ್ಯಾದೆಯಲ್ಲವೆಂದು ತಿಳಿದುಕೊಂಡಿದ್ದರೂ, ಒಂದಾನೊಂದು ವಿಷ ಯವನ್ನು ಕೇಳಿಕೊಳ್ಳುವೆನು. ಅದಕ್ಕಾಗಿ ನನ್ನನ್ನು ಮನ್ನಿಸಬೇಕೆಂ ದು ಬೇಡಿಕೊಳ್ಳುವೆನು. ಏನಂದರೆ ಅಮಾ! ಮಹಾ ಸೌಂದರ್ಯವತಿಯ ರಾದ ನಿಮ್ಮಂತಹ ವನಸಿಯರು, ಪುರುಷರಿಲ್ಲದಕಡೆಯಲ್ಲಿರುವುದ ನ್ನು ನಾಡಿ ನನಗೆ ತುಂಬ ಆಶ್ಚರ್ಯವಾಗಿ, ಸಿಯರಿಲ್ಲದೆ ಬರಿಯ ಪುರುಷರೇ ಗುಂಪು ಕೂಡಿಕೊಂಡಿರುವುದು, ಹೇಗೆ ವ್ಯಸನಕರವೋ, ಹಾಗೆ ಯೇ ಪುರುಷರಿಲ್ಲದೆ ಸ್ಮಿಯರೇ ಇರುವುದು ಮಹಾ ವ್ಯಸನಕರವೆಂಬ ದು ತಮಗೆಗೊತ್ತೇ ಇದೆ. ಇದಕ್ಕಾಗಿ ತಾನುನೋಡಿದ ಅನೇಕ ತಗಳನ್ನು ಹೇಳಿ, ಬಾಗದಾದು ಪಟ್ಟಣದಲ್ಲಿ ಜನರು ವಾಡಿಕೆಯಾಗಿಹೇಳು ತಿರುನ, ಬೋದನಕಾಲದಲ್ಲಿ ನಾಲ್ಕು ಜನರು ಸೇರಿದಹೊರತು, ಅದರ ಸು ಖವು ಗೊತ್ತಾಗುವುದಿಲ್ಲವೆಂದು, ಹೇಳುವಸಾಮತಿಯನ್ನು ವಿವರಿಸಿ, ನೀವೀ ಗ ಮೂವರಿರುವರಾದುದರಿಂದ ನಿಮಗೆ ನಾಲ್ಕನೆಯವನು, ಬೇಕೆಂದುಹೇಳ ಲು, ಆವತುಗಳನ್ನು ಕೇಳಿ ಅವರುವವರು, ಹುಸುನಗೆಯನ್ನು ನಮ್ಮ ರು. ಆಗ ಜೋಬದಿಯು, ಸ್ನೇಹಿತನೇ ! ನೀನು ನಾವು ಹೇಳುವ ವಾಕ್ಯ ವನ್ನು ಕೇಳುವುದಕ್ಕೆ ಅರ್ಹನಲ್ಲದಿದ್ದರೂ, ನಮ್ಮ ಚರಿತ್ರೆಯನ್ನು ನಿನ್ನ ಸಂಗಡ ಹೇಳುವೆವು. ನಾವು ಮರುಜನಗಳ ಅಕ್ಕತಂಗಿಯರು, ನಾ ವು ಮೂಡುವ ಕೃತ್ಯಗಳನ್ನು ಇತರಜನರು ತಿಳಿಯದಂತೆ ರಹಸ್ಯವಾಗಿ