________________
علام ಯವನ ಯಾಮಿನೀ ವಿನೋದ ಎಂಬ, ರಿಕ್ತವಾಗಿ ನಡೆದುಕೊಂಡಿರುವುದರಿಂದ ನಿಮಗೆ ಮನ್ನಣೆ ಯುಂಟಾಗದೆಂದು ಹೇಳುತ್ತಾ, ತಾನುನಿಂತುಕೊಂಡಿರುವ ಭೂಮಿಯನ್ನು ಬಲವಾಗಿ ಒದೆದು ಬೇಗನೆ ಬನ್ನಿಯೆಂದು ಗಟ್ಟಿಯಾಗಿ ಕೂಗಿದಳು. ಕಡಲೆ ಬಾಗಿಲನ್ನು ತೆಗೆದುಕೊಂಡು, ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡಿರುವ, ಕರಿಯ ಕಳ್ಳರು ಬಂದು ಅಲ್ಲಿರುವವರೆಲ್ಲರನ್ನೂ, ನೆಲ ಕೈ ಕೆಡವಿ ಕತ್ತುಗಳನ್ನು ಕಡಿದುಹಾಕಹೋದರು. ಆಗ ಕಲೀಫರು ಅತ್ಯಂತವಾದ ವ್ಯಸನವನ್ನು ಹೊಂದಿ ಮುಂತಿಯು ಹೇಳಿದ ಮಾತನ್ನು ಕೇಳದೆ, ಹೋದೆನಲ್ಲಾ ! ಈಗ ಏನು ಮಾಡಬೇಕೆಂದು ಚಿಂತಿಸುತ್ತಿದ್ದ ನು. ಹೀಗೆ ಕಲೀಫನ್ನೂ, ಗಯಧನ, ಕೂಲಿಯವನ್ನೂ, ಕಾಲೆಂಡರೂ, ತನಗೆ ಬಂದ ಅಪಾಯವನ್ನು ಹೋಗಲಾಡಿಸಿಕೊಳ್ಳುವುದಕ್ಕೆ ತಕ್ಕ ಉಪಾ ಯವನ್ನು ಕಾಣದೆ, ಪ್ರಾಣವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಆಗ ಆ ಕಿಂಕರರುಗಳಿಬ್ಬನು, ಸರ್ವಶಕರಾದ ಒಡತಿಯರೇ ! ಇನ ರುಗಳನ್ನು ಕಡಿದುಹಾಕುವುದಕ್ಕೆ ಅಪ್ಪಣೆಯೇ ? ಎಂದು ಕೇಳಿದನು. ತಾಳಿ ಸ್ವಲ್ಪ ವಿಚಾರಿಸುತ್ತೇನೆಂದು, ಜೋಬದಿಯ, ಹೇಳುತ್ತಿರುವುದನ್ನು ನೋಡಿ, ಕೂಲಿಯವನು, ತುಂಬ ಭಯರ ಸ್ತನಾದನಲ್ಲದೆ ಹೀಗೆಂದುಹೇಳಿ ದನು. ಅಮಾ! ನಾನೇನೂ ತಪ್ಪು ಮೂಡಿದವನಲ್ಲ. ಇವರುಗಳ ಕೃತಿಮ ದಿಂದ ಹೀಗಾಯಿತು. ಆದುದರಿಂದ ಭಗವತಿ ತ್ಯರ್ಥವಾಗಿ, ನಮ್ಮನ್ನು ರಕ್ಷಿಸಿ, ಎಂದು ಹೇಳಿ ಅಯಾ ! ಎಷ್ಟೊಂದು ಉತ್ಸಾಹಯುಕ್ತರಾಗಿ, ಕಾಲವನ್ನು ಕಳೆಯುತ್ತಿದ್ದೆವು. ಈ ನಿರ್ಭಾಗ್ಯರಾದ, ಕುರುಡ ಕಾಲೆಂ ಡರುಗಳಿಂದಲ್ಲವೆ ಇಂತಹ ಕವು ಬಂದೊದಗಿತು, ಲೋಕದಲ್ಲಿ ನಿರ್ಭಾ ಗ್ಯರಾದ ಜನಗಳಿರುವ ಪಟ್ಟಣಕ್ಕೆಂದಿಗೂ, ಆಪದಸಂಘಟನೆಯಾಗಬಾರ ದು, ಅಮಾ ! ಅಪರಾಧಿಗಳಜೊತೆಯಲ್ಲಿ ನಿರಪರಾಧಿಯನ್ನು ವಿಚಾರ ಣೆಯಿಲ್ಲದೆ, ಕಲ್ಲಕೂಡದೆಂದು, ನಿಮ್ಮನ್ನು ಬೇಡಿಕೊಳ್ಳುವೆನು, ನಿಮ್ಮ ಕೋಪಕ್ಕೆ ನಾನು ಮಾತ್ರ ನಾಗಲಾರನೆಂದು, ವಿನಯದಿಂದ ಪಾರ್ಥಿಸುವೆ ನು. ನನ್ನಂತಹ ಅಲ್ಪಮಾನವರ ತಪ್ಪನ್ನು ಕ್ಷಮಿಸಿ ಕಾಪಾಡುವುದರಿಂ ದ, ತಮ್ಮ ಯಶಸ್ಸು ಇನ್ನು ಅಧಿಕವಾಗುವುದಿಲ್ಲವೆ, ಎಂದು ಹೇಳುತ್ತಾ ಗಟ್ಟಿಯಾಗಿ ಅಳತೊಡಗಿದನು.