ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೬ ಯು, ಇದ್ರ ಕಾರಾಗೃಹದಲ್ಲಿ ನಾನಿರುವಂತೆತೋರಿತು. ಅಯಾ ! ಆ ವಿಚಿತ್ರ ವನ್ನು ನೋಡಿದ ಕೂಡಲೇ ನನಗೆ ಮಹತ್ತಾದ ವ್ಯಸನವೂ, ಪಶ್ಚಾತ್ತಾಪವೂ, ಉಂಟಾಯಿತು, ಆ ರಾಜಕುವರಿಯು, ಶರೀರದ ಮೇಲೆ ವವಿಲ್ಲದವಳಾಗಿ, ನೆಲದಮೇಲೆ ಬಿದ್ದು, ಕೈಕಾಲುಗಳನ್ನಾಡಿಸ ದೆ, ಸತ್ತವಳಂತೆ ಇರುತ್ತಿದ್ದಳು. ನಾನು ಅವಳನ್ನು ನೋಡಿದಕೂಡಲೆ ಅತ್ಯಂತಖಿನ್ನನಾಗಿ ಮಹಾ ವ್ಯಸನವನ್ನು ಹೊಂದಿದೆನು. ರಾಕ್ಷಸನು ರಾಜಪುತ್ರಿಯನ್ನು ನೋಡಿ, ಇವನೆ ಅಲ್ಲವೆ ನಿನ್ನ ಪ್ರಿಯನಾದ ವಿವನೆಂದು ಕೇಳಿದನು. ಅದಕ್ಕವಳು ಆಯಾ ! ಇವನನ್ನು ನಾನೆಂದಿಗೂ ನೋಡಿ ದವಳಲ್ಲ. ಈಗತಾನೆ ನೋಡಿದೆನಲ್ಲಾ ಎಂದಳು. ಆಗ ರಾಕ್ಷಸನು ಇವನೆ ಯಲ್ಲವೆ ನಿನ್ನನ್ನು ಈ ದುರವಸ್ಥೆಗೆ ತಂದವನೆಂದು ಪುನಹಕೇಳಲು, ಈಗ ಹೊರತು, ಇದಕ್ಕೆ ಹಿಂದೆ ಮತ್ಯಾವಾಗಲೂ, ಇವನನ್ನು ನೋಡಲೇ ಇಲ್ಲ ಎಂದು ಹೇಳಿದಳು. ಆಗ ಆತನನ್ನು ನೋಡಿ, ನೀನು ಇವಳನ್ನು ಬಿ ಯಾ ? ಎಂದು ಕೇಳಲು, ನಾನು ಸ್ವಪ್ನದಲ್ಲಿಯಾ ಇವಳನ್ನು ಕಂಡವ ನಲ್ಲವೆಂದು ಹೇಳಿದೆನು. ಆಗ ರಾಕ್ಷಸನು ಆ ರಾಜಕುಮರಿಯ ಕೈಗೆ ಒಂದು ಖಡ್ಗವನ್ನು ಕೊಟ್ಟು, ನೀನು ಇವನಕತ್ತನ್ನು ಕತ್ತರಿಸು ಎಂದು ಹೇಳಿದನು. ಅದಕ್ಕವಳು, ಅಯಾ ! ನಾನು ಏಳಲಾರದೆ ಬಲಹೀನ ಳಾಗಿ ಬಿದ್ದಿರುವೆನು, ಅದರಲ್ಲಿಯೂಾ ಯಾವ ತಪ್ಪನ್ನೂ ಮಾಡದೆ ನಿರದ ರಾಧಿಯಾಗಿರುವವನನ್ನು ಕೊಲ್ಲುವುದಕ್ಕೆ ಹೇಗೆ ಮನಸೊಸುವುದು, ಬಲವಂತವಾಗಿ ನೀನು ಮಾಡಹೇಳುವ ಕೆಲಸವನ್ನು ನಾನು ಹೇಗೆ ಮಾಡು ವುದೆಂದು ಹೇಳಲು, ಆಹಾ ! ನೀನುಮಾಡಿದ ಕೆಲಸವನ್ನು ಮರೆಮಾಚುವ ಈಚತುರತೆಯನ್ನು ಎತ್ತಿಕತೆ ? ನಿನ್ನ ಮಾತಿನಿಂದ ನಿನ್ನ ಕಾರ್ಯವೇ ಗೊ ತಾಗುವುದೆಂದು ಹೇಳುತ್ತಾ ಪುನಹ ನನ್ನನ್ನು ನೋಡಿ, ಪ್ರಮಾಣವಾಗಿ ಯಾ, ನೀನು ಇವಳಗುರುತನ್ನು ಕಾಣೆಯಾ ? ಎಂದು ಕೇಳಿದನು. ಆ ರಾಜಪುತ್ರಿಯ ಈ ದುರವಸ್ಥೆಗೆ ಕಾರಣನಾದ ನನ್ನಲ್ಲಿ ಆಕೆ ಎಷ್ಟೊಂದು ವಿಶ್ವಾಸವನ್ನು ತೋರ್ಪಡಿಸಿದಳೊ ಅದಕ್ಕಿಂತಲೂ ಹೆಚ್ಚಾ ದ ವಿಶ್ವಾಸವನ್ನು ಅವಳ ವಿಷಯದಲ್ಲಿ ನಾನು ತೋರ್ಪಡಿಸದೆ ಹೋಗಿದ್ದರೆ, ನಾನು ಪ್ರಪಂಚದಲ್ಲಿರುವ ಮನುಷ್ಯಸಮೂಹದಕ್ಕೆಲ್ಲಾ ಕೂತದ್ಯತಾ ಹೀನನಾದ ನಾದಾತನಾಗುತ್ತಿದ್ದೆನಲ್ಲವೆ ? ಆದುದರಿಂದ ನಾನು ಆ ರಾಕ್ಷ