________________
ಅರೇಬಿಯ ನೈಟ್ ಕಥಗಳು. hy ಬಿರುಸಾಗಿ ಮೇಲಕ್ಕೆತ್ತಿ, ಗುಜೆಯ ಬಾಗಿಲಿಗೆ ಬಂದು, ತಾನಾಗಿ ತೆರೆದು ಹೋದ ಆ ದಾರವನ್ನು ದಾಟಿ, ಆಕಾಶಕ್ಕೆ ಹಾರಿಹೋಗಿ, ಭೂಮಿಯನ್ನು ನೋಡುತ್ತಾ, ಒಂದಾನೊಂದು ಸ್ಥಳದಲ್ಲಿ ಬಿಳಿ ಮಚ್ಚೆಗಳಿಂದ ಕೂಡಿದ ಪರ್ವತವು ಕಾಣಬರಲು, ಅದರ ಶಿಖರದಮೇಲೆ, ನನ್ನನ್ನು ಇಳಿಸಿದನು. ಅಲ್ಲಿಗೆ ಬಂದಕೂಡಲೆ, ಆತನು ಕೈಗೆ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ನಂತಿಸಿ, ನೀನು ಮನುಷ್ಯರೂಪವನ್ನು ತೊರೆದು, ನಾನರನಾಗು ಎಂದು ಹೇಳಿ, ನನ್ನ ಮೇಲೆ ಹಾಕಿದನು. ಕೂಡಲೆ ಕೊತಿಯಾಗಿ ಸಂಚರಿಸು ತಾ, ನನ್ನ ತಂದೆಯರಾಜ್ಯಕ್ಕೆ ಸಮೀಪವಾಗಿರುವೆನೋ ! ಅಥವಾ ದೂರದ ಕ್ಲಿರುವನೋ ತಿಳಿಯದೆ, ತುಂಬಾ ವ್ಯಸನಾಕಾಂತನಾಗಿದ್ದನು. ಆ ಬೆಟ್ಟದ ಶಿಖರದಿಂದ ನಾನು ಕೆಳಗಿಳಿಯುವುದಕ್ಕೆ ಒಂದುತಿಂ ಗಳಾಯಿತು. ಅಲ್ಲಿಂದ ಅತ್ಯಂತ ಪ್ರಯಾಸವನ್ನು ಹೊಂದಿ, ಸಮುದ ) ತೀರವನ್ನು ಸೇರಿದೆನು. ಆಗ ಸಮುದ್ರ ದಲ್ಲಿ ಗಾಳಿ ಇಲ್ಲದಿದ್ದುದರಿಂದ, ಒಂದು ಹಡಗು ಚಲಿಸದೆ ನಿಂತಿರುವುದನ್ನು ಕಂಡೆನು. ಈ ಸಮಯವನ್ನು ತಪ್ಪಿಸಿಕೊಳ್ಳಬಾರದೆಂದು, ಹರಿದ ಒಂದುಮರವನ್ನು ಹತ್ತಿ ಮರದ ರೆಂಬೆಯನ್ನು ಮುರಿದುಕೊಂಡು, ಸಮುದ ದಲ್ಲಿ ಹಾಕಿ, ಅದರಮೇಲೆ ಕು ಆತುಕೊಂಡು, ನೀರನ್ನು ತಳ್ಳುವುದಕ್ಕಾಗಿ ಎರಡು ಕೈಗಳಲ್ಲ, ಎರಡು ಕೋಲನ್ನು ತೆಗೆದುಕೊಂಡೆನು. ಈ ಪ್ರಕಾರವಾಗಿ ನಾನು ಆ ಹಡಗನ್ನು ಸೇರ ಹೋಗುತ್ತಿರುವುದನ್ನು ನೋಡಿ, ಅಲ್ಲಿದ್ದವರೆಲ್ಲರೂ ವಿನೋದವಾಗಿ, ಅತ್ಯಾಶ್ಚರ್ಯವನ್ನು ಹೊಂದಿದರು. ಬಳಿಕ ನಾನು, ಮೆಲ್ಲಗಯೋಗಿ, ಒಂದು ದಾರವನ್ನು ಹಿಡಿದುಕೊಂಡು, ಅದರಮೇಲೆ ಕೂತುಕೊಂಡೆನು. ಆದರೆ ನನಗೆ ಮೂತನಾಡುವುದಕ್ಕೆ ಬಾರದೆ ಇದ್ದುದರಿಂದ, ಆ ರಾಕ್ಷಸನ ಬಳಿಯಲ್ಲಿದ್ದಾಗ ಎಷ್ಟು ವ್ಯಸನವನ್ನು ಹೊಂದಿದೆನೋ, ಅದಕ್ಕಿಂತಲೂ ಅತಿಶಯವಾದ ದುಃಖವನ್ನು ಹೊಂದಿದೆನು. ಆಗ ಅಲ್ಲಿದ್ದ ವರ್ತಕರು, ನನ್ನನ್ನು ಹೊರಗೆ ಇರಬೇಕೆಂದೂ ಅಲ್ಲದಿದ್ದರೆ ನಮಗೆ ಕೇಡುಂಟಾಗುವುದೆಂದು, ಮೂತನಾಡಿಕೊಳ್ಳುತ್ತಿದ್ದರು ಆಗ ನಾನು ಅವರ ಬಳಿಗೆ ಹೋಗಿ ಕಣ್ಣೀರು ಸುರಿಸುತ್ತಾ, ಕಾಲಿಗೆ ಬಿದ್ದು ಗೋಳಾಡಿ, ಅಳುತ್ತಾ ಮೂತನಾಡುವುದಕ್ಕೆ ಅವಕಾಶವಿಲ್ಲವಾದುದರಿಂದ, ನನ್ನ ಕೈಲಾದವುಗ, ನನ್ನೆ ನೋಡಿ ತೋರಿಸುತ್ತಿದ್ದನು. ಆಗಗಾ