________________
ಹರಸ ಯನೀ ಏದ, ಎಂಟಿ ಸೇರಿದವರನ್ನು ನೋಡಲೇ ಇಲ್ಲವೆಂದು ಹೇಳಲು, ನಾವುಗಳೆಲ್ಲರೂ, ವೈಸಿ ನಾಕ್ರಾಂತರಾಗಿ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡು, ಗಟ್ಟಿಯಾಗಿ ಅಳ ಇಡಗಿದವು. ಅದರ ಪಕ್ಕದಲ್ಲಿರುವ ಪರ್ವತದ ದಡವು ಅತ್ಯಂತ ವಿಶಾಲ ವಾದುದಾಗಿ, ನಾನಾ ವಿಧವಾದ ಹಲಗೆಗಳಿಂದ ಒಡೆದುಹೋದ ಹಡಗುಗ ೪ಂದಲೂ, ಸತ್ತುಹೋದ ಮನುಷರ ಮಳೆಗಳಿಂದ ತುಂಬಿಹೋ ಗಿದ್ದಿತಲ್ಲದೆ, ಆ ಸ್ಥಳದಲ್ಲಿ ಇದ್ದ ಧನರಾಶಿಯನ್ನು ಇಂದು ಹೇಳುವು ದಕ್ಕೆ ಆಗದಂತೆ ನನ್ನ ಮನಸ್ಸಿಗೆ ತೋಚಿತು. ಇವೆಲ್ಲವೂ ಕೂಡಿ, ನಮ್ಮಗಳ ದುಃಖವನ್ನು ಹೆಚ್ಚು ಮಾಡಿದವೇ ಹೊರತು ಮತ್ತೇನೂ ಇಲ್ಲಾ! ಆದರೆ ಪ್ರಪಂಚದಲ್ಲಿ ನದಿಗಳು ಸಮುದ್ರಕ್ಕೆ ಹರಿಯುತ್ತಿರುವುದನ್ನು ನಾವು •ಕಂಡಿರುವವು. ಆ ಸ್ಥಳದಲ್ಲಿಯಾದರೂ, ಸಮುದ್ರದಿಂದ ಹೊರಟು ಹರಿ ಯುತ್ತಿರುವ ಶುದ್ಧೋದಕದ ಪ್ರವಾಹವು ಬಂದು, ಪಕ್ಕದಲ್ಲಿರುವ ಒಂದಾ ನೊಂದು ಗುಹೆಯೊಳಕ್ಕೆ ಹರಿಯುತ್ತಿರುವುದು, ಇಂತಹ ಸ್ಥಳದಲ್ಲಿ ಮುಖ್ಯವಾಗಿ ತೋರಿಬಂದ ವಿಶೇಷವೇನಂ ದರೆ, ಆ ಪರ್ವತದಲ್ಲಿರುವ ಶಿಲೆಗಳೆಲ್ಲವೂ ಉತ್ತಮವಾದ ರತ್ನಗಳಾಗಿರು ವುವು. ಕಂಪು, ವಜು, ವಚ್ಛ, ಪುಷ್ಯರಾಗ, ಗೋಮೇಧಿಕ ಮೊದಲ ದ ಕಲ್ಲುಗಳಲ್ಲದೆ, ಉತ್ತಮವಾದ ಶಿಲಾಚಿತ್ತುಗಳನ್ನು ಮತ್ನಗಳು ನುಂಗಿ ಪುನಹ ಕಾರುತ್ತಿರುವುವು. ಆದುದರಿಂದ ಆ ಪರ್ವತವು ರತ್ನಮಯವಾ ಗಿರುವುದು, ಇದಕ್ಕೆ ಸಮಾನವಾದ ಕನ್ಯಾಕುಮಾರಿಯೇ ಹೊರತು ಮ ಇಾವದೂ ಇಲ್ಲ. ಆ ಸ್ಥಳವಾದ ಇಕ್ಕಟ್ಟಾದ ಮತ ಅಸಾಧ್ಯವಾದ ಸಮುದ್ರಶಾಖೆಯಾಗಿದ್ದುದರಿಂದ, ಆ ಸ್ಥಳಕ್ಕೆ ಹೋದವರು ಪುನಹ ಸು ರಕ್ಷಿತರಾಗಿ ಬರುವುದಕ್ಕೆ ಮಾರ್ಗವಿಲ್ಲದುದರಿಂದ, ಉನ್ನತವಾದ ಆ ಪರ್ವ ತವು ಗಾಳಿಯನ್ನು ತಡವುದರಿಂದ, ಮಂದಮಾರುತನಿಗೆ ಸಿಕ್ಕಿದ ಹಡಗನ್ನು ಉತ್ಕಟವಾದ ಈ ಪ್ರವಾಹವು ಹೊಡೆದುಕೊಂಡು ಗುಹಾಮುಖಕ್ಕೆ ತಗ ದುಕೊಂಡು ಹೋಗುವುದರಿಂದ, ನಾವುಗಳು ಯಾವ ವಿಧದಿಂದಲೂ ಸಂಚಾರಮಾಡುವುದಕ್ಕೆ ಶಕ್ತರಲ್ಲದೆ ಹೋದುದೇ ನಮ್ಮ ದುರವಸ್ಥೆಗೆ ಮುಖ್ಯವಾದ ಕಾರಣವಾಯಿತು. ಆದುದರಿಂದ ನಾವು ನಮ್ಮ ಆಹಾರಪದಾ ರ್ಥಗಳನ್ನು ಸಮನಾಗಿ ಹಂಚಿಕೊಂಡು, ಅವರವರ ಇಷ್ಟಾನುಸಾರವಾಗಿ ತಿನ್ನು ತಾ, ಕೆಲವು ದಿನಗಳ ವರೆಗೂ, ಬದುಕಿರಬಹುದೆಂದು ಕೊಂಡವು.