ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯ ನೈಟ್ಸ್ ಕಥಗಳು. &n ಕರವಾಗಿರಬಹುದು ? ನೀನು ಈ ಗುಹಯಿಂದ ಹೇಗೆ ಬಂದ ! ಈ ಚರಿ ತೋಯಂ ನಷ್ಟುಗಳಿಗೆ ಹೇಳಬೇಕೆಂದು ಬೇಡಿಕೊಂಡರು. ಆಗ ನಾನು ಅವರನ್ನು ಕುರಿತು, ಅಯ್ಯಾ ! ನನಗೆ ಮೊದಲು ಸ್ವಲ್ಪ ಆಹಾರವನ್ನು ಕುಡಿಯುವುದಕ್ಕೆ ಸ್ವಲ್ಪ ನೀರನ್ನು ಕೊಟ್ಟರೆ, ನಾನು ನನ್ನ ಚರಿತ್ರೆಯ ನ್ನು ಹೇಳುವನೆಂದು ನುಡಿದುದನ್ನು ಕೇಳಿದಕೂಡಲೆ, ಅವರು ತಮ್ಮ ಬಳಿ ಯಲ್ಲಿದ್ದ, ನಾನಾವಿಧವಾದ ಆಹಾರವಸ್ತುಗಳನ್ನು ತಂದಿತ್ತು. ನಾನು ಅದನ್ನು ತಿಂದು ಸ್ವಲ್ಪ ನೀರನ್ನು ಕುಡಿದು, ಬಳಲಿಕೆಯನ್ನು ತೀರಿಸಿ ಕೊಂಡು ನನ್ನ ಚರಿತ್ರೆಯನ್ನು ಸಮಗ್ರವಾಗಿಯೂ, ಸಂಪೂರ್ಣವಾಗಿ ಯ, ಅವರಿಗೆ ತಿಳಿಯಪಡಿಸಿದೆನು, ಅವರಾದರೋ ವಿಚಿತ್ರವಾದ ಈ ಕಥೆಯು ನಮಗೆ ಹೊಸದಾಗಿರುವುದರಿಂದ, ಅತ್ಯಾನಂದಕರವಾಗಿರುವುದಂ ದು ಈ೪, ಸಂತೋಷದಿಂದ ಕೇಳಿದರು. ಅವರಲ್ಲಿ ಅರಬೀಭಾಷೆಯನ್ನು ತಿಳಿದವನು, ನನ್ನ ಕಥೆಯನ್ನು ತಿಳಿಯಹೇಳಿದನು, ಆ ಜನರು ಇಂತಹ ಏಚಿತ್ರಕರವಾದ ಕಥೆಯನ್ನು ತಮ್ಮ ರಾಜನಿಗೆ ತಿಳಿಯಪಡಿಸಬೇಕೆಂದು ಮಾತನಾಡಿಕೊಂಡು, ಒಂದು ಕುದುರೆಯನ್ನು ತಗೆದುಕೊಂಡು ಬಂದರು. ನಾನು ಅದರಮೇಲೆ ಕಾತುಕೊಂಡನು. ಅವರಲ್ಲೊಬ್ಬನು ದಾರಿಯ ನ್ನು ತೋರಿಸುತ್ತಾ ಮುಂದೆ ಹೊರಟನು. ಉಳಿದವರು ನನ್ನ ಪದಾ ರ್ಥಗಳೆಲ್ಲವನ್ನೂ ತೆಗೆದುಕೊಂಡು ಬರುತ್ತಿದ್ದರು, ನಂತರ ನಾನು ನಿಮ್ಮ ಗಳ ಇತ್ಯಾನುಸಾರವಾಗಿ ಪುನಹ ಕಥೆಯನ್ನು ಹೇಳಿ ನಿಮ್ಮಗಳ ಮನ ಸನ್ನು ಸಮಾಧಾನಪಡಿಸುತ್ತೇನೆಂದು ಹೇಳಿದನು. ಇಂತಂದುಹೇಳಿ ವಹರಜಾದಿ ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. V೬ ನೆಯ ರಾತ್ರಿ ಕಥೆ. ಬಳಿಕ ಸಿಂದುವಾದನು, ತನ್ನ ಸಭಿಕರನ್ನು ನೋಡಿ, ಇಂತಂದು ಹೇಳಿದನು. ಈ ಪ್ರಕಾರದಿಂದ ನಾನು ಕುದುರೆಯನ್ನೇರಿ, ಸಿರಂದಿಬ್ಬವಂ ಬ ದೀಪವನ್ನು ಸೇರಿ, ಅದೇ ಹೆಸರಿನ ರಾಜಧಾನಿಗೆ ಬಂದನು. “ಆಗ ಕಾಫರರು ನನ್ನನ್ನು ಬಹುಸಂತೋಷದಿಂದ ತಮ್ಮ ರಾಜನ ಬಳಿಗೆ ಕರೆ ದುಕೊಂಡುಹೋಗಿ ಆತನ ಸಿಂಹಾಸನದ ಬಳಿಯಲ್ಲಿ ನಿಲ್ಲಿಸಿದರು. ನಾನು