ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ALS ಯವನ ಯಾಮಿನೀ ವಿನೋದ ವಿಂಬ, ಆಂಕಾರ ಭೂಷಿತೆಯಾಗಿಯೂ, ಸಿರತ್ನ ಶಿರೋಮಣಿಯತ ಕೂಳೆ ಯುತ್ತಿರುವ ಆಕೆಯ ಮುಖವಾದರೂ, ತನ್ನ ಪಕ್ಕದಲ್ಲಿ ಮರ್ರೆ ಖಾಲು ವ ಹೀನನಾಗಿ ತನ್ನ ಮೋಹಕ್ಕೆ ಯೋಗ್ಯನಲ್ಲದವನಾದ, ಕುರಟು ವರ ನು ಕುಳಿತಿರುವುದನ್ನು ನೋಡಿ, ತನಗುಂಟಾದ ಕರಸವನ್ನು ಹೊರ ಹೊರಡಿಸುತ್ತಿತ್ತು, ಈತರನಾದ ಈಡಿಲ್ಲದ ವಧೂವರರನ್ನು ನೋಡಿ, ಅಲ್ಲಿ ನೆರೆದಿರುವ ಜನರೆಲ್ಲರೂ, ರಾಗಹೀನರಾಗಿ ವ್ಯಸನಾಕ್ರಾಂತರಾಗಿದ್ದರು. ಆ ದರೆ ಮದುವೆಗಾಗಿ ಅಲ್ಲಿಗೆ ನಡೆತಂದು ಸೇರಿರುವ ರಾಜಯರು, ಘನ ನಂತಯರು, ಇತರ ಸೌಭಾಗ್ಯವತಿಯರೂ ಸಹ, ತಂತಮ್ಮ ಯೋಗ್ಯತಾ ನು ಸಾರವಾಗಿ ಅಲಂಕಾರ ಭೂಷಿತಯರಾಗಿ, ಸುಗಂಧಯುಕ್ತವಾದ ಮೇ ಣದಬತ್ತಿಗಳ ದಿನದ ಬೆಳಕಿನಲ್ಲಿ, ಆ ಸಿಂಹಾಸನದ ಇದಿರಾಗಿ ಸುತ್ತಲೂ ಕುಳಿತಿದ್ದರು. ಕುರೂಪಿಯಾದ ವರನ ಭಸ್ಮದಲ್ಲಿ ಕುಳಿತಿರುವ, ಸುಂದರ ನಾದ, ಸಲ್ಲಕ್ಷಣಯುಕ್ತನಾದ, ನೀತಿಸಂಪನ್ನನಾದ ಆ ಬದರೋದೀನನನ್ನು ಅಲ್ಲಿರುವ ಸ್ತ್ರೀಯರೆಲ್ಲರೂ ನೋಡಿ ಮೋಹದಿಂದ ತಂತಮ್ಮ ಸ್ಥಳಗಳನ್ನು ಇರೆದು ಆತನ ಹತ್ತಿರಕ್ಕೆ ಬಂದು ಆತನನ್ನು ನೋಡಿ, ಆತನ ಪಕ್ಕದಲ್ಲಿ ಕುಳಿತಿರುವ ಕುರೂಪಿಗೆ ಈ ಸುಂದರೀ ಮಣಿಯನ್ನು ಕೊಡುವುದು, ನಾ ಯವಲ್ಲವಾದುದರಿಂದ ಹೇಗಾದರೂ ಮಾಡಿ, ನಾ ಮುಂತಿಪುತ್ರಿಯನ್ನು ಈ ಸುಂದರ ಪುರುಷನಿಗೆ, ಮದುವೆ ಮಾಡುವಂತೆ ಮಾಡಬೇಕೆಂದು ಯೋ ಚಿಸಿ, ಇಂತಹ ಕುರೂಪಿಯಾದ ಪುರುಷನಿಗೆ ಸಂದರಶಾಲಿಯಾದ ಈ ಬಾಲಿಕಾಮಣಿಯನ್ನು ಕೊಟ್ಟು, ವಿವಾಹಮಾಡುವುದು ಸರಥಾ,ಅಯೋಗ್ಯ ವಾದ ಕಾರವೇ ಸರಿ ಎಂದು ಗಟ್ಟಿಯಾಗಿ ಕೂಗಿ ಹೇಳಿ, ಸುಲ್ತಾನನು ಮಾಡಿದ ಅವಿವೇಕವಾದ ಕಾರಣವನ್ನು ಬಹುವಾಗಿ ನಿಂದಿಸಿದರು. ಕೂಡಲೆ, ಅಲ್ಲಿ ನೆರೆದಿದ್ದ ಸಭಾಸದರೆಲ್ಲರಿಗೂ ಸಂತೋಷವಾಗುವಂತೆ, ಆವರನನ್ನು ನಿಂದಿಸಿ, ತಮ್ಮ ಕೈಲಾದಮಟ್ಟಿಗೂ ಹೇಳನವಾಗಿ ಅದನ್ನೆ ಮದುವೆಯ ವಿನೋದವನ್ನಾಗಿ ಮಾಡಿದರು. ಅದೇರೀತಿಯಲ್ಲಿ ವಾದ್ಯಗಳು ಸ್ವಲ್ಪ ಹೊತ್ತು ನಿಶ್ಯಬ್ದವಾಗಿದ್ದು ಮತ್ತೆ ಎಂದಿನಂತ ಮೊಳಗಲಾರಂಭಿಸಿದವು, ವಧುವಿಗೆ ಅಲಂಕಾರಮಾಡಿದ ಸಿಯರು, ಆಕೆಯ ಬಳಿಗೆ ಬಂದು ನಿಂತು ಕೊಂಡರು ಎಂದು ಹೇಳಿ ಮಕರಜಾದಿಯು ಬೆಳಗಾದುದನ್ನು ಕಂಡು ಕಥೆ ಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಮತ್ತೆ ಹೇಳಲಾರಂಭಿಸಿದಳು,