ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೭೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೪೬) ಅರೇಬಿರ್ಯ ನೈಟ್ಸ್ ಕಥೆಗಳು, ೩೬೯ ಆ ! ನಿಜವಾಗಿಯೂ ನಿನ್ನ ರಾತ್ರಿ ನನಗೆ ಕರೆನಗರದಲ್ಲಿ ವಿವಾಹವು ಜರಗಿತಲ್ಲಾ ! ಎಂದು ಹೇಳಿದನು. ಆ ಮಾತನ್ನು ಕೇಳಿ ಅವರು ಮತ್ತಷ್ಟು ನಕ್ಕು ಅಯಾ ? ನೀನು ಹೇಳುವುದೆಲ್ಲ ಸುಳ್ಳು ನೀನು ಮನೋರಾಜ್ಯದಲ್ಲಿ ಮತ್ತನಾಗಿರುವಂತೆ ತೋರುವುದು, ಬಿಡು ! ನಿನ್ನ ಈ ಮುತ್ತನ್ನು ತೊರೆದು ತಿಳುವಳಿಕೆಯಿಂದ ಮಾತನಾರಂದು ಹೇಳಿದರು, ಅಯ್ಯಾ ; ತಿಳಿದ ಮಾತ ನಾಡುತ್ತಿರುವೆನು. ಕೈರಾಜ್ಯದಲ್ಲಿ ನನ್ನನ್ನು ಮದುವೆಮಾಡಿಕೊಂಡ ಹುಡುಗಿ ಏಳುಸಾರಿ ಉಡುಪುಗಳನ್ನು ಬಟ್ಟೆಗಳನ್ನು ಧರಿಸಿಕೊಂಡು, ನನ್ನ ಮುಂದೆ ಬಂದುದೂ, ಕುರೂಪಿಯಿತಾದ ಪುರುಷನಿಗೆ ಅವಳನ್ನು ಕೂಡ ಬೇಕಂದಿದ್ದು, ಆದರೂ ನನ್ನ ಅದೃವ್ಯದಿಂದ ಆ ಹುಡುಗಿಯನ್ನು ಕಟ್ಟು ವಿವಾಹಮಾಡಿದುದೂ, ನನ್ನ ಉಡುಪುಗಳನ್ನು ಸಕ್ರಿ೯ಸುಗಳ ಚೀಲವನ್ನು ತಗದು ಒಂದು ಕುರ್ಜಿಯಮೇಲಿಟ್ಟು ನಾನು ಮಂಚದಲ್ಲಿ ಮಲಗಿಕೊಂಡುದೂ ಸಹ ಸ್ವಪ್ನದಲ್ಲಿ ಹೇಗೆ ಪ್ರತ್ಯಕ್ಷವಾದೀತು, ನೀವೇ ಯೋಚಿಸಿ. ಈಗ ನಾನುಹೇಳಿದ ಸಂಗತಿಗಳೆಲ್ಲವೂ ನಿಜವಾಗಿಯೂ ಸತ್ಯ ಎಂದು ಆತನು ಎಷ್ಟು ಹೇಳಿದಾಗ ಜನಗಳಿಗೆ ನಂಬಿಕೆಯುಂಟಾಗದೆ, ಮತಮ್ಮ ನಗಲಾರಂಭಿಸಿದರು. ಅದನ್ನು ನೋಡಿ ಬೆದರೋದೀನನು ಸಂದೇಹಯುಕ್ತನಾಗಿ ತಾನು ಇದುವರೆಗೂ ಅನುಭವಿಸಿದುದು ನಿಜವೂ ಅಥವಾ ಸುಳೊ ಕಾಣೆನಲ್ಲಾ! ಎಂದು ಚಿಂತಿಸುತ್ತಿದ್ದನೆಂದು ಹೇಳಿ, ವಹರಜಾದಿ ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಿವದಲ್ಲಿ ಹೇಳಲಾರಂಭಿಸಿದಳು. - ೧೦೫ ನೆಯ ಅತಿ , ಕಥೆ, ಕಲೀಫರೇ ! ಬಳಕ ಬದರಿದೀನನು, ಅಯಾ ! ನಾನಿದು ವರಿಗಹೇಳಿದ ಸಂಗತಿಗಳಲ್ಲವೂ, ವಾಸ್ತವವಾದವುಗಳೇ ಎಂದುಹೇಳುತ್ತಾ ಬೀದಿಯಲ್ಲಿ ಹೋಗುತ್ತಿರುವಾಗ, ಊರಿನವರೆಲ್ಲರೂ ಬಂದು ಆತನನ್ನು ನೋಡುತ್ತಾ, ಓ ಹುಚ್ಚಾ ! ಎಲೆ ಮರುಳಾ ! ಎಂದು ಕೂಗಲಾರಂಭಿಸಿ ದರು. ಅದರಲ್ಲಿಯೂ ಕೆಲವರು ಆತನನ್ನು ಬಿಡದೆ ಬೆನ್ನುಹತ್ತಿ ಬಾಧಿಸು ಕ್ರಿದ್ದರು. ಹೀಗಿರುವಲ್ಲಿ ಬದರೋಡೀನನ್ನು, ಒಂದಾನೊಂದು ರೊಟ್ಟಿ ಯಂಗಡಿಯ ಬಳಿಗೆಬಂದು, ತನ್ನನ್ನು ಬೆನ್ನತ್ಮಿಬಂದಿರುವ ಜನರನ್ನು