________________
೩೭೪ ಯವನ ಯಾಮಿನೀ ವಿನೋದ ಎಂಬ, ಆ ಏಜೇಬನು ಬಹಳ ಹೊತ್ತಿನವರಿಗೆ ಅಳುತ್ತಿದ್ದು, ಮನೆಗೆ ಹೋದಕೂಡಲೆ ಅವನ ತಾಯಿಯು ತನ್ನ ಮಗನು ಅತ್ತಿರುವಂತೆ ಕಾಣುವುದು ಏತಕೊ ವಿಚಾರಿಸಬೇಕೆಂದು ಆತನಬಳಿಗೆ ಬಂದು, ಮಗು ! ನೀನು ಬಹಳವಾಗಿ ರೋದಿಸಿರುವಂತೆ ತೋರುತ್ತಿದೆ ಏತಕ್ಕೆ ? ಎಂದು ಕೇಳಲು, ಆತನು ತಾನು ಓದುವ ಶಾಲೆಯಲ್ಲಿ ಕೇಳದ ಸಂಗತಿಗಳನ್ನೆಲ್ಲ ಸ್ಪಷ್ಟವಾಗಿ ತಿಳಯಹೇಳಿ, ಅಮಾ ! ನನ್ನ ತಂದೆ ಯಾರು ? ಎಂಬುದನ್ನು ನನಗೆ ದಯಮಾಡಿ ತಿಯ ಹೇಳೆಂದು ಕೇಳಲು, ಆಕೆಯು ಮಗನನ್ನು ನೋಡಿ, ಅಬ್ಬಾ ! ಸದಾ ಸಂತೋಷದಿಂದ ನಿನ್ನನ್ನು ಪರಿಪಾಲಿಸುತ್ತಿರುವ, ವಂಸುದೀನಮಹಮ್ಮದನೇ ನಿನ್ನ ತಂದೆ ಎಂದು ಹೇwದಳು. ಆಗ ಬಾಲಕನು ಅಮಾ ! ನೀನು ನಿಜ ವನ್ನು ಹೇಳಲಿಲ್ಲ, ಆ ಸುದೀನ ಮಹಮ್ಮದನು, ನಿನ್ನ ತಂದೆಯೇ ಹೊರತು, ನನ್ನ ತಂದೆ ಎಂದಿಗೂ ಅಲ್ಲ, ಚೆನ್ನಾಗಿ ತಿಂದು ಹೇಳೆನಲು, ಆ ಸೌಂದರವತಿಯು, ತನ್ನ ನಿಷಿಕದ ದಿನವನ್ನು ನೆನೆದು ಆಹಾ ! ಮೋಹ ನಾಂಗನಾದ ಪಣ ಣಕಾಂತನು, ನನ್ನನ್ನು ತೊರೆದು ಹೋದನು, ಆದರೂ ಇದುವರಿಗೂ, ಆತನ ವಿಷಯವೇ ನನಗೆ ತಿಯಲಿಲ್ಲವಲ್ಲಾ ! ಎಂದಂದು ಕೊಂಡು, ದುಃಖಪಡುತ್ತಿದ್ದಳು. ಹೀಗೆ ಸೌಂದರವತಿಯ, ಆ ಏಜೇಬನ, ಅಳುತ್ತಿರುವ ವರ್ತಮಾನವನ್ನು ಕೇಳಿ, ಮಂತ್ರಿ ಯು ಆತನ ಬಳಿಗೆ ಬಂದು, ನಡೆದ ವರ್ತಮಾನಗಳನ್ನು ಮಗಳ ಮುಖದಿಂದಲೆಕೇಳಿ, ತಾನು ವ್ಯಸನಾಕ್ತಾಂತ ನಾಗಿ, ಆಹಾ ! ನನ್ನ ಮಗಳ ವಿಚಾರದಲ್ಲಿ ಪ್ರಜೆಗಳು ಆಡಿಕೊಳ್ಳುವ ನಾನಾ ವಿಧ ಮಾತುಗಳನ್ನು ಕೇಳಲಾರದೆ, ಕೊರಗುತ್ತಿದ್ದನು. ಇನ್ನು ಸ್ವಲ್ಪ ಹೊತ್ತಿನಮೇಲೆ, ಮಂತ್ರಿಯು ಸುಲ್ತಾನನಬಗೆ ಹೋಗಿ, ನನ್ನ ಮಗಳು ರಾಕ್ಷಸನನ್ನು ಮದುವೆಯಾಗಿ, ಮಗನನ್ನು ಹೆತ್ತಳೆಂದು ಮಾತನಾಡಿಕೊಳ್ಳು ತಿರುವುದನ್ನು ನೋಡಿ, ನಾನು ಸಹಿಸಲಾರೆನು, ಆದುದರಿಂದ ತಾವು ದಯಮಾಡಿ ನನ್ನ ತಮ್ಮನ ಮಗನಾದ, ಬದರೋದೀನನು ಹುಸೇನನನ್ನು ಹುಡುಕಿಕೊಂಡು ಬರುವುದಕ್ಕಾಗಿ, ಅಪ್ಪಣೆ ಕೊಡಬೇಕೆಂದು ಬೇಡಿಕೊಂ ಡನು, ಸುಲ್ತಾನನು ಮಂತ್ರಿಗೆ ಉಂಟಾಗಿರುವ ವ್ಯಸನಕ್ಕಾಗಿ, ತುಂಬ ಆತ್ಮರಯುಕ್ತನಾಗಿ, ಆತನಿಖ್ಯಾನುಸಾರವಾಗಿ, ದೇಶಾಂತರಕ್ಕೆ ಹೋಗಿ ಬರುವುದಕ್ಕೆ ಅಪ್ಪಣೆಯನಿತ್ತು, ಏಜೇಬನ ತಂದೆಯಾದ ಬದರೋಡೀನನು