________________
೩೯ ಯವನ ಯಾಮಿನೀ ವಿನೋದ ಎಂಬ, ಮಾಡಿದವನು ನನ್ನ ಮಗನೇ ಸರಿಯೆಂದು ನಾನು ಖಂಡಿತವಾಗಿ ಹೇಳುವ ನಂದಳು. ನಾವು ಬಹುದಿನಗಳಿಂದ ಹುಡುಕುತ್ತಿದ್ದರೂ, ನಮ್ಮ ಕ್ರಮವು ಸಾರ್ಥಕವಾಗದೆ ಹೋಗಿ ಈಗ ಮಾತ್ರ ಅತ್ಯುತಾಹ ಉಂಟಾಗುವಂತಿದೆ. ಅವ ! ಹೇಗಾದರೂ ಮಾಡಿ, ಇದರ ಕೂಲಂಕಷವನ್ನು ವಿಚಾರಿಸಲೇ ಬೇಕು. ಇದಕ್ಕಾಗಿ ನಾವು ಮಾಡಬೇಕಾದುದೇನಂದರ : ನಿನಗೂ, ನನ್ನ ಮಗಳಿಗೂ, ಬದರೋದೀನನ ಗುರುತು ಚೆನ್ನಾಗಿ ತಿಳಿದಿರುವುದರಿಂದ, ಆತ ನನ್ನು ನೋಡಿದ ಕಡಲೆ ಹೌದು ಅಲ್ಲವೆಂಬುದನ್ನು ಹೇಳಬಲ್ಲಿರಿ, ಆದುದ ರಿಂದ ನೀವು ಅವರನ್ನು ನೋಡುವಂತ ಅಡಗಿಕೊಂಡಿರಿ, ಏತಕ್ಕಂದರೆ :ಆತನು ನಿನ್ನನ್ನು ನೋಡದಂತೆ, ನಾನು ಎಚ್ಚರಿಕೆಯಿಂದ ನೋಡಿಕೊ ಭುವನು, ಈ ಸ್ಥಲದಲ್ಲಿ ನಾವುಗಳು ಇಂಥವರೆಂದು ಒಬ್ಬರಿಗೊಬ್ಬರು ಕಲೆಯುವುದಕ್ಕನುಕೂಲವಾಗಿದ್ದರೂ, ನನಗದು ಇನ್ಮವಿಲ್ಲ. ನಾವು ಕರೋ ನಗರದ ಸಾರವನ್ನು ಸೇರಿದಾಗ, ನಾವಿಂಥನ ರಂದು ತಿಸಿ, ನಿಮ್ಮ ಗಂಗ ಸಂಘಷವನ್ನುಂಟುಮಾಡುವೆನೆಂದು ಹೇಳಿ, ಅಲ್ಲಿಂದ ಹೊರಟು, ತನ್ನ ಗುಲಾಮರನ್ನು ಸೇರಿ, ಎಂಟುಜನ ಸೇವಕರನ್ನು ಕರೆದು, ಅಯಾ ! ನೀವುಗಳು, ಈ ಊರಿನಲ್ಲಿ ಮಿಠಾಯಿಯಂಗಡಿಯವನ ಬಳಿಗೆ ಹೋಗಿ, ಆತನಬಳಿಯಲ್ಲಿರುವ ಪದಾರ್ಥಗಳನ್ನು ಹೊಡೆದು ಚೂರು ಚೂರು ಮಾಡುತ್ತಿರಿ, ಆಗ ಆತನು ಏತಕ್ಕೆ ಹೀಗೆ ಮಾಡುತ್ತಿರುವಿರೆಂದು ಕೇಳಿದರೆ, ನಮ್ಮಗಳಿಗ ಮಿಠಾಯಿಯನ್ನು ಕೊಟ್ಟು ಕಳುಹಿಸಿದವನು ನೀನೆ ? ಹೌದು ನಾನೇ ಆತನೆಂದು ಹೇಳಿದರೆ, ಆತನನ್ನು ಹಿಂಸೆ ಮಾಡ ದಂತ ಜೋಪಾನದಿಂದಿಲ್ಲಿಗೆ ಕರೆದುಕೊಂಡು ಬನ್ನಿರೆಂದು ಹೇಳಿ, ಅವರನ್ನು ಕಳುಹಿಸಿದನು. ಆ ಚಾರಕರು, ಅಲ್ಲಿಂದ ಹೊರಟು ಆ ಖೋಜಾ ಸರದಾರ ನನ್ನು ಹಿಂದೆಹಾಕಿಕೊಂಡು, ಬದಾದೀನನ ಅಂಗಡಿಗೆ ಬಂದು, ಅಲ್ಲಿರುವ ಪದಾರ್ಥಗಳನ್ನೆಲ್ಲ ಒಡೆದು ಚೂರು ಚೂರು ಮಾಡುತ್ತಿರಲು, ಬದರೋ ದೀನನು ಆಯಾ ! ನೀವು ಹೀಗೆ ನನ್ನ ಪದಾರ್ಥಗಳನ್ನೆಲ್ಯಾ ಏತಕ್ಕೆ ಒಡೆದುಹಾಕುತ್ತಿರುವಿರಿ, ನಾನು ಅಂತಹ ಅಪರಾಧವನ್ನೇನೂ ಮಾಡಿದವನಲ್ಲ ವಾ! ಎಂದು ಹೇಳಲು, ಚಾರಕರು ಅವನನ್ನು ನೋಡಿಮಿಠಾಯಿ ಯನ್ನು ಮಾಡಿ ಗುಡಾರಕ್ಕೆ ಕಳುಹಿಸಿದವನು ನೀನೆ ಎಂದು ಕೇಳಿದರು,