ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯೭ ಅರೇಬಿರ್ಯ ನೈಟ್ಸ್ ಕಥೆಗಳು, ೧೨೧ ನೆಯ ರಾತಿ ) ಕಥೆ. ಷಹರವಿಯು ತನ್ನ ಪ್ರಾಣಕಾಂತನನ್ನು ಕುರಿತು, ಪ್ರಿಯರೇ ! ಗಯಫರನು ಹೇಳುತ್ತಿರುವ ಕಥೆಯನ್ನು ಅತ್ಯಾದರದಿಂದ ಕೇಳುತ್ತಾ, ವಿನೋದಚಿತರಾಗಿ, ಮಂತ್ರಿಯನ್ನು ಕುರಿತು, ಕಥೆಯನ್ನು ಮುಂದೆ ಸಾಗುವಂತೆ ಮಾಡೆಂದು ಹೇಳಿದುದರಿಂದ, ಗಯಥರನು ಇಂತಂದನು. ಸಂಸುರ್ದಿನನು ತನ್ನ ಚಾರಕರ ಮೂವರನ್ನು ಮಾತ್ರ ನಿಲ್ಲುವಂತೆ ಆಜ್ಞಾಪಿಸಿ, ಉಳಿದವರನ್ನು ಅಪ್ಪಣೆಕೊಟ್ಟು ಕಳುಹಿಸಿ, ಆ ನವ ರನ್ನು ಕರೆದು ನೀವು ಆ ಪೆಟ್ಟಿಗೆಯಲ್ಲಿರುವ, ಬದರೋದೀನನಿಗೆ ಉತ್ತಮ ವಾದ ವಸ್ಯಗಳನ್ನು ಹಾಕಿಸಿ ಅವನನ್ನು ನನ್ನ ಮಗಳ ಅಂತಃಪುರದ ಇದಿರಿನಲ್ಲಿ ರು, ಹಜಾರದಲ್ಲಿ ಬಿಡಿರೆಂದು ಹೇಳಲು, ಕೂಡಲೆ ಆ ಚಾರಕರು ಉತ್ತಮವಾದ ರಸಭರಣಗಳನ್ನು ತೆಗೆದುಕೊಂಡುಬಂದು, ಆ ಪಟ್ಟಿಗೆ ಯನ್ನು ತೆರೆದು ನೋಡುವ, ಬದರೋದೀನನು ವ್ಯಸನಾಕಾಂತನಾಗಿ ದರ, ಸುಖವಾಗಿ ನಿದ್ದೆ ಮಾಡುತ್ತಿದ್ದನು. ಆಗ ಆ ಚಾರಕರು, ಆತ ನನ್ನು ಎಚ್ಚರಗೊಳಿಸಿ, ಮಂತ್ರಿಯ ಆಜ್ಞೆಯಂತೆ ಅಂಗಿಯನ್ನೂ ಸರಾಯಿಯನ್ನೂ ಕೂಡಿಸಿ, ಅವನನ್ನು ಸಂಗಡ ಕರೆದುಕೊಂಡುಬಂದು ಮಂತ್ರಿಪುತ್ರಿಯ ಮಂದಿರದಮುಂದಿರುವ ಹಜಾರದಲ್ಲಿ ಬಿಟ್ಟು, ಬಾಗಿಲನ್ನು ಮುಚ್ಚಿಕೊಂಡು ಹೊರಟುಹೋದರು. ಬಳಿಕ ಬದರದೀನನು ಆ ಹಜಾರವನ್ನು ಚೆನ್ನಾಗಿ ನೋಡಿ, ಅಲ್ಲಿ ಮಾಡಿರುವ ಅಲಂಕರವನ್ನು ಕಂಡಕೂಡಲೆ, ತನ್ನ ಮದುವೆಯ ದಿನ ವನ್ನು ನೆನೆದುಕೊಂಡು, ಇದಿರಿಗಿರುವ ಕೊಠಡಿಯ ಬಾಗಿಲು ತೆರೆದಿದ್ದು ದ ರಿಂದ, ಒಳಹೊಕ್ಕು ನನ್ನ ವಿವಾಹದ ದಿನದಲ್ಲಿ ಅಲಂಕರಿಸಿದಂತೆಯೇ ಇರುವ ಕೊಠಡಿಯನ್ನು, ತನ್ನ ಉಡುಪುಗಳು ತಾನಿಟ್ಟ ಸ್ಥಲದಲ್ಲಿಯೇ ಇರುವುದನ್ನು ನೋಡಿ, ಮಹದಾನಂದಭರಿತನಾಗಿ, ಅಯೋ! ದೇವರೇ ! ಇದೇನು ? ನಾನು ನಿದ್ದೆ ಹೋಗುತ್ತಿರುವನೊ, ಇಲ್ಲವೆ ಎಚ್ಚರದಿಂದಿರು ವೆನೋ, ನನಗೇ ತಿಳಿಯದ ! ಈ ಮನೆಯನ್ನು ನೋಡಿ ನನಗೆ ಆಶ್ಚ. ರವಾಗುತ್ತಿದೆಯಲ್ಲಾ ! ಎಂದು ಹೇಳಿದನು. ಆಗ ಆ ಸೌಂದರವತಿಯು ಬದನನು ಆಸ್ಟ್ರ ಪಡುತ್ತಿರುವುದನ್ನು ನೋಡಿ, ತೆರೆಯನ್ನು