ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8 ಯವನ ಯಾಮಿನೀ ವಿನೋದ ಎಂಬು, ಯವನಿಂದಪ್ಪಣೆಯನ್ನು ಪಡೆದು, ಇಂತಹ ಸೈಲಕ್ಕೆ ಹೋಗುತ್ತೇನೆಂದು ಹೇಳದೆ ಹೊರಟನು. ಹಾಗೆ ಹೋಗುತ್ತಿರುವಾಗ, ಯಾರೋ ನನ್ನನ್ನು ಹಿಂದಕ್ಕೆಳದಂತಕಂಡಿತು. ಕೂಡಲೆ ನಾನು ಹಿಂದಿರುಗಿನೋಡಲು ಆ ಬಾಲಿಕಾ ಮಣಿಯದಾದಿಯು ನಿಂತಿರುವದನ್ನು ಕಂಡು, ವಿಸ್ಮಯವನ್ನು ಹೊಂದಿದೆನು. ಆಗ ಆಕೆಯು ನನ್ನನ್ನು ನೋಡಿ ಅಯಾ ! ನೀನು ಈದಿನ ಮಾತನಾಡು ತಿದ್ದ, ಲಲನಾಮಣಿಯು ನಿಮ್ಮ ಸಂಗಡ ಏನೂ ಮಾತನಾಡಬೇಕೆಂದು, ಅಪೇಕ್ಷಿಸುತ್ತಿರುವುದರಿಂದ, ತಾವು ದಯಮಾಡಿ, ನನ್ನ ಸಂಗಡ ಬರಬೇ ಕಂದು ನುಡಿದಳು. ನಾನು ಅವಳ xಂದೆ ಹೋದನು. ಅಲ್ಲಿ ಕುಳಿತಿದ್ದ ಬಾಲಿಕಾ ಮಣಿಯು, ನನ್ನನ್ನು ನೋಡಿ, ಹತ್ತಿರ ಕುಳ್ಳಿರಿಸಿಕೊಂಡು, ಬಾಣ ನಾಥಾ ! ನಾನು ನಿನ್ನ ನ್ನು ಅಗಲಿ ಕೋಪದಿಂದ ಹೊರಟುಬಂದೆನೆಂದು, ನೀನೆಂದಿಗೂ ತಿಂಯಬೇಡ, ಮನೆಂದರೆ : ನಿನ್ನಲ್ಲಿ ನನಗೆ ಮೋಹ ಉಂಟಾಗಿರುವುದೆಂದು, ನೀನು ಹೇಳಿದ ಮಾತಿಗೆ ಪ್ರತ್ಯುತ್ತರವನ್ನು ಆ ವರ್ತಕನೆದುರಿಗೆ ಹೇಳುವುದು ಸರಿಯಲ್ಲ ಎಂದು, ನಾನು ಹೊರಟುಬಂದೆನು. ತಾವು ಆಡಿದಮಾತಿನಿಂದ ನನಗೆ ಸಂತೋಷವೇ ಹೊರತು ಕೋಪವೆಂದಿಗೂ ಇಲ್ಲ. ಅಲ್ಲದೆ ನಿಮ್ಮನ್ನು ನಿನ್ನೆ ದಿನ ಅಂಗಡಿಯಲ್ಲಿ ನೋಡಿದಾಗಲೆ, ನನ್ನ ಎದೆ ಕರಗಿಹೋಯಿತು. ನಂತರ ನೀವುಮಾಡಿದ ಸನ್ಮಾನವು, ಆಡಿದವರೂ, ಸಹ ನನ್ನ ಮೋಹ ವನ್ನು ಬಹಿರಂಗಪಡಿಸುವುದಕ್ಕಾರಂಭಿಸಿ, ತುಂಬ ತೊಂದರೆಯನ್ನುಂಟು ಮಾಡಿದವು. ಅದನ್ನು ನಿಗ್ರಹಿಸಬೇಕೆಂದು, ನಾನು ರಾತ್ರಿಯೆಲ್ಲಾ ಸಂತೆ ಸಲ್ಪಟ್ಟರೂ, ಆಗದೆಹೋದುದರಿಂದ, ಮರಳಿ ನಿಮ್ಮ ಸಂದರ್ಶನಾರನಾಗಿ ಬೆಳಿಗ್ಗೆ ಎದ್ದು ಬಂದೆನು, ಈಗ ನಿಮ್ಮನ್ನು ನೋಡಿದಕೂಡಲೆ, ಆ ನನ್ನ ಮೊಹವು ಹೊರಹೊಮ್ಮಿತೆಂದು ಹೇಳಿ, ಇದರಿಂದ ನನಗುಂಟಾಗಿರುವ, ವೆ ಮಾತಿಶಯವಿಂಥದೆಂಬುದನ್ನು ನೀನು ತಿಳಿದುಕೊಳ್ಳಬಹುದೆಂದು, ನುಡಿದಳು, ಆಗ ನಾನು ಮೋಹಪರವಶನಾಗಿ, ಈಗ ನೀನು ಹೇಳಿದುದ ಕ್ಕಿಂತಲೂ, ಆನಂದಕರವಾದ ಸಂಗತಿ ಮತ್ತೊಂದು ಇಲ್ಲ. ನಾನು ನಿನ್ನ ಸುಂದರಾವಯವಗಳನ್ನು ನೋಡಿದಕೂಡಲೆ, ಪಂಚಬಾಣನಾದ ಮನ್ಮಥನು ಲಕ್ಷಬಾಣಗಳಿಂದ ನನ್ನನ್ನು ಪೀಡಿಸಿದನು. ಅದರ ವಿವರವನ್ನು ವಿಸ್ತರಿಸಿ