ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೩v ಇವನ ಯಾಮಿನೀ ವಿನೋದ ಎಂಬು, ೧೪೩ ನೆಯ ರಾತಿ ಕಥೆ. ಸಹರಜಾದಿಯು ಸುಲ್ತಾನರನ್ನು ಕುರಿತ ಇಂತೆಂದು ನುಡಿಯ ತೊಡಗಿದಳು, ಆ ವರ್ತಕರಬಳಿಗೆ ನಾನು ಹೋದಾಗ ಇಂದಿಗೆ ಎಂಟುದಿನ ದಲ್ಲಿ, ನಿಮ್ಮ ಹಣವನ್ನು ಕೊಡುವೆನೆಂದು, ನಮಾಧಾನ ಮಾಡಿಕೊಂಡಿದ್ದೆನು. ಅದರಂತ ಅವರು, ಎಂಟುದಿನಗಳಿಗೆ ಬಂದು ಹಣವನ್ನು ಕೇಳಲು, ಇನ್ನೂ ಎಂಟುದಿನಗಳ ವಾಯಿದೆಯನ್ನು ಹೇಳಿಕೊಂಡೆನು. ಆದುದರಿ ದ ಅವರು ಸಮ್ಮತಿಸಿ ಹೊರಟುಹೋದರು. ಆದರೆ ನಾಲ್ಕು ದಿನಗಳ ಬಳಿಕ ಆ ಸುಂದ ರಾಂಗಿಯು ಮೊದಲಿನಂತೆ ಇಬ್ಬರು ನಪುಂಸಕಸೇವಕರೊಡನೆ ಕುದುರೆಯ ಬರುತ್ತಿರುವುದನ್ನು, ನಾನು ಅಂಗಡಿಯಲ್ಲಿ ಕುಳಿತುಕೊಂಡಿರುವಾಗಲೆ ಕಂಡೆನು. ಆ ಸುಂದರಿಯು ನನ್ನ ಬಳಿಗೆಬಂದು, ಬಹು ಆಲಸ್ಯವಾಯಿ ತಂದು ಬೇಜಾರುಪಡಬೇಡ ಇಗೊ ! ನಿನ್ನ ಸರಕುಗಳ ಹಣವನ್ನು ತಗೆದುಕೊಂಡು, ನಾಣವನ್ನು ನೋಡಿಕೊ, ಎಂದು ಹೇಳಿ, ತನ್ನ ಸೇವ ಕನಬಳಿಯಲ್ಲಿದ್ದ ಹಣದ ಗಂಟನ್ನು ಕೊಡಲು, ನಾನು ಅದನ್ನು ತೆಗೆದು ಕಂಡುಹೋಗಿ, ಸರಾವನಿಗೆ ತೋರಿಸುವ ನಾಣಗಳೆಲ್ಲವೂ ಉತ್ತಮ ಗಳಾಗಿದ್ದುವು. ಆ ಸುಂದರಿಯು ಮೊದಲದಿನದಂತೆ, ಇತರ ವರ್ತಕರು ಬಂದು ಅಂಗಡಿಯಲ್ಲಿ ವ್ಯಾಪಾರನಡಿಸುವವರೆಗೂ, ನನ್ನ ಅಂಗಡಿಯಲ್ಸ್ ಕುಳಿತುಕೊಂಡಿದ್ದಳು. ನಾವು ಕೆಲವು ಕಾಲ ವಿನೋದವಾಗಿ, ಮಾತನಾ ಡುತ್ತಿದ್ದೆವು.ಸಾಮಾನ್ಯ ವಿಷಯದಲ್ಲಿ ನಾನು ಚರ್ಚಿಸುತ್ತಿದ್ದರೂ, ಆಕೆಯ ಮುದ್ದು ಮುಖದಿಂದ ಹೊರಟುಬರುವ, ಆ ಮಾತುಗಳು ನನಗೆ ಉಲ್ಲಾಸ ಕರವಾಗಿದ್ದುದರಿಂದ, ಅತಿಶಯವಾದವುಗಳೆಂದು ಭಾವಿಸಿ, ಆಕೆಯ ವಾಕ್ ಚಾತುರ್ಯವನ್ನು ಬಹಳವಾಗಿ ಕೊಂಡಾಡಿದನು. ಬಳಿಕ ಸ್ವಲ್ಪಹೊತ್ತು ಹೋದಮೇಲೆ ಅವರವರ ಅಂಗಡಿಗೆ ಕೊಡ ಬೇಕಾಗಿದ್ದ ಹಣವನ್ನು ಸಲ್ಲಿಸಿ, ಮರಳಿ ಆಕೆಗೆ ಬೇಕಾಗಿದ್ದ ಸರಕುಗಳನ್ನು ತಂದುಕೊಟ್ಟನು. ಬಹ.ಮಾತುಗಳಿಂದ ಪ್ರಯೋಜನವೇನು ? ಆಕೆಯು ಒಂದುಸಾವಿರ ರೂಪಾಯಿಗಳ ಸರಕನ್ನು ತೆಗೆದುಕೊಂಡು ಹೊರಟು ದಳು, ಆದುದರಿಂದ ನಾನು ಮೊದಲಿನಂತೆ ಮೋಸಹೋದೆನೆಂದುಕೊಂಡು