ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

82v ಯವನ ಯಾಮಿನೀ ವಿನೋದ ಎಂಬು, ಆತನಬಳಿಯಲ್ಲಿ ರಾಜವೈದ್ಯನಾಗಿದ್ದು, ಆತನು ಗತಿಸಿಹೋದಮೇಲೆ, ದೇಶ ಸಂಚಾರ ಮಾಡಬೇಕೆಂಬ ಅಭಿಲಾಷೆಯಿಂದ, ನಾನಾದೇಶಗಳನ್ನು ತಿರುಗಿ, ನಿನ್ನ ರಾಜ್ಯಕ್ಕೆ ಬಂದು, ಬಹು ಗೌರವವಾಗಿ ವೈದ್ಯವಾಡುತ್ತಿರುವೆನೆಂದು ಹೇಳಲು, ರಾಜನು ಸಂತುಷಾಂತರಂಗನಾಗಿ, ಅಯಾ! ನೀನು ಹೇಳಿದ ಕಧಯು, ವಿಚಿತ್ರವಾದುದೇನೋ ಹೌದು, ಆದರೆ ಈ ಕುಬ್ಬನ ಚರಿತ್ರೆಗೆ ಎಂದಿಗೂ ಸಮವಾಗಲಾರದುದರಿಂದ, ನಿನ್ನ ನಾ ಣವೆಂದಿಗೂ ಉಳಿಯಲಾ ರದು, ನಿವಿಾನಾರನ್ನು ಗಲ್ಲಿಗೆಹಾಕಿಸುವೆನೆಂದು ಹೇಳಲು, ಅಮ್ಮರಾಯ ದರ್ಜೆಯವನು ರಾಜನಮುಂದೆ ಬಂದು ನಮಸ್ಕಾರ ಮಾಡಿ, ಅಯಾ ! ಸ್ವಲ್ಪ ತಾಳು. ನಾನುನಿನ್ನೊಂದು ಕಥೆಯನ್ನು ಹೇಳಬೇಕಾಗಿರುವು ದೆಂದನು. ಬಳಿಕ ಕಾಸುಗಾರರಾದನು, ನೀನು ಹೇಳುವದನ್ನು ಹೇಳು. ಆದರೆ ಈ ಕುಬ್ಬನ ಚರಿತ್ರೆ ಗೆ ಸಮಾನವಲ್ಲದಿದ್ದರೆ, ನಿನ್ನ ನಾ ಣ ಎಂದಿಗೂ ಉಳಿಯಲಾರದೆಂದು ಹೇಳಲು, ಸಮಯೋಚಿತವಾದ ಉಪಾಯ ವನ್ನು ಚಿಂತಿಸಿ, ದಜಿಯವನು ಧೈರ್ಯದಿಂದ ಇಂತೆಂದನು : ದರ್ಜಿಯವನು ಹೇಳಿದ ಕಥೆ. ಎರಡುದಿನಗಳ ಕೆಳಗೆ, ಈವೂರಿನ ದೊಡ್ಡ ಮನುಷ್ಯನೊಬ್ಬನು ನನ್ನನ್ನು ತನ್ನ ಮನೆಗೆ ಔತನಕ್ಕೆ ಕರೆದುದರಿಂದ, ನಾನು ಬೆಳಗಾದಕೂಡಲೆ ಅಲ್ಲಿಗೆ ಹೋಗಿ, ಇಪ್ಪತ್ತು ಜನರು ನೆರೆದಿರುವುದನ್ನು ಕಂಡೆನು. ಮನೆಯ ಯಜಮಾನನು ಕಾರಾಂತರದಿಂದ, ಎರಿಗೋ ಹೋಗಿದ್ದು, ಸ್ವಲ್ಪ ಹೊತ್ತಿಗೆ ಸುಂದರನಾಗಿಯೂ, ಉತ್ತಮವಾದ ವಸ್ತ್ರಗಳಿಂದ ಅಲಂಕೃತ ನಾಗಿಯೂ, ಇರುವ ಒಬ್ಬ ಕುಂಟ ಹುಡುಗನನ್ನು ಸಂಗಡ ಕರೆದುಕೊಂಡು ಬಂದನು. ನಾವೆಲ್ಲರೂ ಆತನಿಗೆ ಮರಾದೆ ಮಾಡಿ, ಕರೆತಂದು ಬೆಂಚಿನ ಮೇಲೆ ಕುಳ್ಳಿರಿಸಿಕೊಂಡೆವು. ಆತನು ನನ್ನ ಬಳಿಯಲ್ಲಿ ಕುಳಿತಿದ್ದ ಒಬ್ಬಾ ನೊಬ್ಬ ಕೈರಕನನ್ನು ನೋಡಿ, ಹಿಂದೆಸರಿದು, ಬಾಗಿಲಬಳಿಗೆ ಹೋದನು. ಆಗ ಯಜಮಾನನು ಏನಯಾ ! ಎರಿಗೆ ಹೋಗುತಿಯೇ, ನನ್ನ ಸ್ನೇಹಿತರ ಜೊತೆಯಲ್ಲಿ ನಾನು ಮಾಡುವ ಔತನವನ್ನು ಸ್ವೀಕರಿಸಿ, ನನ್ನನ್ನು ಗೌರವಿಸಬೇಕಂಬ ಮರಾದೆ ನಿನಗಿಲ್ಲವೋ ? ನಾನು ನಿನ್ನನ್ನು ಬಹು ಮರಾದೆಯಿಂದ ಕರೆದುಕೊಂಡುಬಂದಿದ್ದರೂ, ನೀನು ಓಡಿಹೋಗುತ್ತಿರು ವೆಯಾ ? ಎಂದು ಕೇಳಿದನು. ಆಗ ಆ ಕುಂಟಹುಡುಗನ್ನು, ಆಯಾ !